60ರ ದಶಕದಲ್ಲೇ ದಲಿತರ ಕಾಲೋನಿಯಲ್ಲಿ ವಾಸ ಮಾಡಿದ್ದ ಬ್ರಾಹ್ಮಣ..! ಮುಂದೇನಾಯ್ತು?

Date:

ಡಾ.ಬಿಂದೇಶ್ವರ ಫಾಟಕ್. ಬಿಹಾರದ ರಾಂಪುರದವರು. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದವರು. ಇವರು ನಾಲ್ಕು ದಶಕಗಳ ಹಿಂದೆಯೇ ಸಾಮಾಜಿಕ ಬದಲಾವಣೆಗೆ ಶ್ರೀಕಾರ ಹಾಕಿದವರು. ಅಸ್ಪ್ರಶ್ಯತೆ, ಮಲಹೊರುವ ಪದ್ಧತಿಗಳ ವಿರುದ್ಧ ಹೋರಾಡಿದವರು. ಸುಲಭ ಶೌಚಾಲಯ ನಿರ್ಮಿಸಿ ಇಡೀ ಭಾರತವಷ್ಟೇ ಅಲ್ಲ, ಜಗತ್ತಿನ ಗಮನ ಸೆಳೆದವರು.

ಅಂದಹಾಗೆ ಡಾ.ಬಿಂದೇಶ್ವರ ಪಾಠಕ್ ಅವರು ಬಯಸ್ಸಿದ್ದು ಉಪನ್ಯಾಸಕ ವೃತ್ತಿಯನ್ನ, ಆದರೆ, ಸಿಕ್ಕಿದ್ದು ಶಿಕ್ಷಕ ವೃತ್ತಿ. 1967 ರಲ್ಲಿ ಸರ್ವೋದಯ ಸದಸ್ಯರಾದ ರಾಜೇಂದ್ರ ಲಾಲ್ ದಾಸ್ ಅವರು ಸಮಾನತೆ ಬಗೆಗಿನ ಗಾಂಧೀಜಿ ಕನಸನ್ನು ಪ್ರಸ್ತಾಪಿಸಿದರು. ಕೆಳಜಾತಿ, ದಲಿತರನ್ನು ಮೇಲೆ ತರಲು ಅವರನ್ನು ಶಿಕ್ಷಣವಂತರನ್ನಾಗಿಸಲು ಪ್ರೇರೇಪಿಸಿದರು. ಇದನ್ನು ಒಪ್ಪಿದ ಪಾಠಕ್, ತಾವು ಮೇಲ್ವರ್ಗದವರಾಗಿ ಬಿಹಾರದ ದಲಿತರ ಕಾಲೋನಿಯಲ್ಲಿ ಉಳಿದುಕೊಂಡು ಬದಲಾವಣೆಗೆ ಶ್ರೀಕಾರ ಹಾಕಿದರು.

