ಬಿಜೆಪಿ ಪಕ್ಷದ ಇಬ್ಬರು ಪ್ರಮುಖ ನಾಯಕರುಗಳ ಒಳಜಗಳದ ಎಫೆಕ್ಟ್ ರಾಷ್ಟ್ರೀಯ ಸೇವಾ ಸಂಘ (ಆರ್‍ಎಸ್‍ಎಸ್)ದ ಮೇಲೂ ಬಿದ್ದಿದೆ ಅಂತ ಕಾಣ್ಸುತ್ತೆ. ಯಾಕಂದ್ರೆ ಇಂದಿನಿಂದ ಮೂರು ದಿನಗಳ ಕಾಲ ಆರ್‍ಎಸ್‍ಎಸ್‍ನ ಬೈಠಕ್ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಬಿಎಸ್ ಯಡಿಯೂರಪ್ಪ ಭಾಗವಹಿಸೋದಿಲ್ವಂತೆ. ಯಾಕಂದ್ರೆ ಆರ್‍ಎಸ್‍ಎಸ್ ಬಿಎಸ್‍ವೈ ಅವರನ್ನು ಸಭೆಗೆ ಭಾಗವಹಿಸುವಂತೆ ಹೇಳಿಲ್ವಂತೆ. ಹಾಗಾಗಿ ಸಭೆಗೆ ಹೋಗ್ತಾ ಇಲ್ಲ ಅಂತ ಹೇಳುವ ಮೂಲಕ ಅಚ್ಚರಿಯ ಬೆಳವಣಿಗೆಗಳಿಗೆ ಎಡೆ ಮಾಡಿ ಕೊಟ್ಟಿದ್ದಾರೆ..! ಬೆಂಗಳೂರಿನ ಕೇಶವಾ ಕೃಪಾದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಬೈಠಕ್ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಸಂಘದ 40 ಸಂಘಟನೆಗಳ ಸದಸ್ಯರು, ಬಿಜೆಪಿ ಪಕ್ಷದ 13 ಮಂದಿ ಪ್ರಮುಖ ನಾಯಕರುಗಳು ಭಾಗವಹಿಸಲಿದ್ದಾರೆ. ಇನ್ನೊಂದೆಡೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಪ್ರತ್ಯೇಕ ಸಂಧಾನ ಸಭೆಯನ್ನು ಆರ್‍ಎಸ್‍ಎಸ್ ಮುಂದೂಡಿದೆ ಎನ್ನಲಾಗಿದೆ. ಒಟ್ನಲ್ಲಿ ಮೂರು ದಿನಗಳ ಆರ್‍ಎಸ್‍ಎಸ್ ಬೈಠಕ್ ಕೇವಲ ಪಕ್ಷ ಸಂಘಟನೆಯ ವಿಚಾರಕ್ಕೆ ಮಾತ್ರ ಸೀಮಿತವೋ..? ಅಥವಾ ಪಕ್ಷದ ಪ್ರಮುಖ ಇಬ್ಬರು ನಾಯಕರುಗಳ ಜಗಳ ನಿಲ್ಲಿಸಲು ಯತ್ನಿಸುತ್ತಾ ಎಂಬುದೆ ಯಕ್ಷ ಪ್ರಶ್ನೆಯಾಗಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?
ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!
ಸನ್ನಿ ಜೊತೆ ಸೆಲ್ಫಿ ಬೇಕಾ..? ಹಾಗಾದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ..!
ಬಿಗ್‍ಬಾಸ್ ಮನೆಯಲ್ಲಿ ಕಲ್ಯಾಣ ಭಾಗ್ಯ..!
ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ ಶಿಕ್ಷಕ ಅರೆಸ್ಟ್