ಕಂಬಳ ಪರ ಹೋರಾಟಕ್ಕೆ ನಿಂತ ಜನ: ಸುಗ್ರಿವಾಜ್ಞೆಗೂ ಸೈ ಅಂದ ರಾಜ್ಯ ಸರ್ಕಾರ

Date:

ಕರಾವಳಿ ಸಾಂಪ್ರದಾಯಿಕ ಕ್ರೀಡೆಗೆ ಸಾಕಷ್ಟು ಜನ ಬೆಂಬಲ ದೊರೆಯುತ್ತಿದ್ದು, ಹೈಕೋರ್ಟ್ ತೀರ್ಪಿಗೂ ಮುನ್ನ ಕರಾವಳಿಗಳಲ್ಲಿ ಕಂಬಳ ಪರ ಕೂಗು ಕೇಳಿ ಬರ್ತಾ ಇದೆ. ಇನ್ನು ಕಂಬಳ ಕ್ರೀಡೆಯನ್ನು ರದ್ದುಗೊಳಿಸಬಾರದು ಎಂದು ಕಂಬಳ ಕಾಪಡಿ ಅಭಿಯಾನಕ್ಕೆ ಸಾಕಷ್ಟು ಸ್ವಾಮೀಜಿಗಳು ಬೆಂಬಲ ಸೂಚಿಸಿದ್ದು. ಅಗತ್ಯ ಬಿದ್ದಲ್ಲಿ ರಾಜ್ಯದಲ್ಲಿ ಸುಗ್ರಿವಾಜ್ಞೆ ಜಾರಿಗೂ ಸೈ ಅಂದಿದೆ ಸರ್ಕಾರ. ಕಂಬಳ ನಿಷೇಧವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಇದೇ ಜನವರಿ 28ರಂದು ಮೂಡಿಬಿದಿರೆಯಲ್ಲಿ ನಡೆಯುವ ಹೋರಾಟವು ಯಶಸ್ವಿಯಾಗಿ ನಿರ್ವಹಿಸಲು ಸಂಸದ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ. ಈ ಸಭೆಯಲ್ಲಿ ಹಲವಾರು ತುಳು ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ಇನ್ನೊಂದೆಡೆ ಕಂಬಳ ನಿಷೇಧ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಮಂಗಳೂರು ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದ್ದಾರೆ. ಕಂಬಳ ಕ್ರೀಡೆಯ ಪರ ಸ್ವಾಮೀಜಿಗಳು ನಿಂತಿದ್ದು ಉಡುಪಿಯ ಪೇಜಾವರ ಶ್ರೀಗಳು, ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಗಳು ಕೂಡ ಕಂಬಳಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಇಷ್ಟೆಲ್ಲಾ ಬೆಂಬಲಗಳು ಸಿಕ್ಕಿದ್ರೂ ಸಾಂಪ್ರದಾಯಿಕ ಕ್ರೀಡೆಗೆ ಜಯ ಸಿಗುತ್ತಾ..? ಕಾದು ನೋಡಬೇಕಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಕೀರ್ತಿ ಬಿಗ್‍ಬಾಸ್ ಗೆದ್ದು ಬರಲಿ ಎಂದು ಹಾರೈಸಿದ ಉತ್ತರ ಕರ್ನಾಟಕ ಜನರು

ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!

ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್

ಕಂಬಳದ ಪರವಾಗಿ ಬೆಂಬಲಿಸ್ತೀರಾ..? ನಿಮ್ಮ ಅಭಿಪ್ರಾಯ ತಿಳಿಸಿ

ನವಜಾತ ಶಿಶುವಿಗಿದೆ ನಾಲ್ಕು ಕಾಲು, ಎರಡು ಜನನನಾಂಗ..!

ರಾತ್ರೋ ರಾತ್ರಿ ಎಲಿಮಿನೇಟ್ ಆದ್ರು ಶಾಲಿನಿ..!!

ಹಂಪಿ ಸನ್‍ಲೈಟ್ & ಶ್ಯಾಡೋಸ್ ಚಿತ್ರಪ್ರದರ್ಶನ

ಈ ಬಾರಿಯ ಬಿಗ್‍ಬಾಸ್ ಫೈನಲ್ ಗೆಸ್ಟ್ ಯಾರು ಗೊತ್ತಾ..?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...