6 ವರ್ಷದ ಹುಡುಗ 70 ಕೋಟಿ ಸಂಪಾದಿಸಿದ್ದಾನೆ ಅಂದ್ರೆ ನಂಬಲು ಕಷ್ಟವಾಗುತ್ತೆ…! ಅಚ್ಚರಿ ಎನಿಸಿದ್ರು ಇದು ಸತ್ಯ.
ಮಕ್ಕಳು ಆಟಿಕೆಗಳಲ್ಲಿ ಆಡ್ತಾರೆ. ಎಲ್ಲ ಮಕ್ಕಳಂತೆ ಈತ ಕೂಡ ಆಟ ಆಡಿದ್ದಾನೆ…! ಆಟದ ವೀಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ ಮಾಡಿ ದುಡ್ಡು ಮಾಡಿದ್ದಾನೆ…! ಫೋರ್ಬ್ಸ್ ಇತ್ತೀಚೆಗೆ ಅತಿ ಹೆಚ್ಚು ಸಂಪಾದನೆ ಮಾಡೋ ಯೂಟ್ಯೂಬರ್ಸ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅಮೆರಿಕದ 6 ವರ್ಷದ ಬಾಲಕ ರಯಾನ್ ಹೆಸರೂ ಕೂಡ ಇದೆ…! ಈತ ತನ್ನ ಆಟಿಕೆಗಳನ್ನು, ಮಿಠಾಯಿಗಳನ್ನು ವಿಮರ್ಶೆ ಮಾಡೋದನ್ನು ಪೋಷಕರು ‘ರಯಾನ್ ಟಾಯ್ಸ್ ರಿವೀವ್’ ಎಂಬ ಯೂಟ್ಯೂಬ್ ಚಾನಲ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋಗಳಿಂದ ಕೇವಲ ಒಂದು ವರ್ಷದಲ್ಲಿ 11 ದಶಲಕ್ಷ ಡಾಲರ್ (ಸುಮಾರು 70 ಕೋಟಿ ರೂ) ಹಣ ಸಂಪಾದಿಸಿದ್ದಾನೆ ರಯಾನ್.