ಇನ್ನು ಬ್ರಾಹ್ಮಣರಾದ ಡಾ. ಪಾಠಕ್ಅವರು 60 ರ ದಶಕದಲ್ಲಿ ದಲಿತರ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದುದು ಅಂದಿನ ಪಾಲಿಗೆ ದೊಡ್ಡ ಅಪರಾಧವೇ ಆಗಿತ್ತು. ಆದ್ರೆ ಇದೇ ಮುಂದೊಂದು ಮಹತ್ಕಾರ್ಯಕ್ಕೆ ಮುನ್ನುಡಿಯಾಯ್ತು. ಡಾ.ಪಾಠಕ್ ವಾಸಿಸುತ್ತಿದ್ದ ದಲಿತರ ಕಾಲೋನಿಯಲ್ಲಿ ಜನರ ಪರಿಸ್ಥಿತಿ ಹೀನವಾಗಿತ್ತು. ಯಾರೂ ಅವರನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಕೆಲಸಕ್ಕೆ ಕರೆಯುತ್ತಿರಲಿಲ್ಲ. ಇದನ್ನು ಕಂಡ ಡಾ.ಪಾಠಕ್, ಈ ಕೆಟ್ಟ ಪರಿಸ್ಥಿತಿಯಿಂದ ಇಲ್ಲಿನ ಜನರನ್ನು ಹೇಗಾದರೂ ಮುಕ್ತಿಗೊಳಿಸಿ, ಗಾಂಧೀಜಿ ಕನಸನ್ನು ನನಸು ಮಾಡಬೇಕೆಂದು ಪಣತೊಟ್ಟರು.
ಮಲ ಹೊರುವ ಪದ್ಧತಿ ದೂರವಾದರೆ ತನ್ನಿಂದ ತಾನೇ ಜನರ ಪರಿಸ್ಥಿತಿ ಸುಧಾರಿಸುತ್ತೆ ಎಂದು ತಿಳಿದ ಪಾಟಕ್, ಸುಲಭ ಶೌಚಾಲಯ ವ್ಯವಸ್ಥೆ ಕಂಡುಹಿಡಿದರು. ಮತ್ತೆ ಎರಡು ವರ್ಷಗಳ ಬಳಿಕ ಈ ಮಾನವ ತ್ಯಾಜ್ಯ ಅತ್ಯುತ್ತಮ ಗೊಬ್ಬರ ಅಥವಾ ಜೈವಿಕ ಗ್ಯಾಸ್ ಆಗಿಯೂ ಬಳಸಬಹುದು ಎಂಬುದು ಡಾ.ಪಾಟಕ್ ಅವರ ಆವಿಷ್ಕಾರವಾಗಿತ್ತು.
ಮೊಟ್ಟ ಮೊದಲ ಬಾರಿಗೆ 1973 ರಲ್ಲಿ ಬಿಹಾರದ ಅರಾಹ್ ಎಂಬ ಪಟ್ಟಣ ಪಂಚಾಯತ್ ಕಾಂಪೌಂಡ್ನೊಳಗೆ ಎರಡು ಸುಲಭ ಶೌಚಾಲಯ ನಿರ್ಮಿಸಲು 500 ರೂಪಾಯಿ ನೀಡಿತ್ತು. ಇದು ಯಶಸ್ವಿಯಾದ ಬಳಿಕ ಬಿಹಾರ ಸರ್ಕಾರ ಕೂಡ ಸುಮಾರು 200 ಸುಲಭ ಶೌಚಾಲಯ ನಿರ್ಮಿಸಲು ಡಾ.ಪಾಟಕ್ ಅವರಿಗೆ ಹೇಳಿತು. ನಂತರದಲ್ಲಿ ಸುಲಭ ಶೌಚಾಲಯ ಬಿಹಾರ ಮಾತ್ರವಲ್ಲದೇ ಇಡೀ ದೇಶದಲ್ಲೇ ಸುದ್ದಿ ಮಾಡಿತು. ಬೇರೆ ಬೇರೆ ರಾಜ್ಯಗಳೂ ಸುಲಭ ಶೌಚಾಲಯ ನಿರ್ಮಿಸಲು ಮುಂದೆ ಬಂದವು.
ನೋಡು ನೋಡುತ್ತಿದ್ದಂತೆಯೇ ವಿಶ್ವಸಂಸ್ಥೆ ಈ ಕುರಿತಂತೆ ವಿಸ್ಕೃತ ವರದಿಯನ್ನೂ ಸಿದ್ಧಪಡಿಸಿತು. ಅಷ್ಟೇಅಲ್ಲ, ಈ ಬಗ್ಗೆ 2002 ರಲ್ಲಿ ಜೊಹಾನ್ಸ್ಬರ್ಗ್ನಲ್ಲಿ ನಡೆದ ಜಾಗತಿಕ ಶೃಂಗಸಭೆಯಲ್ಲೂ ಚರ್ಚೆ ನಡೆಯಿತು. ಅಲ್ಲದೇ 2015 ರ ಅಂತ್ಯದೊಳಗೆ ಜಗತ್ತಿನಲ್ಲಿ 2.6 ಬಿಲಿಯನ್ ಶೌಚಾಲಯವನ್ನು ಒದಗಿಸುವ ನಿರ್ಣಯ ಕೈಗೊಳ್ಳಲಾಯ್ತು.
ಗಾಂಧೀಜಿ ಹಾಗೂ ಅಂಬೇಡ್ಕರರ ಮಾರ್ಗದಲ್ಲಿ ಹೆಜ್ಜೆಯೂರಿದ ಡಾ.ಪಾಟಕ್ ಅವರ ಶ್ರಮ ವ್ಯರ್ಥವಾಗಲಿಲ್ಲ. ಸುಲಭ ಶೌಚಾಲಯ ಸ್ಥಾಪನೆ ಬಳಿಕ ದಲಿತರ ಸ್ಥಿತಿಗತಿ ಕ್ರಮೇಣ ಬದಲಾಗತೊಡಗಿತು. ಈವರೆಗೆ ದೇಶದಲ್ಲಿ ಸುಮಾರು 1.3 ಮಿಲಿಯನ್ ಸುಲಭ ಶೌಚಾಲಯಗಳ ದೇಶದಲ್ಲಿ ನಿರ್ಮಾಣಗೊಂಡಿವೆ. ಅಲ್ಲದೇ ಇದರಿಂದ ವರ್ಷವೊಂದಕ್ಕೆ ಸುಮಾರು 49056 ಮಿಲಿಯನ್ ಲೀಟರ್ ನೀರು ಉಳಿತಾಯವಾಗುತ್ತೆ.
ಈ ಮಹಾನ್ ಸಾಧಕನಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಪದ್ಮಭೂಷಣ, ಅಂತಾರಾಷ್ಟ್ರೀಯ ಸೇಂಟ್ ಫ್ರಾನ್ಸಿಸ್ ಪ್ರಶಸ್ತಿ ಸೇರಿದಂತೆ 46 ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲ್ಲದೇ 8 ಫೆಲೋಶಿಪ್ಗಳನ್ನೂ ಕೂಡ ಇವರು ಪಡೆದಿದ್ದಾರೆ.
ಡಾ.ಪಾಟಕ್ ಅವರ ಪ್ರಕಾರ ಜನರಿಗೆ ಶಿಕ್ಷಣ ಅನ್ನೋದು ಬಹಳ ಮುಖ್ಯ ಶಿಕ್ಷಣ ಇದ್ದರೆ ಸಮಾನತೆ, ವೈಚಾರಿಕತೆ ಬೆಳೆಯುತ್ತದೆ. ಇಂದಿನ ದಿನಮಾನದಲ್ಲಿ ದೇಶದಲ್ಲಿ ಹಲವಾರು ಬದಲಾವಣೆಗಳಾಗಿವೆ. ಇದಕ್ಕೆ ಮೊದಲ ಮೆಟ್ಟಿಲಾಗಿ ಸುಲಭ ಶೌಚಾಲಯವೆಂಬ ಆವಿಷ್ಕಾರವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಈ ಸಾಮಾಜಿಕ ವಿಜ್ಞಾನಿಗೆ ಹ್ಯಾಟ್ಸಾಫ್.

