ಯುವತಿಯನ್ನು ನುಂಗಿದ ಮೊಸಳೆ..! ಅದರ ಅಸಲಿ ಕಥೆ ಏನು ಗೊತ್ತಾ..?

Date:

ಯುವತಿಯೋರ್ವಳನ್ನು ಮೊಸಳೆ ಎಳೆದೋಯ್ದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಭೀಮಾ ನದಿ ತೀರದಲ್ಲಿ ಮಂಗಳವಾರ ನಡೆದಿದೆ ಎಂಬ ಸುದ್ದಿ ಜಾಲತಾಣ ಹಾಗೂ ಮಾದ್ಯಮಗಳ ಮೂಲಕ ಸಖತ್ ಸುದ್ದಿಯಾಗಿದ್ದು ನಿಮ್ಗೆಲ್ಲಾ ಗೊತ್ತೇ ಇದೆ. 18 ವರ್ಷದ ಅಶ್ವಿನಿ ಎಂಬಾಕೆ ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲೆಂದು ಗೆಳತಿಯ ಜೊತೆ ಹೋದಾಗ ಆಕೆಯನ್ನು ಮೊಸಳೆ ಎಳೆದುಕೊಂಡು ಹೋಗಿದೆ ಎಂದು ಮಾಧ್ಯಮಗಳು ಸುದ್ದಿ ಮಾಡುತ್ತಿದ್ದಂತೆಯೆ ಸಾಮಾಜಿಕ ಜಾಲತಾಣಗಳಲ್ಲಿ ಇದೇ ಸುದ್ದಿಯ ಬಗ್ಗೆ ಭಾರಿ ಚರ್ಚೆಗಳು ನಡೆದವು. ನಿಮ್ಗೆಲ್ಲಾ ಯುವತಿಯ ಗತಿ ಏನಾಗಿರ್ಬೋದೋ..? ಏನೋ..? ಎಂಬ ನೂರೆಂಟು ಪ್ರಶ್ನೆಗಳು ಕಾಡ್ತಾ ಇದ್ರೆ ಈ ಕಥೆನ ನೀವು ಓದ್ಲೇ ಬೇಕು..! ಅಸಲಿಗೆ ಭೀಮಾ ನದಿಯಲ್ಲಿ ಮೊಸಳೆಯೊಂದು ಯುವತೀನ ಎಳೆದುಕೊಂಡು ಹೋಯ್ತಂತೆ ಅನ್ನೋ ಸುದ್ದಿಯೇ ಸುಳ್ಳು..! ಇದರ ಹಿಂದಿರೊ ಮಾಸ್ಟರ್ ಮೈಂಡ್ ಯಾರು ಅಂತ ಕೇಳುದ್ರೆ ಇನ್ನೂ ಶಾಕ್ ಆಗಿ ಹೋಗ್ತೀರ..! ಅಸಲಿಗೆ ಈ ರೀತಿ ಊರೆಲ್ಲಾ ಗುಲ್ಲೆಬ್ಸು ಅಂತ ಹೇಳಿದ್ದೇ ಆ ಯುವತಿ ಅಂದ್ರೆ ನಂಬ್ತೀರಾ..? ಹೌದು.. ಈ ಯುವತಿ ತನ್ನ ಪ್ರಿಯತಮನ ಜೊತೆ ಎಸ್ಕೇಪ್ ಆಗ್ಬೇಕು ಅಂತ ಪ್ಲಾನ್ ಮಾಡಿ ನನ್ನುನ್ನ ಮೊಸಳೆ ಎಳೆದುಕೊಂಡೋಯ್ತು ಅಂತ ಊರೆಲ್ಲಾ ಡಂಗೂರ ಬಾರ್ಸು ಅಂತ ತನ್ನ ಗೆಳತಿಗೆ ಕಿವಿ ಮಾತು ಹೇಳಿದ್ದಾಳೆ ನೋಡಿ..! ಈ ವಿಷ್ಯ ಇಡೀ ಊರಿಗೆ ಗೊತ್ತಾಗ್ತಾ ಹೋಗಿದ್ದೇ ತಡ ಭೀಮಾ ನದಿ ತೀರದಲ್ಲಿ ಯುವತಿಯ ಪತ್ತೆಗಾಗಿ ಶೋಧ ಕಾರ್ಯ ನಡಿಯೋಕೆ ಶುರುವಾಯ್ತು. ಅರಣ್ಯ ಸಿಬ್ಬಂಧಿಯಿಂದ ಹಿಡಿದು, ಅಗ್ನಿ ಶಾಮಕ ಧಳ, ನುರಿತ ಈಜು ತಜ್ಞರೂ ಕೂಡ ಭೀಮ ನದಿ ಬಳಿ ಠಿಕಾಣಿ ಹೂಡಿದ್ರು..! ಇಷ್ಟೆಲ್ಲಾ ಶೋಧ ಕಾರ್ಯ ನಡೀತಾ ಇದ್ರೂ ಕೂಡ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ..! ಆಗ್ಲೇ ನೋಡಿ ಪೊಲೀಸರಿಗೆ ಅನುಮಾನ ಶುರುವಾಗಿದ್ದು..!
ಗೆಳತಿಯ ವಿಚಾರಣೆ ನಡೆಸಿದ ಪೊಲೀಸರು..!
ಇನ್ನು ಅಶ್ವಿನಿಯನ್ನು ಮೊಸಳೆ ಎಳೆದುಕೊಂಡೋಯ್ತು ಅಂತ ಊರೆಲ್ಲಾ ಪುಕಾರು ಎಬ್ಬಿಸಿದ್ದ ಆಕೆಯ ಗೆಳತಿ ಚೆನ್ನಮ್ಮನ ಮೇಲೆ ಪೊಲೀಸರಿಗೆ ಅನುಮಾನ ಬಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸತ್ಯ ಬಾಯಿ ಬಿಡದ ಆಕೆ ನಾವಿಬ್ರೂ ಜೊತೆಲೆ ಬಟ್ಟೆ ಹೊಗಿಯೋಕೆ ಹೋಗಿದ್ವಿ ಈ ವೇಳೆ ಮೊಸಳೆ ಬಂದು ಆಕೆಯನ್ನು ಎಳೆದುಕೊಂಡೋಯ್ತು. ಈ ದೃಶ್ಯ ನೋಡ್ತಾ ಇದ್ದಂತೆ ನಾನು ಜೋರಾಗಿ ಚೀರಾಡ್ದೆ. ಆದ್ರೆ ಆಕೆ ನನಗೆ ಸಿಗ್ಲೆ ಇಲ್ಲ ಅಂತ ಪೊಲೀಸ್ ಎದ್ರಿಗೆ ಸಖತ್ ಡ್ರಾಮಾ ಆಡೋಕೆ ಶುರು ಮಾಡಿದ್ಲು. ಆದ್ರೆ ಪೊಲೀಸರು ತಮ್ಮ ವಿಚಾರಣೆಯನ್ನ ಬೇರೆ ರೀತಿಯಲ್ಲಿ ತಗೊಂಡೋದಾಗ್ಲೆ ನೋಡಿ ಚೆನ್ನಮ್ಮ ನಿಜಾಂಶ ಬಾಯ್ಬಿಟ್ಟಿದ್ದು..! ಅಶ್ವಿನಿ ತನ್ನ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ. ಈ ವಿಷಯ ಊರಿಗೆ ತಿಳಿಬಾರ್ದು ಅಂತ ಆಕೆಯೇ ಈ ರೀತಿ ಸುಳ್ಳು ಹೇಳೋಕೆ ಹೇಳಿದ್ದು ಅಂತ ಸತ್ಯ ಬಾಯ್ಬಿಟ್ಟಿದ್ದಾಳೆ. ಅಲ್ಲಿಗೆ ಮೊಸಳೆ ಎಳೆದುಕೊಂಡೋದ ಕಟ್ಟು ಕಥೆಗೆ ಫುಲ್ ಸ್ಟಾಪ್ ಬಿತ್ತು..! ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಇನ್ನು 15 ದಿನದೊಳಗೆ ಅಶ್ವಿನಿ ಮದ್ವೆ ಬೇರೊಬ್ಬನ ಜೊತೆ ಆಗ್ಬೇಕಾಗಿತ್ತು. ಮನೇಲಿ ನೋಡಿದ ಹುಡುಗನ ಜೊತೆ ಮದ್ವೆ ಆಗೋಕೆ ರೆಡಿ ಇಲ್ಲದ ಕಾರಣ ಅಶ್ವಿನಿ ತಾನು ಪ್ರೀತಿಸಿದ್ದ ಹುಡುಗನ ಜೊತೆ ಎಸ್ಕೇಪ್ ಆಗೋಕೆ ಈ ರೀತಿ ಹೈ ಡ್ರಾಮ ಸೃಷ್ಠಿ ಮಾಡಿದ್ಲು ಅಂತ ತಿಳಿದು ಬಂದಿದೆ. ಒಟ್ಟಾರೆ ಈ ಪ್ರೇಮಿಗಳ ಹುಚ್ಚು ಆಟಕ್ಕೆ ಪೊಲೀಸರ ಸಮಯ ವ್ಯರ್ಥ ಆಗಿದ್ದಂತೂ ಸತ್ಯ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಆವಲಬೆಟ್ಟ ಫೇಮಸ್ ಸ್ಪಾಟ್‍ಗೆ ಭೇಟಿ ಮಾಡೋಕು ಮುನ್ನ ಈ ಸ್ಟೋರಿ ಓದಿ..!

