ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ "ಪ್ರೇಮ"…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

Date:

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಯಾವ ಕೆಲಸ ಮಾಡಿದ್ರೂ ಅವಳನ್ನು ಏನೋ ಒಂಥರಾ ನೋಡುವುದು ಹಿಂದಿನಿಂದಲೂ ಬೆಳೆದು ಬಂದಿದೆ..! ಹೆಣ್ಣು ಹುಟ್ಟಿದಾಗಲೇ ಆಕೆಗೆ ಒಂದಷ್ಟು ಕಟ್ಟುಪಾಡುಗಳನ್ನು ಹಾಕ್ತಾರೆ..! ಬೆಳೆಯುತ್ತಾ ಬೆಳೆಯುತ್ತಾ ಆಕೆ ಗಂಡಿಗೆ ತಲೆಭಾಗಿ ಬದುಕ ಬೇಕೆಂದೇ ಹೇಳ್ತಾರೆ..! ಯಾರಾದರೊಬ್ಬಳು ಹೆಣ್ಣು ಮಗಳು ಗಂಡಿಗೆ ಸೆಡ್ಡು ಹೊಡೆದು ನಿಂತರೆ ಅವಳು ಸಮಾಜದ ದೃಷ್ಟಿಯಲ್ಲಿ ಗಂಡುಬೀರಿಯಾಗಿ ಬಿಡ್ತಾಳೆ..! ಮಹಿಳೆ ಪುರುಷರಿಗೆ ಸಮಾನಳೆಂದು ಕರೆಯುವುದೂ ಕೂಡ ಬಾಯಿ ಮಾತಾಗಿತ್ತಷ್ಟೇ..! ಆದ್ರೆ ಇವತ್ತು ಹೆಣ್ಣು ತನ್ನ ಸುತ್ತಲು ವಿಧಿಸಿದ ನಿರ್ಬಂಧಗಳ ಚೌಕಟ್ಟನ್ನು ಮುರಿದು ಮುನ್ನುಗ್ಗುತ್ತಿದ್ದಾಳೆ..! ಮಹಿಳೆಯರು ಪುರುಷರಿಗಿಂತ ಹೆಚ್ಚು ಹೆಚ್ಚು ದುಡಿಯಬಲ್ಲ ಸಾಮರ್ಥ್ಯವನ್ನೂ ಸ್ವಪ್ರಯತ್ನದಿಂದಲೇ ಗಳಿಸಿಕೊಂಡಿದ್ದಾರೆ. ಗಂಡು ಮಕ್ಕಳಿಲ್ಲದ ತಂದೆ ತಾಯಿಗೆ ಮಗ ಮತ್ತು ಮಗಳಾಗಿ ಆಕೆ ಇದ್ದಾಳೆ..! ತಂದೆತಾಯಿಯನ್ನು ಕಡೆಗಾಣಿಸುವ ಗಂಡು ಮಕ್ಕಳೇ ನಾಚುವಂತೆ ತನ್ನ ಕರ್ತವ್ಯವನ್ನು ಹೆಣ್ಣು ನಿಭಾಯಿಸ್ತಾ ಬಂದಿದ್ದಾಳೆ..! ಬರುತ್ತಿದ್ದಾಳೆ..! ಪುರುಷನಿಗೆ ಮಾತ್ರ ಸೀಮಿತವೆಂಬಂತಿದ್ದ ಕೆಲಸಗಳಲ್ಲಿಯೂ ಹೆಣ್ಣು ತನ್ನನ್ನು ತಾನು ಗುರುತಿಸಿಕೊಂಡು ತನ್ನ ಸಾಮಾಥ್ರ್ಯವನ್ನು ಜಗತ್ತಿಗೇ ಸಾರಿ ಸಾರಿ ಹೇಳ್ತಾ ಇದ್ದಾಳೆ..!
ಮಹಿಳೆಯರು ಕಂಡಕ್ಟರ್ ಆಗಿ, ಡ್ರೈವರ್ ಆಗಿಯೂ ಕೆಲಸ ಮಾಡ್ತಾ ಇದ್ದಾರೆ..! ನೀವು ನಮ್ಮ ಕರ್ನಾಟಕದಲ್ಲಿ ತುಂಬಾ ಜನ ಮಹಿಳಾ ಕಂಡಕ್ಟರ್ ಗಳನ್ನು ನೋಡಿದ್ದೀರಿ…! ಬಟ್, ಲೇಡಿ ಬಸ್ ಡ್ರೈವರನ್ನು ನೋಡಿದ್ದೀರಿಯೇ..? ಯೋಚನೆ ಮಾಡುವುದೇನು ಬಂತು ಸ್ವಾಮಿ, ನೋಡಿರಲಿಕ್ಕೆ ಚಾನ್ಸೇ ಇಲ್ಲ..! ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ನಲ್ಲಿ ಓಡಾಡುವವರಾಗಿದ್ರೆ ಮಾತ್ರ ಮಹಿಳಾ ಬಸ್ ಡ್ರೈವರ್ ಅನ್ನು ನೋಡಿರ್ತೀರಾ..! ಬಿಎಂಟಿಸಿ ಬಸ್ಸಲ್ಲೇ ಪ್ರಯಾಣಿಸುವವರಾದರೂ ಈ ಡ್ರೈವರ್ರನ್ನು ಎಲ್ಲರೂ ನೋಡಿರಲಿಕ್ಕೆ ಚಾನ್ಸೇ ಇಲ್ಲ..! ಯಾಕಂದ್ರೆ ಇಡೀ ಕರ್ನಾಟಕದಲ್ಲಿ ಇರುವುದು ಒಬ್ಬರೇ ಒಬ್ಬರು ಮಹಿಳಾ ಬಸ್ ಡ್ರೈವರ್..! ಅವರನ್ನು ಎಲ್ಲರೂ ಹೇಗೆ ನೋಡಿರೋಕೆ ಸಾಧ್ಯ..!?
