60 ಕೋಟಿ ಹರಾಜು ಕೂಗಿ ನಂಬರ್ ಪ್ಲೇಟ್ ಪಡೆದ ಭಾರತೀಯ ಉದ್ಯಮಿ..!

Date:

ಸಾಮಾನ್ಯವಾಗಿ ಕೆಲವೊಬ್ರಿಗೆ ಬಾಟಲ್ ಕ್ಯಾಪ್ಸ್, ಪೋಸ್ಟ್ ಕಾಡ್ರ್ಸ್ ಅಥವಾ ಸ್ಟಾಂಪ್‍ಗಳು ಇಲ್ಲ ಕಾಯಿನ್ಸ್ ಗಳನ್ನು ಸಂಗ್ರಹಿಸೋ ದೊಡ್ಡ ಹವ್ಯಾಸ ಇರೋದನ್ನ ನಾವು ನೋಡಿರ್ತೀವಿ.. ಆದ್ರೆ ನಂಬರ್ ಪ್ಲೇಟ್ ಸಂಗ್ರಹ ಮಾಡೋದನ್ನ ನೀವೆಲ್ಲಾದ್ರೂ ಕೇಳಿದೀರಾ..? ಅಥವಾ ನೋಡಿದೀರಾ.. ಅದೂ ಕೂಡ ಕೋಟಿ ಹಣ ಕೊಟ್ಟು..?
ಹೌದು.. ಇಂತಹದೊಂದು ಹವ್ಯಾಸ ಇಟ್ಟಿಕೊಂಡಿರೋದು ಭಾರತೀಯ ಮೂಲದ ದುಬೈ ಉದ್ಯಮಿ ಬಲ್ವಿಂದರ್ ಸಹಾನಿ..! ಇವರು ಬೆಸ ಸಂಖ್ಯೆಯ ನಂಬರ್ ಪ್ಲೇಟ್ ಖರೀದಿ ಮಾಡೋ ಬಹುದೊಡ್ಡ ಹವ್ಯಾಸ ಬೆಳೆಸಿಕೊಂಡಿದ್ದು ಈ ಬಾರಿಯ ನಂಬರ್ ಪ್ಲೇಟ್ ಹರಾಜು ಪ್ರಕ್ರಿಯೆಯಲ್ಲಿ ‘ಡಿ5’ ಸಂಖ್ಯೆಯ ನಂಬರ್ ಪ್ಲೇಟ್‍ಗೆ ಬರೋಬ್ಬರಿ 30 ಮಿಲಿಯನ್ ದಿರ್ಹಾಮ್ಸ್ ಹಣ ನೀಡಿದ್ದಾರೆ.. ಭಾರತೀಯ ರುಪಾಯಿ ಮೌಲ್ಯದಲ್ಲಿ ಅದರ ಬೆಲೆ ಎಷ್ಟು ಗೊತ್ತಾ ಬರೋಬ್ಬರಿ 60 ಕೋಟಿ… ಯಾಕೆ ಅವರು ಇಷ್ಟೊಂದು ಬೆಲೆಕೊಟ್ಟು ಕೊಂಡುಕೊಳ್ಳುತ್ತಾರೆ ಅಂತ ಕೇಳುದ್ರೆ ಅದಕ್ಕಿರೋ ಉತ್ತರ ಸೋ ಸಿಂಪಲ್ ರೀ.. ಅವ್ರಿಗೆ ಅದು ಹವ್ಯಾಸ ಅಂತೆ ನೋಡಿ..!
ಈ ಬಾರಿ ದುಬೈನಲ್ಲಿ ನಡೆದ ಬೆಸ ಸಂಖ್ಯೆಯ ನಂಬರ್ ಪ್ಲೇಟ್ ಹರಾಜು ಪ್ರಕ್ರಿಯೆಯಲ್ಲಿ ಸುಮಾರು 300 ದುಬೈ ಉದ್ಯಮಿಗಳು ಭಾಗವಹಿಸಿದ್ದು ಅವರಲ್ಲಿ ಭಾರತೀಯ ಮೂಲದ ಉದ್ಯಮಿ ಬಲ್ವಿಂದರ್ ಸಹಾನಿ ಅತೀ ಹೆಚ್ಚು ಮೊತ್ತಕ್ಕೆ ಹರಾಜು ಕೂಗಿ ನಂಬರ್ ಪ್ಲೇಟ್ ತಮ್ಮದಾಗಿಸಿಕೊಂಡಿದ್ದಾರೆ.. ಸುಮಾರು 10ಕ್ಕೂ ಹೆಚ್ಚು ನಂಬರ್ ಪ್ಲೇಟ್‍ಗಳನ್ನು ಹರಾಜು ಪ್ರಕ್ರಿಯೆಯಲ್ಲಿ ಗೆದ್ದಿದ್ದಾರೆ ಅವರ ಮೊದಲ ನಂಬರ್ ಪ್ಲೇಟ್‍ನ್ನು 32 ಕೋಟಿ ರೂ. ಗೆ ಖರೀದಿ ಮಾಡಿದ್ದಾರೆ. ಕಳೆದ 2015ರಲ್ಲಿ ಅವರು ಒಟ್ಟು 9 ವಿವಿಧ ನಂಬರ್ ಪ್ಲೇಟ್‍ಗಳನ್ನು ಖರೀದಿ ಮಾಡಿದ್ದು ಅವುಗಳಲ್ಲಿ ‘09’ ಸಂಖ್ಯೆಯನ್ನು ಸುಮಾರು 40 ಕೋಟಿಗೆ ಖರೀದಿ ಮಾಡಿದ್ದಾರೆ.

POPULAR  STORIES :

ಕಾಂಪೌಂಡ್ ವಿಚಾರವಾಗಿ ಎರಡು ಕುಟುಂಬಗಳ ಸಿನಿಮೀಯ ರೀತಿಯಲ್ಲಿ ಬಡಿದಾಟ..!

ಲಾರಿ ವಾಹನ ಚಾಲಕರ ದಿಢೀರ್ ಮುಷ್ಕರ: ಇಂದು ಪೆಟ್ರೋಲ್, ಡೀಸೆಲ್ ಸಿಗೋದು ಡೌಟ್..!

ಅಪ್ಪನ ಅಪ್ಪುಗೆಯಿಂದ ಬದುಕುಳಿಯಿತು ಕೂಸು..!

ಬಿಎಂಡಬ್ಲ್ಯೂ ವಾಪಾಸ್ ನೀಡಲು ನಿರ್ಧರಿಸಿದ ದೀಪಾ ಕರ್ಮಕರ್.

ಹುಡುಗಿಯೊಬ್ಳು ಐಫೋನ್ ತಗೊಳೋಕೆ ನಿಮ್ಮತ್ರ ದುಡ್ ಕೇಳುದ್ರೆ..?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...