75ರ ಇವರ ಕೆಲಸ ನೋಡಿದ್ರೆ ನೀವು ನಿಬ್ಬೆರಗಾಗುತ್ತೀರಿ..!

Date:

ಮುಂಬೈ ಮಹಾನಗರದ ಸ್ನೇಹಲತಾ ಹೂಡಾ ಅವರೀಗ 75ರ ಹರೆಯ. ಸ್ನೇಹಲತಾ ಅವರು ಹೆಸರಿಗೆ ತಕ್ಕಂತೆ ಸ್ನೇಹಮಯಿ. ಗಟ್ಟಿ ನಿರ್ಧಾರ ಮಾಡಿದ್ರೆ ವಯಸ್ಸು ಅದಕ್ಕೆ ಅಡ್ಡಿಯಾಗುವುದಿಲ್ಲ ಅನ್ನೋದಕ್ಕೆ ಇವರೇ ನಿದರ್ಶನ.

ಸ್ನೇಹಲತಾ ಅವರನ್ನು ಎಲ್ಲರೂ ಪ್ರೀತಿಯಿಂದ ‘ಗೌರವ್ ಮಾ’ ಅಂತಾನೇ ಕರೆಯುತ್ತಾರೆ. ಸ್ನೇಹಲತಾ ಗುರ್ಗಾಂವ್ ನಲ್ಲಿ ನಡೆಸ್ತಾ ಇರೋ ಶಾಲೆಯಲ್ಲಿ, ಚಿಂದಿ ಆಯುವವರು, ಮನೆಗೆಲಸ ಮಾಡಿ ಬದುಕುವವರು ಹೀಗೆ ಸಮಾಜದ ದುರ್ಬಲ ವರ್ಗಕ್ಕೆ ಸೇರಿದ ಮಕ್ಕಳಿಗೆ ಶಿಕ್ಷಣವನ್ನು ಧಾರೆ ಎರೆಯಲಾಗುತ್ತಿದೆ.
ಸ್ನೇಹಲತಾ ಅವರು, ದೆಹಲಿಯಲ್ಲಿ ಸರ್ಕಾರಿ ಕೆಲಸದಲ್ಲಿದ್ದು 2006ರಲ್ಲಿ ನಿವೃತ್ತಿ ಹೊಂದಿದರು. ಅವರ ನಿವೃತ್ತಿ ನಂತರ ಗಟ್ಟಿ ನಿಲುವು ತಾಳುತ್ತಾರೆ. ಆದೆನೆಂದರೆ, ತಾವು ತನ್ನ ಕುಟುಂಬಕ್ಕಾಗಿ ಇಷ್ಟು ವರ್ಷ ಸಾಕಷ್ಟು ದುಡಿದಿದ್ದೇನೆ, ಇನ್ಮೇಲೆ ಆರ್ಥಿಕ ಸಹಾಯ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಪೆನ್ಷನ್ ಹಣವನ್ನೆಲ್ಲ ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಬೇಕೆಂದು ನಿರ್ಧರಿಸುತ್ತಾರೆ.


ಅಂದಿನಿಂದ ಇಂದಿನವರೆಗೂ ಸ್ನೇಹತಲಾ ತಮ್ಮ ಪೆನ್ಷನ್ ಹಣವನ್ನೆಲ್ಲ ಮಕ್ಕಳ ಶಿಕ್ಷಣಕ್ಕಾಗಿಯೇ ಖರ್ಚು ಮಾಡುತ್ತಿದ್ದಾರೆ. ಆರಂಭದಲ್ಲಿ ಹತ್ತಾರು ಮಕ್ಕಳು ಶಾಲೆಗೆ ಬರ್ತಾ ಇದ್ರು. ಈಗ 500ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣವನ್ನು ಧಾರೆ ಎರೆಯುತ್ತಿದ್ದಾರೆ. ಅವರಿಗೆ ಬೇಕಾದ ಅಗತ್ಯ ಸೌಕರ್ಯಗಳನ್ನೂ ಮಾಡಿಕೊಡುತ್ತಿದ್ದಾರೆ.
ಅದರಲ್ಲೂ ಒಬ್ಬಂಟಿಯಾಗಿಯೇ ಸ್ನೇಹಲತಾ ಅವರು ಇದನ್ನೆಲ್ಲ ಮುನ್ನಡೆಸ್ತಿದ್ದಾರೆ. ಆರಂಭದಲ್ಲಿ ಸಹ ಯಾರ ನೆರವನ್ನೂ ಕೇಳಲು ಅವರಿಗೆ ಇಷ್ಟವಿರಲಿಲ್ಲ. ಆದ್ರೆ ಕೆಲ ಸಹೃದಯಿಗಳು ತಾವೇ ಮುಂದಾಗಿ ಸಹಾಯ ಹಸ್ತ ನೀಡಿದ್ದರು. ಎರಡು ವರ್ಷಗಳ ಹಿಂದೆ ಖಾಸಗಿ ಸಂಸ್ಥೆಯೊಂದು ಮಕ್ಕಳಿಗೆ ಸಮವಸ್ತ್ರಕ್ಕಾಗಿ ಹಣಸಹಾಯ ಮಾಡಿತ್ತು.
ಸ್ನೇಹಲತಾ ಅವರು ಆರಂಭದಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಹೆತ್ತವರ ಮನವೊಲಿಸುವುದು ಅಷ್ಟು ಸುಲಭವಾಗಿರಲಿಲ್ಲ. ಮಕ್ಕಳನ್ನು ಕೆಲಸಕ್ಕೆ ಕಳಿಸಿದ್ರೆ ಅಲ್ಪ ಸ್ವಲ್ಪ ಹಣವಾದ್ರೂ ಬರುತ್ತೆ ಅಂತಾ ಪೋಷಕರು ಯೋಚನೆ ಮಾಡ್ತಾ ಇದ್ರು. ಅವರನ್ನು ಒಪ್ಪಿಸಲು ಸ್ನೇಹಲತಾ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅವರ ಶಾಲೆಯಲ್ಲೀಗ 500ಕ್ಕೂ ಹೆಚ್ಚು ಬಡ ಕುಟುಂಬಗಳ ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ.