ಮೋದಿಗೆ ಪತ್ರ ಬರೆದು ಜಿಲ್ಲಾಡಳಿತಕ್ಕೆ ಶಾಕ್ ಕೊಟ್ಟ ನಮನ.! ಪತ್ರದಲ್ಲೇನಿತ್ತು.?

ಗುಡ್‍ನ್ಯೂಸ್ : ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 4 ಲಕ್ಷಕ್ಕೆ .?

ಮುಸ್ಲಿಂ ಉದ್ಯೋಗಿಗಳಿಗೆ ಶುಕ್ರವಾರ ಪ್ರಾರ್ಥನೆ ಸಲ್ಲಿಸಲು 90 ನಿಮಿಷ ವಿರಾಮ

ಎಟಿಎಂ ಮುಂದೆ ಕ್ಯೂ ನಿಲ್ಲೊರ್ಗೆ ಇಲ್ಲಿದೆ ಸಂತಸದ ಸುದ್ದಿ

ಕೆಪಿಎಸ್‍ಸಿ: 1203 ಹುದ್ದೆಗೆ ಅರ್ಜಿ ಆಹ್ವಾನ

ಮನೆಯಲ್ಲೇ ನಕಲಿ ನೋಟು ತಯಾರಿಸುತ್ತಿದ್ದ ಡಾಕ್ಟರ್..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...