ಹೌದು ನೋಡಿ.. 14 ವರ್ಷದಲ್ಲಿ 700 ರೇಪ್ ಮಾಡಿದ್ದಾನೆ ಈ ನೀಚ, ಈ ಮಹಾಪುರುಷ ರೇಪ್ ಮಾಡೋದೆ ತನ್ನ ಜೀವನದ ಮಹತ್ತರ ಗುರಿ ಅಂದ್ಕೊಂಡಿದ್ದಾನೆ ನೋಡಿ..! ಎಲ್ರಿಗೂ ಆಸೆ ಅನ್ನೋದ್ ಇರುತ್ತೆ. ನಾವು ಒಂದೊಳ್ಳೆ ಕೆಲ್ಸಕ್ಕೆ ಸೇರ್ಬೇಕು, ಒಂದಿಷ್ಟು ಹಣ ಮಾಡ್ಕೊಂಡು ನೆಮ್ಮದಿಯಾಗಿರ್ಬೇಕು ಅನ್ನೊ ಸಣ್ಣ ಆಸೆ ಇದ್ರೆ.. ಈತನ ಆಸೆ ನೋಡಿ ಸ್ವಾಮಿ ಜೀವನದುದ್ದಕ್ಕೂ 7 ರಿಂದ 14 ವರ್ಷದ ಹುಡುಗಿಯರನ್ನು ಅನುಭವಿಸಬೇಕು ಎನ್ನುವುದೇ ಸಾಧನೆಯಾಗಿದೆಯಂತೆ..!
ಈ ಕಾಮುಕ ಯಾವ ದೇಶದವನಪ್ಪ ಅಂತ ಅನ್ನುಸ್ತಿರ್ಬೋದು ಅಲ್ವಾ..? ನಮ್ಮ ದೇಶದವನಂತೂ ಅಲ್ವೇ ಅಲ್ಲ ಅಂತ ನೀವನ್ಕೊಂಡ್ರೆ ಅದು ನಿಮ್ಮ ತಪ್ಪು. ಈ ಕಾಮುಕ ನಮ್ಮ ದೇಶದವನೆ..! ಅದು ಉತ್ತರ ಪ್ರದೇಶದ ರಾಂಪುರದವನು. ಈತನ ಹೆಸರು ಸುನಿಲ್ ರುಸ್ತೋಗಿ ಅಂತ. ಇವನಿಂದ ಲೆಕ್ಕಕ್ಕೆ ಸಿಕ್ಕಿರೋ 700 ಹೆಣ್ಣುಮಕ್ಕಳು ಮತ್ತು ಕುಟುಂಬ ರೋಸಿ ಹೋಗಿದೆ. ಇನ್ನು ಬಾಯಿಬಿಡದೆ ಇರುವ ಅದೆಷ್ಟು ಹೆಣ್ಣುಮಕ್ಕಳಿಗೆ ನರಕವನ್ನು ತೊರಿಸಿದ್ದಾನೊ ಈ ಪಾಪಿ..? ಆ ದೇವರೇ ಬಲ್ಲ.
ಈ ಪ್ರಚಂಡ ಕಾಮುಕನ ಕಥೆ ಕೇಳಿದ್ರೆ ಅಬ್ಬಬಾ..! ಅಂತ ಬಾಯ್ಮೇಲೆ ಬೆರಳಿಟ್ಕೊಂಡು, ಕಿಚ್ಚು ನೆತ್ತಿಗೇರಿಸಿಕೊಳೊದಂತೂ ಪಕ್ಕಾ ನೋಡ್ರಿ. ರೇಪ್ ಮಾಡೋಕು ಏನ್ ಆಸೆ ನೋಡ್ರಿ. ಇವ್ನಿಗೆ 6 ವರ್ಷದಿಂದ 14ವರ್ಷದೊಳಿಗಿನ ಹುಡುಗಿಯರೇ ಬೇಕಂತೆ..! ವೆರೈಟಿ ವೆರೈಟಿ ಏಜ್ ಗ್ರೂಪ್‍ನವರೇ ಬೇಕಂತೆ ನೋಡಿ.. ಮೆಚ್ಚ್ ಬೇಕು ಕಣ್ರಿ ಇವ್ನ ಬಂಡ್ ಧೈರ್ಯನ. ಹೆಣ್ಣು ಮಕ್ಕಳೆಲ್ಲಾ ಇವರಪ್ಪನ ಮನೆ ಸ್ವತ್ತು ಅಂದುಕೊಂಡಿದ್ದಾನೆ.
ದೆಹಲಿಯಲ್ಲಿ ಸಾಮಾನ್ಯ ಲೇಡಿಸ್ ಟೈಲರ್ ಆಗಿ ಕೆಲಸವನ್ನು ಮಾಡ್ತಿದ್ದ ಈತ ಶಾಪ್‍ಗೆ ಬರೋ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳನ್ನೇ ಬುಟ್ಟಿಗೆ ಹಾಕಿಕೊಂಡು ರೇಪ್ ಮಾಡೋದೆ ಇವ್ನ ಕೆಲಸವಂತೆ. 38ವರ್ಷಕ್ಕೆ ಬರೋಬ್ಬರಿ 700 ರೇಪ್ ಮಾಡಿದ್ದಾನಂತೆ..! ಅಂದ್ರೆ 13 ವರ್ಷದಿಂದ ಇದೇ ಕೆಲಸದಲ್ಲಿ ಜೀವನ ಸಾಗಿಸಿದ್ದಾನೆ. ತನ್ನ 25ನೇ ವರ್ಷದಿಂದ ರೇಪ್ ಮಾಡುತ್ತಾ ಬಂದಿದ್ದ ಈ ಕಾಮಕ ಈಗ ಪೊಲೀಸ್ ಅತಿಥಿಯಾಗಿದ್ದಾನೆ. ಇನ್ನೊಂದು ಅಚ್ಚರಿ ಅಂದ್ರೆ ವರ್ಷಕ್ಕೆ 50 ಹೆಣ್ಮಕ್ಳ ಮೇಲೆ ಅತ್ಯಾಚಾರ ಮಾಡೋದೆ ಈತನ ಟಾರ್ಗೆಟ್ ಅಂತೆ..! ಇಂತ ನೀಚನಿಗೆ ಏನ್ ಮಾಡ್ಬೇಕು, ಯಾವ ಶಿಕ್ಷೆ ಕೊಡ್ಬೇಕು ನೀವೆ ಹೇಳಿ..!
