ಯೋಧರು-ಬಂಡುಕೋರರ ನಡುವೆ ಭೀಕರ ಕಾಳಗಕ್ಕೆ 70ಕ್ಕೂ ಹೆಚ್ಚು ಬಲಿ.

Date:

ಯೆಮನ್‍ನ ಕರಾವಳಿ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವ ಉಗ್ರರನ್ನು ಸದೆಬಡೆಯಲು ಅಲ್ಲಿನ ಸರ್ಕಾರ ಕಾರ್ಯಚರಣೆ ಕೈಗೊಂಡಿದ್ದು ಘಟನೆಯಲ್ಲಿ ಸೇನಾ ಪಡೆಗಳು ಹಾಗೂ ಬಂಡುಕೋರರು ಸೇರಿದಂತೆ 70ಕ್ಕೂ ಅಧಿಕ ಜನರು ಮೃತಪಟ್ಟಿದ್ದು ಅನೇಕ ಮಂದಿಗೆ ಗಂಭೀರ ಗಾಯಗಳಾಗಿವೆ. ಬಾಬ್ ಅಲ್-ಮನ್‍ದಬ್ ಜಲ ಸಂಧಿ ಬಳಿ ಸೌದಿ ನೇತೃತ್ವದ ಮಿತ್ರ ಪಡೆಗಳು ನಡೆಸಿದ ವಾಯು ದಾಳಿ ಮತ್ತು ಕದನದಲ್ಲಿ 50ಕ್ಕೂ ಹೆಚ್ಚು ಶಿಯಾ ಹುತಿ ಬಂಡುಕೋರರು ಮತ್ತು ಮಾಜಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಾಲ್ಹೆಗೆ ನಿಷ್ಠೂರರಾಗಿರುವ ಯೋಧರು ಮೃತಪಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ ಮೃತಪಟ್ಟವರಲ್ಲಿ 14 ಜನ ಸೇನಾ ಸದಸ್ಯರುಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಕೆಂಪು ಸಮುದ್ರ ಮತ್ತು ಹಿಂದೂ ಮಹಾ ಸಾಗರ ಮಧ್ಯೆ ಸಂಪರ್ಕ ಕಲ್ಪಿಸುವ ಪ್ರಮುಖ ಜಲಮಾರ್ಗವಾದ ಬಾಬ್ ಅಲ್-ಮನ್‍ದಬ್ ಸಮೀಪದ ಧುಬಾಯ್ ಜಿಲ್ಲೆಯನ್ನು ವಶ ಪಡಿಸಿಕೊಳ್ಳಲು ಜ. 17ರಿಂದ ಸೇನಾ ಪಡೆಗಳು ದಾಳಿ ನಡೆಸುತ್ತಿವೆ. ಮಿತ್ರ ಪಡೆಗಳ ಯುದ್ದ ವಿಮಾನಗಳು ಮತ್ತು ಅಪಾಚೆ ಆಕ್ರಮಣಕಾರಿ ಹೆಲಿಕ್ಯಾಪ್ಟರ್‍ಗಳು, ಮೋಖಾ ಕರಾವಳಿ ತೀರಗಳತ್ತ ಮುನ್ನುಗ್ಗುತ್ತಿರುವ ಹದಿ ಪರ ಸೇನಾ ಯೋಧರ ಬೆಂಬಲ ನೀಡಲು ಬಂಡುಕೋರರ ಮೇಲೆ ದಾಳಿ ನಡೆಸಿವೆ. ಇದೇ ವೇಳೆ ಉಗ್ರರು ಅಡಗಿಸಿಟ್ಟಿದ್ದ ನೆಲಬಾಂಬ್‍ಗಳು ಸ್ಫೋಟಗೊಂಡು ಅಧಿಕ ಸಂಖ್ಯೆಯ ಸಾವು ನೋವಿಗೆ ಕಾರಣವಾಗಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಹಂಪಿ ಸನ್‍ಲೈಟ್ & ಶ್ಯಾಡೋಸ್ ಚಿತ್ರಪ್ರದರ್ಶನ

ಈ ಬಾರಿಯ ಬಿಗ್‍ಬಾಸ್ ಫೈನಲ್ ಗೆಸ್ಟ್ ಯಾರು ಗೊತ್ತಾ..?

ಮಾಜಿ ಕ್ರಿಕೆಟಿಗ ವೀರು ಈಗ ಜಬರ್ದಸ್ತ್ ಸಿಂಗರ್

ಜಯಲಲಿತ ಜೀವನಾಧಾರಿತ ಸಿನಿಮಾ ಮಾಡ್ತಾರಂತೆ ಆರ್.ಜಿ.ವಿ..!

LIVE : ಬಿಗ್‍ಬಾಸ್ ಕನ್ನಡ ಸೀಸನ್-04 ಈ ಮೂವರಲ್ಲಿ ಫೈನಲ್ ತಲಪುವವರು ಯಾರು.?

ರಾಜಮೌಳಿಯ ಮಹಾಭಾರತದಲ್ಲಿ ಸುದೀಪ್ ಕರ್ಣ?

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...