ಯಸ್, ಕರ್ನಾಟಕದಲ್ಲಿರುವ ಏಕೈಕ ಮಹಿಳಾ ಬಸ್ ಡ್ರೈವರ್ ಅಂದ್ರೆ ಇವರೊಬ್ಬರೇ..! ಹೆಸರು, “ಪ್ರೇಮ ರಾಮಪ್ಪ ನಡುಬಟ್ಟಿ”. ಇವರಿಗೆ ಚಿಕ್ಕಂದಿನಿಂದಲೂ ಡ್ರೈವರ್ ಆಗಬೇಕೆಂಬ ಆಸೆ ಇತ್ತು..! ಆದ್ರೆ ಇದನ್ನೇ ವೃತ್ತಿಯನ್ನಾಗಿಸಿಕೊಳ್ಳುತ್ತೇನೆಂಬ ಕನಸು ಇರಲಿಲ್ಲ..! ಆದ್ರೆ ಇದನ್ನೇ ವೃತ್ತಿಯಾಗಿಸಿಕೊಳ್ಳಬೇಕಾದ ಅನಿವಾರ್ಯತೆ ಇವರಿಗೆ ಬರುತ್ತೆ..! ಪಾಪ, ದುರಾದೃಷ್ಟವಶಾತ್ ಇವರ ಗಂಡ ತೀರಿಕೊಳ್ತಾರೆ..! ಗಂಡ ತೀರಿಕೊಂಡ ಬಳಿಕ ತನ್ನ ತಾಯಿ ಮತ್ತು 11 ವರ್ಷದ ಮಗುವನ್ನು ನೋಡಿಕೊಳ್ಳಲಿಕ್ಕಾಗಿ ಡ್ರೈವರ್ ವೃತ್ತಿಯನ್ನೇ ಅವಲಂಭಿಸ್ತಾರೆ..! ಅದೇ ಜೀವನಕ್ಕೆ ಆಧಾರವಾಗಿದೆ..!
ಬಸ್ ಡ್ರೈವರ್ ಆಗೋ ಮೊದಲು ಇವರಲ್ಲಿ ಫೋರ್ ವೀಲರ್ ಪರವಾನಿಗೆ ಅಥವಾ ಡ್ರೈವಿಂಗ್ ಲೈಸೆನ್ಸ್ ಮಾತ್ರ ಇತ್ತು..! ಆದ್ರೆ ಕಾರು ಚಾಲನೆಗೂ ಬಸ್ ಚಾಲನೆಗೂ ವ್ಯತ್ಯಾಸವಿದೆ..! ಕಾರನ್ನೇ ಓಡಿಸಿಕೊಂಡು ಇದ್ರೆ ಆಗಲ್ಲ, ಬಸ್ ಚಾಲಕಳಾಗಬೇಕೆಂಬ ಹಠದಿಂದ ಲಾರಿ ಮತ್ತಿತರ ಬೃಹತ್ ವಾಹನಗಳ ಡ್ರೈವಿಂಗ್ ಕಲಿತು ಅದರ ಪರವಾನಿಗೆಯನ್ನು ಪಡೆಯುತ್ತಾರೆ..! ನಂತರ ಬಿಎಂಟಿಸಿಯಲ್ಲಿ ತರಬೇತಿ ಪಡೆದು ಮಾರ್ಗ ಸಂಖ್ಯೆ 171ರ ಬಿಎಂಟಿಸಿ ಬಸ್ ಡ್ರೈವರ್ ಆಗ್ತಾರೆ..! ನಂತರ ಸ್ವಲ್ಪ ಸಮಯ ಶಿವಾಜಿನಗರ ದಿಂದ ಬೇಗೂರಿಗೆ ಹೋಗುವ ಬಸ್ನಲ್ಲಿ (362) ಡ್ರೈವರ್ ಆಗಿದ್ರು..! ಈಗ ಮೆಜೆಸ್ಟಿಕ್ ನಿಂದ ಜಯನಗರ ರೂಟ್ ನ ಬಿಎಂಟಿಸಿ ಚಾಲಕಿ ಆಗಿದ್ದಾರೆ..! ಸಧ್ಯಕ್ಕೆ ಇಡೀ ಕರ್ನಾಟಕದಲ್ಲಿಯೇ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ ಅಂದ್ರೆ ಪ್ರೇಮ ರಾಮಪ್ಪ ನಡುಬಟ್ಟಿ..! ಸಧ್ಯಕ್ಕೆ ಏಕೈಕ ಮಹಿಳಾ ಬಸ್ ಡ್ರೈವರ್ ಕೂಡ ಇವರೇ..!
ಇತ್ತೀಚೆಗೆ ಎಲ್ಲಾ ಬಿಎಂಟಿಸಿ ಡ್ರೈವರ್ ಗಳು ಸ್ಟ್ರೈಕ್ ಮಾಡಿದಾಗ ಈಕೆ ಅಂದೂ ಕೂಡ ಕೆಲಸ ಮಾಡಿದ್ದರು..! ಅದಕ್ಕಾಗಿಯೇ ಬಿಎಂಟಿಸಿ 10000ರೂ ಬಹುಮಾನವನ್ನು ನೀಡಿತ್ತು..!
ಎನಿವೇ, “ಪ್ರೇಮ ರಾಮಪ್ಪ ನಡುಬಟ್ಟಿ” ಎಲ್ಲಾ ಮಹಿಳೆಯರಿಗೂ ಪ್ರೇರಣೆ..! ಇವರ ಬಗ್ಗೆ ಮಾತನಾಡಲಿಕ್ಕೆ ಹೆಮ್ಮೆ ಅನಿಸುತ್ತೆ..! ನೀವೂ “ಪ್ರೇಮ ರಾಮಪ್ಪ ನಡುಬಟ್ಟಿ”ಯರನ್ನು ನೋಡ್ಬೇಕಾ..? ಮಾತನಾಡಿಸಬೇಕಾ..? ಅಥವಾ ಅವರು ಡ್ರೈವ್ ಮಾಡ್ತಾ ಇರೋ ಬಸ್ಸಲ್ಲೊಮ್ಮೆ ಹೊಗ್ಬಬೇಕಾ..? ಹಾಗಾದ್ರೆ, ಒಂದ್ ಕೆಲಸ ಮಾಡಿ, ಮೆಜೆಸ್ಟಿಕ್ ಗೆ ಹೋಗಿ ಅವರು ಡ್ರೈವರ್ ಆಗಿರೋ ಬಸ್ ಯಾವುದೆಂದು ತಿಳಿದು ಒಮ್ಮೆ ಜಯನಗರದತ್ತ ಪ್ರಯಾಣ ಬೆಳೆಸಿ, ಹಾಗೇ ಸುಮ್ಮನೇ..! ಅದಕ್ಕೂ ಮೊದಲು ಒಂದ್ ಸಣ್ಣ ವೀಡಿಯೋ ಇದೆ.. ನೋಡ್ರೀ ಇಲ್ಲಿ..

