ಭಾರತದ 11ನೇ ರಾಷ್ಟ್ರಪತಿಗಳಾಗಿದ್ದ ವಿಜ್ಞಾನಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಗೌರವಾರ್ತವಾಗಿ ತಯಾರಿಸಿದ್ದ ಅಲ್ವಿದಾ ಮ್ಯೂಸಿಕಲ್ ವಿಡಿಯೋಗೆ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಹಾಸನ ಮೂಲದ ಯುವಕರು ನಿರ್ಮಾಣ ಮಾಡಿದ್ದ ಅಲ್ವಿದಾ ಮ್ಯೂಸಿಕಲ್ ವಿಡಿಯೋಗೆ ಮುಂಬೈನಲ್ಲಿ ನಡೆದ 5ನೇ ಅಂತರಾಷ್ಟ್ರೀಯ ಕಿರು ಚಿತ್ರೋತ್ಸವದಲ್ಲಿ ಅತ್ಯುತ್ತಮ ‘ಹಾನರೆಬಲ್ ಜ್ಯೂರಿ ಮೆನ್ಶನ್ ಅವಾರ್ಡ್’ ದೊರಕಿದೆ. ಇನ್ನು ರಾಜ್ಯದ ಯುವಕರು ಒಟ್ಟುಗೂಡಿ ನಿರ್ಮಾಣ ಮಾಡಿದ್ದ ಈ ಮ್ಯೂಸಿಕಲ್ ವಿಡೀಯೋಗೆ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು ಹೆಮ್ಮೆಯ ಸಂಗತಿಯಾದ್ರೆ, ಅಂತರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಮ್ಯೂಸಿಕಲ್ ವಿಡಿಯೋಗೆ ಸಿಕ್ಕ ಮೊಟ್ಟ ಮೊದಲ ಅವಾರ್ಡ್ ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ. ದೇಶದ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದ್ದ ಕಲಾಂ ಅವರು ಜನರೊಂದಿಗೆ ಹೇಗೆ ಬೆರೆಯುತ್ತಿದ್ದರು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ನಿರ್ಮಾಣ ಮಾಡಲಾದ ಈ ಮ್ಯೂಸಿಕಲ್ ವಿಡಿಯೋ 2015ರ ಮಕ್ಕಳ ದಿನಾಚರಣೆಯ ವೇಳೆ ಬಿಡುಗಡೆ ಮಾಡಲಾಗಿತ್ತು. ಹಾಸನದ ಶಕೀಲ್ ಅಹಮ್ಮದ್, ಪ್ರಜೋತ್ ಡಿಸೋಜಾ ಆದಿಲ್ ನದಾಫ್, ಎನ್ ಸುಹಾಸ್, ನಿಶ್ಚಲ್ ದಂಬೆಕೋಡಿ ಹಾಗೂ ಸಿ.ಎಸ್ ಜಯಪ್ರಕಾಶ್ ಈ ಹಾಡಿನ ಹೊಣೆ ಹೊತ್ತಿದ್ದರು. ಮೊದಲಿಗೆ ಕನ್ನಡದಲ್ಲಿ ನಿರ್ಮಾಣ ಮಾಡಿದ್ದ ಈ ಹಾಡು ನಂತರದಲ್ಲಿ ಹಿಂದಿ ಭಾಷೆಗೆ ಆವತರಣಿಕೆ ಮಾಡಲಾಗಿತ್ತು. ಮ್ಯೂಸಿಕಲ್ ವಿಡಿಯೋ ನಿರ್ಮಾಣಕ್ಕೆ ತಂಡ 3.4 ಲಕ್ಷ ಖರ್ಚು ಮಾಡಿದ್ರು.
Music Video :
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಖಂಡಿಸುವ ಪ್ರಥಮ್ ನುಡಿದ ಭವಿಷ್ಯ ನಿಜವಾಗುತ್ತಾ??
ಭಾರಿ ಗಿಫ್ಟ್ ನೀಡೋಕೆ ಮುಂದಾಗಿದೆ ಜಿಯೋ..!
ರಯೀಸ್ ಚಿತ್ರ ಬಿಡುಗಡೆ ಮಾಡ್ಬೇಡಿ: ಶಿವಸೇನೆ ಧಮ್ಕಿ..!
ಅಧಿಕಾರಿಗಳ ಕರಾಳ ಮುಖವನ್ನು ವಿಡಿಯೋ ಮೂಲಕ ಬಯಲಿಗೆಳೆದ ಯೋಧ..!
ಇನ್ಮುಂದೆ ಖಾಸಗೀ ಆಸ್ಪತ್ರೆಯಲ್ಲಿ ಫ್ರೀ ಟ್ರೀಟ್‍ಮೆಂಟ್ ಇರೋದಿಲ್ಲ..!
ಮತ್ತೆ ಒಂದಾಗಲಿದ್ದಾರೆ ಸುದೀಪ್ ದಂಪತಿ
195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರು ಒಂದು ಬಾರಿಯೂ ದಂಡ ಕಟ್ಲಿಲ್ಲ..!