Share post:

Subscribe

spot_imgspot_img

Popular

More like this
Related

ಮೋದಿ ತಾಯಿಯ ಕುರಿತಾದ ಎಐ ವಿಡಿಯೋ ತೆಗೆದು ಹಾಕುವಂತೆ ಕಾಂಗ್ರೆಸ್​​ʼಗೆ ಹೈಕೋರ್ಟ್ ಸೂಚನೆ

ಮೋದಿ ತಾಯಿಯ ಕುರಿತಾದ ಎಐ ವಿಡಿಯೋ ತೆಗೆದು ಹಾಕುವಂತೆ ಕಾಂಗ್ರೆಸ್​​ʼಗೆ ಹೈಕೋರ್ಟ್...

SBI ಬ್ಯಾಂಕಿನಲ್ಲಿ 21 ಕೋಟಿ ದರೋಡೆ: ಎಸ್ಪಿ ಲಕ್ಷ್ಮಣ ನಿಂಬರಗಿ

SBI ಬ್ಯಾಂಕಿನಲ್ಲಿ 21 ಕೋಟಿ ದರೋಡೆ: ಎಸ್ಪಿ ಲಕ್ಷ್ಮಣ ನಿಂಬರಗಿ ವಿಜಯಪುರ:- SBI...

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ ತಾತ್ಕಾಲಿಕ...

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ!

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ! ಬೆಂಗಳೂರು:...