ಆಕೆ ಹುಡುಗಿ… ಆದರೆ ಅವಳದ್ದು ವಿಚಿತ್ರ ಆಸೆ.. ಹುಡುಗನ ವೇಷದಲ್ಲಿ ಹುಡುಗಿಯರಿಗೆ ಕಿರುಕುಳ ನೀಡುವ ಕಯಾಲಿ ಆಕೆಯದ್ದು! ಒಬ್ಬಿಬ್ಬರಲ್ಲ ಬರೋಬ್ಬರಿ 50 ಮಂದಿ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪವನ್ನು ಆಕೆ ಎದುರಿಸುತ್ತಿದ್ದಾಳೆ.. ಅಪರಾಧ ಸಾಬೀತು ಕೂಡ ಆಗಿದೆ.. ಸದ್ಯ 8 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ.
ಹೌದು 16 ವರ್ಷದ ಯುವಕನಂತೆ ವೇಷ ಧರಿಸಿ 50ಕ್ಕೂ ಹೆಚ್ಚು ಮಂದಿ 13 ವಷದೊಳಗಿನ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಇಪ್ಪತ್ತೊಂದು ವರ್ಷದ ಯುವತಿಯನ್ನು ಬಂಧಿಸಲಾಗಿದೆ.
ಗೆಮ್ಮಾ ವಾಟ್ಸ್ ಎಂಬಾಕೆ ಬಂಧಿತ ಅಪರಾಧಿ. ದುರ್ಬಲ ಬಾಲಕಿಯರನ್ನೇ ಗುರಿಯಾಗಿಸಿಕೊಂಡು ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ 8 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ.
ಉತ್ತರ ಲಂಡನ್ನಿನ ಎನ್‌ಫೀಲ್ಡಿನಲ್ಲಿ ತಾಯಿಯೊಂದಿಗೆ ವಾಸವಿದ್ದ ವಾಟ್ಸ್, ಇನ್‌ಸ್ಟಾಗ್ರಾಂ, ಸ್ನಾಪ್ ಚಾಟ್ ಮುಖೇನ ಲೈಕ್ ಕೊಟ್ಟು ಸಂದೇಶಗಳನ್ನು ಕಳುಹಿಸಿ, ಅಡ್ಡ ಹೆಸರಿಟ್ಟು ಕರೆದು ಬಾಲಕಿಯರು ಸ್ನೇಹ ಬೆಳೆಸಿಕೊಂಡು, ಅವರನ್ನು ಭೇಟಿಯಾಗುವಾಗ ಉದ್ದನೆಯ ಕೂದಲನ್ನ ಮೇಲೆ ಕಟ್ಟಿ, ಕ್ಯಾಪ್ ಧರಿಸಿ ಜಾಕ್ ಎಂದು ನಂಬಿಸುತ್ತಿದ್ದಳೆಂದು ತಿಳಿದುಬಂದಿದೆ. ಬಾಲಕಿಯರು ಹುಡುಗನಾದ ನಿನಗೆ ಸ್ತನ ಇದೆಯಲ್ಲಾ ಎಂದು ಪ್ರಶ್ನಿಸಿದಾಗ ನನ್ನ ದೇಹದ ತೂಕ ಜಾಸ್ತಿ ಇದೆ ಹಾಗಾಗಿ ಸ್ತನ ಇದೆ ಎಂದು ಹೇಳುತ್ತಿದ್ದಳಂತೆ.
ಪೊಲೀಸ್ ವಿಚಾರವಣೆ ವೇಳೆ ತಮಾಷೆಗಾಗಿ ಆಟವಾಗಿ ಈ ರೀತಿ ಮಾಡುತ್ತಿದ್ದೆ ಎಂದು ಗೆಮ್ಮಾ ವಾಟ್ಸ್ ಹೇಳಿದ್ದಾಳೆ ಎಂದು ವರದಿಯಾಗಿದೆ.
50 ಮಂದಿಗೆ ಲೈಂಗಿಕ ಕಿರುಕುಳ ನೀಡಿದ್ದು ಅವನಲ್ಲ ಅವಳು!
Date: