ನೀವು ಇಲ್ಲಿವರ್ಗೂ ನಿಮ್ಮ ನಿಮ್ಮ ಬ್ಯಾಂಕ್ ಖಾತೆಯಲ್ಲಿ 2 ಲಕ್ಷ ರೂ.ಗಳಿಗೂ ಹೆಚ್ಚು ಮೊತ್ತವನ್ನು ಜಮಾ ಮಾಡದೇ ನೋಟ್ ಬ್ಯಾನ್ ನಂತರ ಹಣ ಹೂಡಿದ್ದೇ ಆದಲ್ಲಿ ನಿಮ್ಮ ಹೆಗಲಿಗೆ ಶನಿ ಬಂದು ಕೂತಿದ್ದಾನೆ ಅಂದ್ಕೊಳ್ಳಿ..! ಯಾಕೆ ಅಂತೀರಾ..? ಕೇಂದ್ರ ಸರ್ಕಾರ ನವೆಂಬರ್ 8ರಂದು ನೋಟು ಅಮಾನ್ಯಗೊಂಡ ಬಳಿಕ ಬ್ಯಾಂಕ್ ಗ್ರಾಹಕರ ಖಾತೆಯಲ್ಲಿ 2 ಲಕ್ಷ ರೂ ಹಣ ಜಮೆ ಹೊಂದಿದವರ ಫುಲ್ ಡಿಟೇಲ್ ನೀಡ್ಬೇಕು ಅಂತ ಆರ್‍ಬಿಐ ದೇಶದ ಎಲ್ಲಾ ಬ್ಯಾಂಕ್‍ಗಳಿಗೂ ಖಡಕ್ ಅಪ್ಪಣೆ ನೀಡಿದೆ..! ಇಂತಹ ಖಾತೆಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಕಪ್ಪು ಹಣದ ವಿರುದ್ದ ಸರ್ಜಿಕಲ್ ಸ್ಟ್ರೈಕ್ ನಡ್ಸಿರೊ ಕೇಂದ್ರ ಈಗ ಮತ್ತೊಂದು ಬಾಂಬ್ ಹಾಕಿದೆ.
ನೋಟ್ ಬ್ಯಾನ್ ಆದ ಬಳಿಕ ಕಪ್ಪು ಹಣ ಕುಳಗಳು ತಮ್ಮಲ್ಲಿರೋ ಹಣವನ್ನ ಹೇಗಾದ್ರು ಮಾಡಿ ಬಿಳಿ ಮಾಡ್ಕೊಳ್ಬೇಬೇಕು ಅಂತ ಪ್ಲಾನ್ ಮಾಡಿ ಅಮಾಯಕ ಜನರನ್ನು ಬಳಸಿಕೊಂಡು ಅವರ ಖಾತೆಗೆ ಹಣ ಜಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ತಿಳಿದ ಆರ್‍ಬಿಐ ಈ ಕಟ್ಟು ನಿಟ್ಟಿನ ಸೂಚನೆ ನೀಡಿದೆ..! ಮೊದಲ ಮೂರು ವರ್ಗಗಳ ಮಹಾನಗರ, ನಗರ ಹಾಗೂ ಪಟ್ಟಣಗಳಲ್ಲಿನ ಬ್ಯಾಂಕುಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.
ಪಾನ್ ಕಾರ್ಡ್ ವಿವರ ನೀಡುವ ಬದ್ದತೆಯಿಂದ ಹೇಗಾದ್ರೂ ಮಾಡಿ ತಪ್ಪಿಸಿಕೊಳ್ಬೇಕು ಅನ್ನೊ ದೃಷ್ಠಿಯಿಂದ ಒಂದು ಬಾರಿಗೆ 50 ಸಾವಿಗಳಿಗಿಂತ ಕಡಿಮೆ ಪ್ರಮಾಣದ ಹಣವನ್ನು ಹಲವು ಬಾರಿ ಒಂದೇ ಖಾತೆಗೆ ಜಮಾ ಮಾಡಿ 2.50 ಲಕ್ಷ ಜಮಾ ಮಾಡಿಕೊಂಡಿದ್ದರೆ ಅಂತಹ ಖಾತೆದಾರರ ವಿವರ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಆರ್‍ಬಿಐ ಸೂಚನೆ ನೀಡಿದೆ. ಆದರೆ ಶಂಕಿತ ಖಾತೆಗಳಲ್ಲಿ ಹಲವು ಬಾರಿ ಜಮೆ ಮಾಡಿ ಹಣ ಹಿಂಪಡೆದಿರುವ ಪ್ರಕರಣಗಳಿದ್ದು ಅವುಗಳೆನ್ನೆಲ್ಲಾ ಗುರುತಿಸಿ ಅವುಗಳ ವಿವರ ನೀಡುವುದು ಕಷ್ಟದಾಯಕ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಆರ್‍ಟಿಇ ಪ್ರವೇಶ: ಜನವರಿ 15ರಿಂದ ಅರ್ಜಿ ಸ್ವೀಕೃತಿ, ಆಧಾರ್ ಕಡ್ಡಾಯ
ಬಿಗ್‍ಬಾಸ್ ಮನೆಯಲ್ಲಿ ಸಖತ್ ವಾಕ್ಸಮರ..! Kirik vs Pratham
ದರ್ಶನ್‍ರನ್ನು ಬಿಗ್‍ಬಾಸ್ ವೇದಿಕೆಗೆ ಕರ್ದಿದೀರಾ ಎಂಬ ಅಭಿಮಾನಿಯ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರವೇನು..?
ಗುಡ್ ನ್ಯೂಸ್: ಚಿನ್ನದ ಬೆಲೆ 3000ರೂ ಇಳಿಕೆ..!
ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ..!
ಕುಡುಕರಿಗೆ ಶಾಕ್ ಕೊಟ್ಟ ಸುಪ್ರೀಂ: ದೇಶದ ಎಲ್ಲಾ ಹೆದ್ದಾರಿಗಳಲ್ಲಿನ ಬಾರ್, ವೈನ್ ಶಾಪ್ ಬಂದ್…!