ನನ್ನ ನಾಡಿ ಮಿಡಿತವೆಲ್ಲವೂ ಬಿಜೆಪಿಯ ಜಪ ಮಾಡ್ತಾ ಇದೆ. ಎಂತಹ ಸಂದರ್ಭದಲ್ಲೂ ನಾನು ಬಿಜೆಪಿ ಬಿಟ್ಟು ಪಕ್ಷ ದ್ರೋಹ ಮಾಡುವುದಿಲ್ಲ ಎಂದು ಹೇಳುತ್ತಿದ್ದ ಕೆ.ಎಸ್ ಈಶ್ವರಪ್ಪ ಈಗ ಯಾಕೋ ಮಂಕಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಾ ಇದೆ. ಅಲ್ಲದೆ ಈಶ್ವರಪ್ಪ ಪಕ್ಷ ಬಿಡುವ ತೀರ್ಮಾನವನ್ನು ಮಾಡಿದ್ದಾರಾ..? ಎಂಬ ಅನುಮಾನಗಳು ಕಾಡ ತೊಡಗಿದೆ..! ಆದ್ರೆ ಬಿಜೆಪಿ ಮೂಲಗಳ ಪ್ರಕಾರ ಈಶ್ವರಪ್ಪ ಅಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳೊದಿಲ್ಲ ಎಂಬ ಭರವಸೆಯ ಮಾತುಗಳನ್ನಾಡಿದ್ರೂ.. ಅವರ ಆಪ್ತರ ಪ್ರಕಾರ ಅವರು ಈಗಾಗ್ಲೆ ಪಕ್ಷದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಾ ಇದೆ..! ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ಎಸ್ ಯಡಿಯೂರಪ್ಪ ಆಯ್ಕೆಯಾದ ನಂತರ ಇವರಿಬ್ಬರ ನಡುವೆ ಒಳ ಜಗಳಗಳು ನಡೆಯುತ್ತಲೆ ಇತ್ತು. ಇದರಿಂದ ಬೇಸತ್ತಿರುವ ಈಶ್ವರಪ್ಪ ಪಕ್ಷ ತೊರೆದು ಪ್ರಾದೇಶಿಕ ಪಕ್ಷದತ್ತ ಮುಖ ಮಾಡಿದ್ದಾರೆ ಎಂಬ ಮಾತು ಕೇಳಿ ಬರ್ತಾ ಇದೆ..!
ಈಗಾಗ್ಲೆ ಪ್ರಾದೇಶಿಕ ಪಕ್ಷ ಸೇರ್ಪಡೆಯ ಕುರಿತಂತೆ ಹಿರಿಯ ನಾಯಕರೊಬ್ಬರನ್ನು ಭೇಟಿ ನೀಡಿ ಮಾತುಕತೆ ನಡೆಸಿದ್ದಾರಂತೆ ಈಶ್ವರಪ್ಪ. ಆದ್ರೆ ಪ್ರಾದೇಶಿಕ ಪಕ್ಷದ ಪ್ರಮುಖರಲ್ಲೊಬ್ಬರು ಬಂದು ನಿರ್ಣಯ ಕೈಗೊಂಡ ಮೇಲೆಯೇ ಇವಕ್ಕೆಲ್ಲಾ ಸ್ಪಷ್ಟತೆ ಸಿಗುವ ಸಾಧ್ಯತೆಗಳಿವೆ. ಇನ್ನು ಪ್ರಾದೇಶಿಕ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎನ್ನಲಾದ ವದಂತಿಗಳು ಸತ್ಯವಾದರೆ ಪಕ್ಷಕ್ಕೆ ದೊಡ್ಡಬಲ ಸಿಗಲಿದೆ ಎಂಬ ಮಾತುಗಳು ಒಂದುಕಡೆಯಾದ್ರೆ, ಹಿಂದುತ್ವವನ್ನು ನಂಬಿಕೊಂಡು ಬಂದಿರುವ ಈಶ್ವರಪ್ಪ ತಮ್ಮ ಪಕ್ಷಕ್ಕೆ ಸೇರ್ಪಡೆಯಾದ್ರೆ ಅಲ್ಪ ಸಂಖ್ಯಾತ ಮತಗಳು ಕೈತಪ್ಪಿ ಹೋಗುತ್ತದೆ ಎಂಬ ಭಯವೂ ಪಕ್ಷದ ಸದಸ್ಯರಿಗೆ ಕಾಡತೊಡಗಿದೆ. ಆದ್ರೂ ಕೂಡ ಪ್ರಬಲ ನಾಯಕನೊಬ್ಬ ಪಕ್ಷಕ್ಕೆ ಬರ್ತಾರೆ ಅಂದ್ರೆ ಅದನ್ನು ಬೇಡ ಅನ್ನೋಕಾಗುತ್ತಾ..? ಅನ್ನೊ ಗೊಂದಲದಲ್ಲೂ ಮುಖಂಡರಿದ್ದಾರೆ. ಅದ್ರಲ್ಲೂ ಈ ಬಾರಿಯ ಚುನಾವಣೆಯಲ್ಲಿ ಯಡಿಯೂರಪ್ಪ ಅವರಿಗೆ ಪೈಪೋಟಿ ನೀಡೋಕೆ ಈಶ್ವರಪ್ಪ ಅವರಿಗೆ ಮಾತ್ರ ಸಾಧ್ಯ ಎಂದು ನಂಬಿರುವ ಮುಖಂಡರು ಪ್ರಬಲ ನಾಯಕರನ್ನು ಮಣ್ಣು ಮುಕ್ಕಿಸೋಕೆ ಇದೇ ಸರಿಯಾದ ಸಮಯ ಎಂದು ಆಲೋಚನೆ ನಡೆಸಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ಆಪ್ತರಲ್ಲೊಬ್ಬರು ಜೆಡಿಎಸ್ ಪಕ್ಷ ಸೇರುವ ಇಂಗಿತ ವ್ಯಕ್ತ ಪಡಿಸಿದ್ದು ಈ ಸುವರ್ಣಾವಕಾಶಕ್ಕಾಗಿ ಪ್ರಾದೇಶಿಕ ಪಕ್ಷದ ನಾಯಕರು ಕಾಯುತ್ತಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಸದ್ಯದಲ್ಲೆ ಬೆಂಗಳೂರಲ್ಲಿ ಪ್ರತ್ಯೇಕ ಸೈಬರ್ ಠಾಣೆ: ಪ್ರವೀಣ್ ಸೂದ್
ಸ್ಯಾಂಡಲ್‍ವುಡ್ ಮಿಸ್ಟರ್ ಪರ್ಫೆಕ್ಟ್ ಅಂತೆ ಈ ನಟ..!