ಭಾರತೀಯ ಮೂಲದ ಅಮೇರಿಕಾ ನಿವಾಸಿಯಾದ ಈತನ ಹೆಸರು ರುಬೆನ್ ಪೌಲ್ ಈತನಿಗಿನ್ನೂ ಕೇವಲ 9 ವರ್ಷ ವಯಸ್ಸು. ಆದರೆ ಆತನಿಗೆ ದಕ್ಕಿರುವುದು ಪ್ರತಿಷ್ಠಿತ ಕಂಪನಿಯೊಂದರ ಸಿಇಓ ಪಟ್ಟ… ಆಶ್ಚರ್ಯವೆನಿಸಿದರೂ ಇದೇ ಸತ್ಯ.
ಹೌದು. ರುಬೆನ್ ಪೌಲ್ ಇಂತಹ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ. ಈತ ಈಗ ಒಬ್ಬ ಪ್ರೊಫೇಶನಲ್ ಹ್ಯಾಕರ್, ಆಪ್ ಡೆವಲೆಪರ್, ಸೈಬರ್ ಸೆಕ್ಯೂರಿಟಿ ಎಕ್ಸ್‍ಪರ್ಟ್, ಹಾಗೂ ಗೇಮ್ ಡೆವಲಪ್‍ಮೆಂಟ್ ಕಂಪನಿಯ ಸಿಇಓ. ಈತನಂತೆ ಇವರ ತಂದೆಯೂ ಕೂಡ ಸೆಕ್ಯೂರಿಸ್ಕ್ ಸಲ್ಯೂಶನ್ ಕಂಪನಿಯ ಸಿಇಓ ಆಗಿದ್ದಾರೆ.
ಎರಡನೇ ತರಗತಿಯಲ್ಲಿರುವಾಗ ಶಿಕ್ಷಕರು ಮಕ್ಕಳಿಗೆ ಲರ್ನಿಂಗ್ ಗೇಮ್ ಪ್ರೋಡಕ್ಟ್ ಮಾಡಲು ಹೇಳಿದ್ದರು. ಎಲ್ಲಾ ಮಕ್ಕಳು ಬೋರ್ಡ್, ಕಾರ್ಡ್‍ಗಳಿಂದ ಪ್ರಾಜೆಕ್ಟ್ ಮಾಡಿದ್ದರೆ ರುಬೆನ್ ಮಾತ್ರ ‘ಶುರಿಕೇನ್ ಮ್ಯಾಥ್’ ಎಂಬ ಹೊಸ ಲರ್ನಿಂಗ್ ಅಪ್ಲಿಕೇಶನ್ ತಯಾರಿಸಿದ್ದ. ಇದು ಮಕ್ಕಳಿಗೆ ಗಣಿತ ಕಲಿಯಲು ಇನ್ನೂ ಸುಲಭವಾಯಿತು.
ಈತನ ಬುದ್ದಿವಂತಿಕೆಯನ್ನು ಅರಿತ ಐಎಸ್ಸಿ2 ದ ನಿರ್ದೇಶಕ ಹಾರ್ಡ್ ಟಿಪ್ಟನ್ ರುಬೇನ್‍ಗೆ ಸೈಬರ್ ಸೆಕ್ಯೂರಿಟಿ ಆಪ್‍ನ್ನು ತಯಾರಿಸುವಂತೆ ಸಲಹೆ ನೀಡಿದ್ದರು. ಅದರಂತೆಯೇ ಕ್ರಾಕರ್ ಫ್ರೂಪ್ ಎಂಬ ಆಪ್ ರಚನೆ ಮಾಡಿದ. ಇದು ಮಕ್ಕಳಿಗೆ ಮನರಂಜನೆಯ ಜೊತೆಗೆ ಸ್ಟ್ರಾಂಗ್ ಪಾಸ್‍ವರ್ಡ್ ಮಾಡುವುದನನ್ನು ಕಲಿಸಿಕೊಡುತ್ತದೆ. ರುಬೆನ್ ಮುಂದೆ ತಾನೊಬ್ಬ ಸೈಬರ್ ಅಪರಾಧ ತಡೆಗಟ್ಟುವ ಆಕಾಂಕ್ಷೆಯನ್ನು ಹೊಂದಿದ್ದಾನೆ
POPULAR STORIES :
ನಮ್ಮ ದೇಶದ ಸೈನಿಕರಿಗೆ ತರಬೇತಿ ನೀಡುವ ಏಕೈಕ ಮಹಿಳೆ ಸೀಮಾ ರಾವ್-ನಮ್ಮ ದೇಶ ಕಂಡ ಅದ್ಭುತ ಮಹಿಳೆ
ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದೆಯೇ? ಅದರಿಂದ ಸ್ವಲ್ಪ ಎಚ್ಚರವಿರಲಿ.
ರಜನಿಕಾಂತ್ ಹಾಲಿವುಡ್ ಸೀಕ್ರೆಟ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ..!
ಸುಲ್ತಾನ ಸಿನಿಮಾ ಗಳಿಸಿದ ಒಟ್ಟು 500 ಕೋಟಿ ಆದಾಯದಲ್ಲಿ ಸಲ್ಮಾನ್‍ನ ಗಳಿಕೆ ಎಷ್ಟಿರಬಹುದು ???
ಕಣ್ಣು ಕಾಣದಿದ್ದರೇನು ಗೆಳತಿ ನಾನಿಲ್ಲವೇ ನಿನ್ನ ಕಣ್ಣಾಗಿ…!
ಬಣ್ಣ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ರಾಜ್ಯದಲ್ಲಿ ಸಂಪೂರ್ಣ ನಿಷೇಧ.
ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ… ನಿಮಗಿಲ್ಲ ಸರ್ಕಾರವನ್ನು ಟೀಕಿಸುವ ಅಧಿಕಾರ.!