ಪುಪೀಲ್ ಟ್ರೀ ಅವರ ನೇತೃತ್ವದಲ್ಲಿ ಖ್ಯಾತ ವೈಲ್ಡ್ ಲೈಫ್ ಛಾಯಾಗ್ರಾಹಕರಾದ ಶಿವಶಂಕರ್ ಬಣಗಾರ್ ಅವರ ಆಯ್ದ ಛಾಯಚಿತ್ರಗಳ ಪ್ರದರ್ಶನ ಎಗ್ಸಿಬಿಶನ್ ಬಳ್ಳಾರಿಯಲ್ಲಿ ಪ್ರಾರಂಭವಾಗಿದೆ. ನಗರದ ಸುಚಿತ್ರಾ ಆರ್ಟ್ ಸೆಂಟರ್‍ನಲ್ಲಿ ಜನವರಿ 22ನೇ ತಾರೀಖು ಭಾನುವಾರದಿಂದ ಛಾಯಾಚಿತ್ರ ಎಗ್ಸಿಬಿಷನ್ ಆರಂಭವಾಗಿದ್ದು, ತಾಳೂರು ರಸ್ತೆ ಪುಪೀಲ್ ಟ್ರೀ ಶಾಲೆಯಲ್ಲಿ ಸಂಜೆ 3.30 ರಿಂದ 4.30ರ ವರೆಗೆ ವೀಕ್ಷಕರಿಗಾಗಿ ತೆರೆದಿರುತ್ತದೆ. ಈ ಫೋಟೋ ಎಗ್ಸಿಬಿಷನ್ ಇದೇ ತಿಂಗಳ 28ರವರೆಗೂ ನಡೆಯಲಿದೆ. ಫೋಟೋ ಪ್ರದರ್ಶನ ಮೇಳದಲ್ಲಿ ಖ್ಯಾತ ಹವ್ಯಾಸಿ ಛಾಯಗ್ರಾಹರಾದ ಶಿವಶಂಕರ್ ಬಣಗಾರ್ ಅವರ ಕ್ಯಾಮಾರಾದಿಂದ ಮೂಡಿ ಬಂದಿರುವ ಫೋಟೋಗಳಲ್ಲಿ ಆಯ್ದ ಕೆಲವು ಫೊಟೋಗಳ ಪ್ರದರ್ಶನವನ್ನು ಆಯೋಜಿಸಲಾಗಿದ್ದು ಆಸಕ್ತ ಛಾಯಾಚಿತ್ರ ಪ್ರೀಯರು ಹಾಗೂ ಪರಿಸರ ಪ್ರೇಮಿಗಳು ಒಮ್ಮೆ ಛಾಯಾಚಿತ್ರ ಎಗ್ಸಿಬಿಷನ್‍ಗೆ ಭೇಟಿ ನೀಡಬಹುದು. ಈ ಪ್ರದರ್ಶನ ಮೇಳದಲ್ಲಿ ಹಂಪಿಯ ಐತಿಹಾಸಿ ಸ್ಮಾರಕಗಳು, ಶಿಲ್ಪಕಲೆಗಳು, ಸೂರ್ಯೋಧಯ ಹಾಗೂ ಸೂರ್ಯಸ್ಥಮಾನದ ಸಂದರ್ಭದಲ್ಲಿ ತೆಗೆದಂತ ದೇಗುಲಗಳ ಚಿತ್ರಗಳು ಸೇರಿದಂತೆ ಇನ್ನು ಅನೇಕ ಪ್ರಾಕೃತಿಕ ಚಿತ್ರಗಳು ನೋಡುಗರ ಮನ ಸೆಳೆಯುತ್ತಿದೆ. ಸುಮಾರು 30ಕ್ಕೂ ಹೆಚ್ಚು ಫೋಟೋಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದು, ಛಾಯಾಚಿತ್ರ ಎಗ್ಸಿಬಿಷನ್ ಕುರಿತು ಉತ್ತಮ ಪ್ರತಿಕ್ರಿಯೆ ಮೂಡಿ ಬಂದಿದೆ.
ಯಾರು ಈ ಶಿವಶಂಕರ್ ಬಣಗಾರ್..?
