ಫೇಸ್‍ಬುಕ್‍ನಲ್ಲಿ ಕಮೆಂಟ್ ಮಾಡಿದ್ದ ಎಂಬ ಕ್ಷಲ್ಲುಕ ಕಾರಣಕ್ಕೆ ಬಿಜೆಪಿ ಶಾಸಕ ಕಾಗೆ ಅವರ ಹಿಂಬಾಲಿಗರು ಹಾಗೂ ಕುಟುಂಬಸ್ಥರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆಯೊಂದು ತಡವಾಗಿ ವರದಿಯಾಗಿದೆ..! ಜಿಲ್ಲೆಯ ಅಥಣಿ ತಾಲ್ಲೂಕಿನ ಉಗಾರ ಗ್ರಾಮದ ವಿವೇಕ್ ಶೆಟ್ಟಿಗೆ ಬಿಜೆಪಿ ಶಾಸಕ ಕಾಗೆ ಅವರ ಹಿಂಬಾಲಿಕರು ಹಲ್ಲೆ ನಡೆಸಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿವೇಕ್ ಶೇಟ್ಟಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಬಿಜೆಪಿ ಶಾಸಕ ಕಾಗೆ ಅವರ ವಿರೋಧಿ ಎನ್ನಲಾಗಿದೆ. ಫೇಸ್ಬುಕ್‍ನಲ್ಲಿ ಈತ ಕೆಟ್ಟದಾಗಿ ಕಮೆಂಟ್ ಮಾಡಿದ್ದಲ್ಲದೆ ಕಾಗೆ ಅವರ ಪುತ್ರಿ ಉರ್ಫ ಪುಟ್ಟಿಯ ವಾಟ್ಸಾಪ್‍ಗೆ ಕೆಟ್ಟದಾಗಿನ ಕಮೆಂಟ್ ಮಾಡಿದ್ದನಂತೆ. ಇದರಿಂದ ರೊಚ್ಚಿಗೆದ್ದ ಹಿಂಬಾಲಿಗರು ದೊಣ್ಣೆ, ಕತ್ತಿ, ಮೊದಲಾದ ಅಸ್ತ್ರಗಳನ್ನಿಡಿದು ಉಗಾರ ಗ್ರಾಮದ ವಿವೇಕ್ ಶೆಟ್ಟಿ ಮನೆಗೆ ನುಗ್ಗಿದ್ದಾರೆ. ಮನೆಯಿಂದ ದರದರನೆ ಎಳೆದಂತ ಶಾಸಕರ ಹಿಂಬಾಲಿಗರು ರಾಜು ಕಾಗೆ ಅವರ ಮನೆಗೆ ಕರೆ ತಂದು ಹಲ್ಲೆ ನಡೆಸಿದ್ದಾರೆ. ಘಟನೆ ನಡೆದು 8 ದಿನಗಳ ಬಳಿಕ ಪ್ರಕರಣ ಹೊರ ಬಂದಿದ್ದು ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಮತ್ತೆ ಒಂದಾಗಲಿದ್ದಾರೆ ಸುದೀಪ್ ದಂಪತಿ
195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರು ಒಂದು ಬಾರಿಯೂ ದಂಡ ಕಟ್ಲಿಲ್ಲ..!
ಗುಡ್ ನ್ಯೂಸ್: ಸದ್ಯದಲ್ಲೆ ಬಡವರ ಖಾತೆಗೆ ನೇರ ಹಣ ಪಾವತಿ..?
ಫಿಲ್ಮ್ ಫೇರ್‍ಗೆ ಸನ್ನಿ ಶಾರ್ಟ್ ಫಿಲ್ಮ್ ! #Sunny Leone Short film
ದಂಪತಿಗಳಿಗೆ ಉಡುಗೊರೆಯಾಗಿ ಕಾಂಡೋಮ್ ನೀಡಲಿದೆ ಸರ್ಕಾರ..!