ಈ ಕಾಮುಕನಿಗೆ ಮದ್ವೆನೂ ಆಗಿದ್ದು, ವಿಕಲಚೇತನ ಹೆಂಡ್ತಿ, ಮೂರು ಮುದ್ದಾಗಿರೋ ಹೆಣ್ಣು ಮಕ್ಳು, ಇಬ್ರು ಗಂಡು ಮಕ್ಳು ಇದ್ದಾರಂತೆ. ಪೊಲೀಸ್ ಲಾಠಿ ರುಚಿ ಸಿಕ್ಕಮೇಲೆ ಇನ್ನೊಂದು ಭಯಾನಕ ವಿಚಾರವನ್ನ ಬಾಯ್ಬಿಟ್ಟಿದ್ದಾನೆ..! ಏನಪ್ಪಾ ಇದಕ್ಕಿಂತ ಇನ್ನು ಭಯಾನಕವಾದ ವಿಚಾರ ಅಂದುಕೊಳ್ತಿದ್ದೀರಾ..? ಅತ್ಯಾಚಾರಕ್ಕೊಳಗಾಗ ಹೆಣ್ಣು ಮಕ್ಳಲ್ಲಿ ಸುಮಾರು 500 ಹೆಣ್ಮಕ್ಳು 7 ರಿಂದ 11 ವರ್ಷ ವಯಸ್ಸಿನ ಅಪ್ರಾಪ್ತ ಮಕ್ಕಳಂತೆ ನೋಡಿ ಸ್ವಾಮಿ..! 700 ಹೆಣ್ಣು ಮಕ್ಳನ್ನ ರೇಪ್ ಮಾಡಿರೋ ಇವ್ನು ತನ್ನ ಮಡದಿಗೆ ಇನ್ನೆಷ್ಟು ಹಿಂಸೆ ಕೊಟ್ಟಿರಬೋದು ನೀವೆ ಯೋಚಿಸಿ. ಆಕೆ ಮೊದ್ಲೆ ಅಂಗವಿಕಲೆ. ತನ್ನ ಮತ್ತೊಂದು ಕಾಮ ಮುಖವನ್ನು ಇನ್ನೆಷ್ಟು ಬಾರಿ ಅವಳಿಗೆ ತೊರಿಸಿದ್ದಾನೋ..? ಆದ್ರೆ ಒಂದು ಬೇಸರದ ಸಂಗತಿ ಅಂದ್ರೆ ಕಾಮುಕ 700 ರೇಪ್ ಮಾಡೊವರೆಗೂ ಪೊಲೀಸ್ ಇಲಾಖೆಗೆ ಗೊತ್ತಿಲ್ಲ ಅಂದ್ರೆ ಯಾರ್ ತಾನೆ ನಂಬ್ತಾರೆ ಹೇಳಿ. ನಮ್ಮ ದೇಶದಲ್ಲಿನ ಕಾನೂನು ಇನ್ನಷ್ಟು ಬಲಗೊಳ್ಬೇಕು ಆಗ್ಲೆ ಇಂತಾ ನೀಚರಿಗೆ ಬುದ್ದಿ ಬರೋದು, ಹೆಣ್ಣುಮಕ್ಕಳಿಗೆ ಸೇಫ್ಟಿ ಸಿಕ್ಕೊದು. ನೀವೇನಂತೀರಾ..?
- ಹಾಲೇಶ್ ಎಂ ಎಸ್ ಹುಣುಸನಹಳ್ಳಿ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಸನ್ನಿ ಜೊತೆ ಸೆಲ್ಫಿ ಬೇಕಾ..? ಹಾಗಾದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ..!
ಬಿಗ್‍ಬಾಸ್ ಮನೆಯಲ್ಲಿ ಕಲ್ಯಾಣ ಭಾಗ್ಯ..!
ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ ಶಿಕ್ಷಕ ಅರೆಸ್ಟ್
2016ರಲ್ಲಿ ಸಾಮಾನ್ಯವಾಗಿ ಬಳಕೆಯಾದ ಪಾಸ್‍ವರ್ಡ್ ಯಾವುದು ಗೊತ್ತಾ.?
ವಿಶ್ವದ ಅರ್ಧದಷ್ಟು ಸಂಪತ್ತು ಈ ಎಂಟು ಜನರ ಪಾಲು..!!
ಡ್ರಾಪ್ ಕೊಡೋ ನೆಪದಲ್ಲಿ ಮಾನಸಿಕ ಅಸ್ವಸ್ಥೆಯನ್ನೆ ರೇಪ್ ಮಾಡಿದ ಪೊಲೀಸ್..!