ಶಿವಲಿಂಗಪ್ಪ ಅವರ ಮಗನಾದ ಶಿವಶಂಕರ್ ಬಣಗಾರ್ ಮೂಲತಃ ಹೊಸಪೇಟೆಯ ಮರಿಯಮ್ಮನಹಳ್ಳಿಯವರು. ಮಾನಸಗಂಗೋತ್ರಿಯಲ್ಲಿ ಪತ್ರಿಕೋದ್ಯಮ ವ್ಯಾಸಾಂಗ ಮಾಡಿದ ಇವರು ಕೆಲವು ಸಮಯಗಳ ಕಾಲ ಪತ್ರಕರ್ತ ವೃತ್ತಿಯಲ್ಲಿ ಗುರುತಿಸಿಕೊಂಡವರು. ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮೀಡಿಯಾದಲ್ಲೂ ಕಾರ್ಯ ನಿರ್ವಹಿಸಿದ ಕೀರ್ತಿ ಇವರಿಗಿದೆ. ಫೋಟೋಗ್ರಫಿಯನ್ನು ಒಂದು ಹವ್ಯಾಸವನ್ನಾಗಿ ಮಾಡಿಕೊಂಡ ಶಿವಶಂಕರ್ ಖ್ಯಾತ ವೈಲ್ಡ್ ಲೈಫ್ದ್ ಫೋಟೋಗ್ರಾಫರ್ ಪಂಪಯ್ಯ ಸ್ವಾಮಿ ಮಲೆಮಠ್ ಅವರೊಂದಿಗೆ ಸೇರಿ ಪಕ್ಷಿಗಳ ಚಿತ್ರ ತೆಗೆಯಲು ಆರಂಭಿಸಿದರು. ಆನಂತರ ತಮ್ಮ ಸ್ವಗ್ರಾಮದಲ್ಲೆ ಇರುವ ಐತಿಹಾಸಿಕ ಸ್ಮಾರಕ ಹಂಪಿ ಹಾಗೂ ಸುತ್ತಮುತ್ತಲ ಚಿತ್ರಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯಲು ಆರಂಭಿಸಿದರು. ಅದರಲ್ಲೂ ಹಂಪಿ ಪಟ್ಟದಕಲ್ಲು ಹಾಗೂ ಸುತ್ತಲಿನ ಭಾಗದಲ್ಲಿನ ಸೂರ್ಯೋಧಯ ಹಾಗೂ ಸೂರ್ಯಸ್ಥಮಾನ ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ಖ್ಯಾತಿ ಪಡೆದರು. ಇವರು ತೆಗೆದಂತಹ ಚಿತ್ರಗಳಲ್ಲಿ ಕೆಲವು ಚಿತ್ರಗಳು ಜಪಾನ್ ಎಗ್ಸಿಬಿಷನ್‍ನಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಅಲ್ಲದೆ ಹಲವಾರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪತ್ರಿಕೆಗಳಲ್ಲೂ ಕೂಡ ಇವರ ಚಿತ್ರ ಪ್ರಕಟವಾಗಿದೆ. ಅಮೇರಿಕಾದಲ್ಲಿ ನಡೆದ ಅಕ್ಕಾ ಸಮ್ಮೇಳನದಲ್ಲಿ ಶಿವಶಂಕರ್ ಅವರು ರಚಿಸಿದ ‘ಐಸಿರಿ’ ಛಾಯಾಚಿತ್ರವುಳ್ಳ ಪುಸ್ತಕವನ್ನು ಕೂಡ ಬಿಡುಗಡೆ ಇವರ ಖ್ಯಾತನಾಮವನ್ನು ತಿಳಿಸುತ್ತದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಈ ಬಾರಿಯ ಬಿಗ್‍ಬಾಸ್ ಫೈನಲ್ ಗೆಸ್ಟ್ ಯಾರು ಗೊತ್ತಾ..?
ಮಾಜಿ ಕ್ರಿಕೆಟಿಗ ವೀರು ಈಗ ಜಬರ್ದಸ್ತ್ ಸಿಂಗರ್
ಜಯಲಲಿತ ಜೀವನಾಧಾರಿತ ಸಿನಿಮಾ ಮಾಡ್ತಾರಂತೆ ಆರ್.ಜಿ.ವಿ..!
LIVE : ಬಿಗ್‍ಬಾಸ್ ಕನ್ನಡ ಸೀಸನ್-04 ಈ ಮೂವರಲ್ಲಿ ಫೈನಲ್ ತಲಪುವವರು ಯಾರು.?
ರಾಜಮೌಳಿಯ ಮಹಾಭಾರತದಲ್ಲಿ ಸುದೀಪ್ ಕರ್ಣ?