ಅವಳಿನ್ನೂ 7 ವರ್ಷದ ಪೋರಿ..! ಲಾರಿ, ಕಾರು, ಟೆಂಪೋ ಓಡಿಸ್ತಾಳೆ…! ಅವಳು ಓಡಿಸೋ ಲಾರಿ, ಕಾರು ಟೆಂಪೋಗಳಾವುದೂ ಆಟಿಕೆಗಳಲ್ಲ..! ರಸ್ತೆಯಲ್ಲಿ ಓಡಾಡೋ ಭಾರಿ ವಾಹನಗಳೇ…!
ಹೌದು, ಈ ಸುದ್ದಿ ಓದಿದ್ರೆ ಅಚ್ಚರಿ ಆಗುತ್ತೆ..! ನಂಬಲು ಅಸಾಧ್ಯ ಎಂದೆನಿಸುತ್ತೆ..! ಆದರೂ ನಂಬಲೇ ಬೇಕು ಮೈಸೂರಿನ ಕನ್ನಡದ ಕಂದಮ್ಮನ ಸಾಧನೆಯನ್ನು…! ಈಕೆಯ ಹೆಸರು ರಿಫಾ ತಸ್ಕಿನ್..! ಇವಳ ಡ್ರೈವಿಂಗ್ ಸಾಮಥ್ರ್ಯವೇ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಸುದ್ದಿ…! ಇವಳು ಬಹು ವಾಹನಗಳನ್ನು ಓಡಿಸೋ ಸಾಮಥ್ರ್ಯವನ್ನು ಹೊಂದಿದ್ದು, ಗಿನ್ನಿಸ್ ದಾಖಲೆಗೆ ಸೇರುತ್ತಿದ್ದಾಳೆ.
ಪೈಲೆಟ್ ಆಗಬೇಕೆಂಬ ಆಸೆ ಇಟ್ಕೊಂಡಿರೋ ಈ ಬಾಲಕಿ ಲಾರಿ, ಕಾರು, ಮಿನಿ ಟೆಂಪೋ, ಎಕ್ಸ್ ಯೂವಿ ಕಾರುಗಳನ್ನು ಓಡಿಸುವಲ್ಲಿ ಪರಿಣಿತೆ..! ಆರಾಮಾಗಿ, ಯಾವುದೇ ರೀತಿಯ ಗೊಂದಲ, ಗಡಿಬಿಡಿಗೊಳಗಾಗದೆ ಸುಮಾರು 70 ವಾಹನಗಳನ್ನು ಓಡಿಸ್ತಾಳೆ. ಮೈಸೂರಿನ ಸೆಂಟ್ ಜೋಸೆಫ್ ಸ್ಕೂಲ್‍ನಲ್ಲಿ 2ನೇ ತರಗತಿ ಓದ್ತಿರೋ ಈಕೆ ಸದ್ಯದಲ್ಲೇ ಗೋಲ್ಡನ್ ಬುಕ್ ಆಫ್ ವರ್ಡ್‍ವ ರೆಕಾರ್ಡ್ ಬುಕ್ ಸೇರಲಿದ್ದಾಳೆ…!