ಇನ್ನು ಸ್ನೇಹಲತಾ ಅವರ ಜೀವನದಲ್ಲಿ ಕೂಡ ಶಿಕ್ಷಣ ಅನ್ನೋದು ಹೆತ್ತವರು ನೀಡಿದ ಕೊಡುಗೆ. ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುವ ಸಮಯದಲ್ಲೂ ಪದವಿ ಮುಗಿಸಿ ಕೆಲಸಕ್ಕೆ ಸೇರಿದ್ದು ಸಾಧನೆಯೇ ಸರಿ. ಅವರು ಬೆಳೆದಿದ್ದೆಲ್ಲ ಗೋಷಾ ಪದ್ಧತಿ ಜಾರಿಯಲ್ಲಿದ್ದಾಗಂತೆ. ಹೆಣ್ಣುಮಕ್ಕಳು ತಲೆಯನ್ನು ಮುಚ್ಚಿಕೊಂಡೇ ಇರಬೇಕಿತ್ತು, ಪುರುಷರ ಜೊತೆಗೆ ಮಾತನಾಡುವಂತೆಯೇ .
ಸ್ನೇಹಲತಾ ಅವರು, ಇಂತಹ ಅಡ್ಡಿ ಆತಂಕಗಳ ನಡುವೆಯೂ ಶಾಲೆಯ ಮೆಟ್ಟಿಲು ಹತ್ತಲು ಸಾಧ್ಯವಾಯ್ತು ಎನ್ನುವುದು ಅವರ ಮನದಾಳ ಮಾತು. ಇನ್ನು ದೇಶದಲ್ಲಿ ಬ್ರಿಟಿಷ್ ಆಡಳಿತದ ಸಂದರ್ಭದಲ್ಲಿ ಸ್ನೇಹಲತಾ ಅವರ ತಂದೆಯವರು ಮಕ್ಕಳಿಗೆ ಪಾಠ ಹೇಳಿಕೊಡುವುದರಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದರಂತೆ. ಹಾಗಾಗಿ, ಸ್ನೇಹಲತಾ ಕಾರ್ಯಕ್ಕೆ ಅವರ ತಂದೆಯವರೇ ಪ್ರೇರಣೆ.
ಸ್ನೇಹಲತಾ ಅವರಿಗೆ ಈಗ 74 ವರ್ಷ ವಯಸ್ಸು. ಸಾಮಾನ್ಯವಾಗಿ ಈ ವಯಸ್ಸಿನಲ್ಲಿ ಎಲ್ರೂ ಮಕ್ಕಳು-ಮೊಮ್ಮಕ್ಕಳು ಅಂತಾ ಆರಾಮಾಗಿ ಮನೆಯಲ್ಲಿ ಇರ್ತಾರೆ. ಆದ್ರೆ, ಸ್ನೇಹಲತಾ ಮಾತ್ರ ತಮ್ಮ ಸಮಯವನ್ನೆಲ್ಲ ಬಡ ಮಕ್ಕಳಿಗಾಗಿ ಮೀಸಲಿಟ್ಟಿದ್ದಾರೆ. ಅವರ ಬದುಕಲ್ಲಿ ಹೊಸ ಬೆಳಕು ಮೂಡಿಸಲು ಸಕಲ ಪ್ರಯತ್ನವನ್ನೂ ಮಾಡ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...