Video :

  • ಶಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!

ಇವರೆಂಥಾ ಸ್ವಾಭಿಮಾನಿ, ಸ್ವಾವಲಂಭಿ ಅಜ್ಜಿ..! ವಯಸ್ಸು 78, ಆದ್ರೂ…!

ತಿನ್ನುವ ಮುನ್ನ ಯೋಚಿಸು ಚಿನ್ನಾ..! ನಿಮ್ಮ ತಿಂಡಿ, ತಿನಿಸು ಎಷ್ಟು ಸುರಕ್ಷಿತ..?

ಹತ್ತು ವರ್ಷದ ಹುಡುಗನಿಗೆ ಅದೆಂಥಾ ಜವಬ್ದಾರಿ..! ಈತನ ಬುದ್ಧಿ ಎಲ್ಲರಿಗೂ ಬರಲ್ಲ ಕಣ್ರೀ..!

ಗಂಡ ಹೆಂಡತಿಗೆ ಹೊಡೆದ್ರೆ ಈ ನಾಯಿ ಏನು ಮಾಡುತ್ತೆ ಅಂತ ನೋಡಿ..! ಇದು ಶಾಂತಿಪ್ರಿಯ ನಾಯಿ – ಭೀಮ್..!

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಕ್ರೀಡಾ ಇತಿಹಾಸದಲ್ಲಿಯೇ ಅತೀ ದುಬಾರಿ ಟಿಕೇಟ್ ಯಾವುದು ಗೊತ್ತೇ..?

ರಿಯಲ್ ಲೈಫ್ ನ ರಿಯಲ್ ಹೀರೋಗಳು..! ಏನೂ ಇಲ್ಲದವರು ಏನೇನೋ ಆಗಿಬಿಟ್ಟರು..!

ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್

ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?

ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

 ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...