ಡಿಸೆಂಬರ್ ೨೬ರಂದು ‘ಕಂಕಣ ಸೂರ್ಯಗ್ರಹಣ’ ಗೋಚರಿಸಲಿದೆ. ಸುಮಾರು ೫೦ ವರ್ಷಗಳಲ್ಲಿ ಇದೇ ಮೊದಲು ಕರಾವಳಿ ಭಾಗದಲ್ಲಿ, ಸುಮಾರು ೧೫೮ ಕಿ ಮೀ ವ್ಯಾಪ್ತಿಯಲ್ಲಿ ಈ ಸೂರ್ಯಗ್ರಹಣ ಗೋಚರಿಸುತ್ತಿದ್ದು, ಕರಾವಳಿಗರ ಪಾಲಿಗಿದು ವಿಶೇಷ.
ಬೆಳಗ್ಗೆ ೮.೦೬ ಕ್ಕೆ ಗ್ರಹಣ ಪ್ರಾರಂಭಗೊಳ್ಳಲಿದ್ದು ೯.೨೬ ಕ್ಕೆ ಮಧ್ಯ ಭಾಗಕ್ಕೆ ಬಂದು ೧೧.೦೪ಕ್ಕೆ ಅಂತ್ಯಗೊಳ್ಳಲಿದೆ. ಮೂರು ಗಂಟೆ ಇರಲಿದ್ದು ಉಳಿದೆಡೆ ಇದು ಪಾಶ್ವ ಸೂರ್ಯ ಗ್ರಹಣವಾಗಿರುತ್ತದೆ. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧಿಕಾರಿಗಳು ಹೇಳುವಂತೆ. ಕಂಕಣ ಸೂರ್ಯಗ್ರಹಣ ಸುಮಾರು ೫೦ ವರ್ಷಗಳಿಂದೀಚೆಗೆ ಗೋಚರಿಸುತ್ತಿದೆ. ಅದಕ್ಕೂ ಹಿಂದೆ ಗೋಚರಿಸಿದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ೨೦೨೦ರ ಜೂನಿನಲ್ಲಿ ಇನ್ನೊಂದು ಸೂರ್ಯಗ್ರಹಣ ನಡೆಯಲಿದ್ದು, ಇದು ದಕ್ಷಿಣ ಭಾರತೀಯರಿಗೆ ಕಂಕಣ ಸೂರ್ಯಗ್ರಹಣವಾದರೂ ಕರಾವಳಿಗರಿಗೆ ಪಾಶ್ವ ಸೂರ್ಯಗ್ರಹಣವಾಗಲಿದೆ. ಡಿ ೨೬ ರಂದು ನಡೆಯುವ ಸೂರ್ಯಗ್ರಹಣ ಶೇ ೯೩ರಷ್ಟು ಗೋಚರಿಸಲಿವೆಯಂತೆ.

ಗ್ರಹಣ ವೀಕ್ಷಣೆಗೆ ಪಿಲಿಕುಳದಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಪುಣೆಯ ಕುತ್ವಾಲ್ ನಿಂದ ೪೦೦ ಕನ್ನಡಕಗಳನ್ನು ತರಿಸಲಾಗಿದೆ. ಅಷ್ಟೇ ಅಲ್ಲದೆ ಪಿನಾಲ್ ಆಪರೇಟರ್ಸ್ ಮೂಲಕವೂ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಭೂಮಿಯ ಮೇಲೆ ಸೂರ್ಯನ ಬೆಳಕು ಕೆಲಕ್ಷಣ ಬೀಳದಂತೆ ಚಂದ್ರ ಅಡ್ಡ ಬಂದು ತಡೆದು, ಭೂಮಿಯಲ್ಲಿ ಕೆಲ ಪ್ರದೇಶಗಳಲ್ಲಿ ಕತ್ತಲು ಸೃಷ್ಟಿಯಾದರೆ ಸೂರ್ಯ ಗ್ರಹಣ. ಚಂದ್ರನ ಬಿಂಬವೂ ಸೂರ್ಯನ ಅಂಚನ್ನು ಮಾತ್ರ ಬಿಟ್ಟು ಉಳಿದೆಲ್ಲಾ ಭಾಗವನ್ನು ಸಂಪೂರ್ಣವಾಗಿ ಅವರಿಸಿಕೊಳ್ಳುವುದೇ ಕಂಕಣ ಸೂರ್ಯಗ್ರಹಣ.ಗ್ರಹಣದಿಂದಾಗುವ ಹವಾಮಾನ ವೈಪರೀತ್ಯದ ಪರಿಣಾಮ ಕರಾವಳಿಗಳಿಗೆ ಕಂಟಕ ಕಾದಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ವರ್ಷಾಂತ್ಯದಲ್ಲಿ ಹಲವೆಡೆ ಸುಮಾರು ಚಂಡಮಾರುತಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ವಿದೇಶಗಳ ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.






