60 ನಿಮಿಷದಲ್ಲೇ ಟಿಕೆಟ್ ಸೋಲ್ಡ್ ಔಟ್!

Date:

*ಕೆವಿಎನ್ ಪ್ರಸ್ತುತ ಬೆಂಗಳೂರಿನಲ್ಲಿ ಅನಿರುದ್ಧ್ ಮ್ಯೂಸಿಕ್ ಹಬ್ಬ..60 ನಿಮಿಷದಲ್ಲೇ ಟಿಕೆಟ್ ಸೋಲ್ಡ್ ಔಟ್!*
*ಭಾರತದಲ್ಲೇ ಮೊದಲ ಬಾರಿಗೆ ಅನಿರುದ್ಧ್ ಹುಕುಂ ಟೂರ್*
*ಬೆಂಗಳೂರಿನಲ್ಲಿ ಜನನಾಯಗನ್ ಮ್ಯೂಸಿಕ್ ಡೈರೆಕ್ಟರ್ ಕನ್ಸರ್ಟ್..*

*60 ನಿಮಿಷ 16 ಸಾವಿರ ಟಿಕೆಟ್ ಸೋಲ್ಡ್ ಔಟ್…ಮೇ.31ಕ್ಕೆ ಕೆವಿಎನ್ ಪ್ರಸ್ತುತ ಬೆಂಗಳೂರಿನಲ್ಲಿ ಅನಿರುದ್ಧ್ ರವಿಚಂದರ್ ಸಂಗೀತ ಸಂಜೆ!*

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರಸ್ತುತಪಡಿಸುತ್ತಿರುವ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಹಬ್ಬ ಬೆಂಗಳೂರಿನಲ್ಲಿ ಮೇ 31ರಂದು ನಡೆಯಲಿದೆ.
ದುಬೈ, ಆಸ್ಟ್ರೇಲಿಯಾ. ಅಮೆರಿಕ, ಪ್ಯಾರಿಸ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಇದೇ ಹುಕುಂ ಟೂರ್ ಮೊತ್ತ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದೆ. ಅದೂ ಕೂಡ ನಮ್ಮ ಬೆಂಗಳೂರಿಗೆ. ಅನಿರುದ್ಧ್ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಮ್ಯೂಸಿಕ್ ಜಾತ್ರೆ ಮಾಡಲು ರೆಡಿಯಾಗಿದ್ದಾರೆ.
ಮೇ 31ರಂದು ಟೆರಾಫಾರ್ಮ್ ಅರೇನಾದಲ್ಲಿ ನಡೆಯುವ ಮ್ಯೂಸಿಕ್ ಕನ್ಸರ್ಟ್ ಈಗಾಗಲೇ ಬೃಹತ್ ದಾಖಲೆ ಕ್ರಿಯೇಟ್ ಮಾಡಿದೆ.

ಬೆಂಗಳೂರಿನಲ್ಲಿ ನಡೆಯಲಿರುವ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕನ್ಸರ್ಟ್ ನ್ನು ಕೆವಿಎನ್ ಸಂಸ್ಥೆ ಪ್ರಸ್ತುಪಡಿಸಿದೆ. ವಿಶೇಷ ಅಂದರೆ ʼಅನಿರುದ್ಧ್ ಅವರ ಹುಕುಂ ಟೂರ್ ಬೆಂಗಳೂರು ಅವತರಣಿಕೆಯ 16 ಸಾವಿರಕ್ಕೂ ಅಧಿಕ ಟಿಕೆಟ್ಗಳು ಕೇವಲ 60 ನಿಮಿಷದಲ್ಲೇ ಮಾರಾಟವಾಗಿದೆ ʼ ಅಂತ ಕೆವಿಎನ್ ಸಂಸ್ಥೆ ನಿರ್ಮಾತೃ ವೆಂಕಟ ಕೆ ನಾರಾಯಣ ಖಚಿತಪಡಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಜೆಗೆ ಕಾದಿದ್ದ ಸಿಲಿಕಾನ್ ಸಿಟಿಯ ಮಂದಿ, ವೇಗವಾಗಿ ಟಿಕೆಟ್ಸ್ಗಳನ್ನು ಖರೀದಿಸಿದ್ದಾರೆ. ಬೀಸ್ಟ್ ಮ್ಯೂಸಿಕ್ ಮೂಡ್ ಗೆ ಸಿಲಿಕಾನ್ ಸಿಟಿ ಮಂದಿ ಯಾವ ರೀತಿ ಕುತೂಹಲಕಾರಿಯಾಗಿ ಕಾಯುತ್ತಿದ್ದಾರೆ ಎಂಬುವುದು ಗೊತ್ತಾಗುತ್ತಿದೆ.

 

ಮನೋರಂಜನೆ ವಿಷಯವಾಗಿ ಮತ್ತೊಂದಿಷ್ಟು ಸರ್ಪ್ರೈಸ್ಗಳು ಕೆವಿಎನ್ ಸಂಸ್ಥೆಯ ಕಡೆಯಿಂದ ಬರುವ ನಿರೀಕ್ಷೆಗಳಿವೆ. ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ಕೆವಿಎನ್ ಪ್ರೊಡಕ್ಷನ್ಸ್ ಸಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡಿ.

Share post:

Subscribe

spot_imgspot_img

Popular

More like this
Related

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು: ಸಿಎಂ ಸಿದ್ದರಾಮಯ್ಯ

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ...

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ!

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ! ಬೆಂಗಳೂರು: ರಿಯಲ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ...