ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಅಥವಾ ತಲುಪಬೇಕಾದ ಸ್ಥಳಕ್ಕೆ ಬೇಗ ಕ್ರಮಿಸಲು ಬೆಂಗಳೂರಿನ ಜನರು ಹಲವು ವರ್ಷಗಳಿಂದ ಶೇರ್ ಕ್ಯಾಬ್‍ಗಳ ಮೊರೆ ಹೋಗೋದು ಎಲ್ಲರಿಗೂ ಗೊತ್ತೆ ಇದೆ. ಆದ್ರೆ ಅದು ಇನ್ಮುಂದೆ ಬಂದ್ ಆಗಲಿದೆ..! ಹೌದು.. ಶುಕ್ರವಾರದಿಂದ ಬೆಂಗಳೂರಿನಲ್ಲಿ ಓಲಾ ಮತ್ತು ಉಬರ್ ಪೂಲ್ ಸೇವೆಗಳು ಇರೋದಿಲ್ಲ. ಈ ಎರಡು ಕಂಪನಿಗಳು ಸಾರಿಗೆ ನಿಯಮ ಪಾಲನೆ ಮಾಡೋದ್ರಲ್ಲಿ ಎಡವಟ್ಟು ಮಾಡಿಕೊಂಡಿರೋದಕ್ಕೆ ಭಾರಿ ತಲೆ ತಂಡ ಕಟ್ಟಬೇಕಾದ ಪರಿಸ್ಥಿತಿ ಓಲಾ ಮತ್ತು ಉಬರ್ ಸಂಸ್ಥೆಗೆ ಒದಗಿ ಬಂದಿದೆ..! ಆಪ್ ಆಧಾರಿತ ಕ್ಯಾಬ್ ಸೇವೆ ನೀಡುತ್ತಾ ಬಂದಿದ್ದ ಓಲಾ ಮತ್ತು ಉಬರ್ ಕಂಪನಿಗಳು ಶೇರಿಂಗ್ ಸೌಲಭ್ಯ ಒದಗಿಸುತ್ತಿತ್ತು. ಆದ್ರೆ ಇನ್ಮುಂದೆ ಶೇರಿಂಗ್ ವ್ಯವಸ್ಥೆ ಇರೋದಿಲ್ಲ ಅದರ ಬದ್ಲಾಗಿ ಪೂರ್ತಿ ಕ್ಯಾಬನ್ನೆ ಬುಕ್ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ಶೇರಿಂಗ್ ವ್ಯವಸ್ಥೆಯಿಂದ ಪ್ರತಿ ನಿತ್ಯ ಖಾಸಗಿ ಓಲಾ ಮತ್ತು ಉಬರ್ ವಾಹನಗಳಲ್ಲೆ ಪ್ರಯಾಣ ಬೆಳೆಸುತ್ತಿದ್ದ ಪ್ರಯಾಣಿಕರಿಗೆ ಇನ್ನಿಲ್ಲದ ಒಡೆತ ಬಿದ್ದಿದೆ. ಇನ್ನು ಈ ಎರಡು ಕಂಪನಿಗಳು ಹೊಸ ಸಾಫ್ಟ್ ವೇರ್ ಅಳವಡಿಕೆ ಮಾಡಿಕೊಳ್ಳಲು ಮೂರು ದಿನಗಳ ಕಾಲಾವಕಾಶ ಕೇಳಿದೆ. ಒಂದು ವೇಳೆ ಕಂಪನಿಗಳು ತಮ್ಮ ಶೇರಿಂಗ್ ವ್ಯವಸ್ಥೆಯನ್ನು ನಿಲ್ಲಿಸದಿದ್ದರೆ ನಿರ್ದಾಕ್ಷಿಣ್ಯವಾಗಿ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಆಯುಕ್ತ ಎಂ.ಕೆ ಅಯ್ಯಪ್ಪ ತಿಳಿಸಿದ್ದಾರೆ. ಇನ್ನು ರೈಡ್ ಶೇರಿಂಗ್ ವ್ಯವಸ್ಥೆಯನ್ನು ನಿಲ್ಲಿಸೋದ್ರಿಂದ ರಸ್ತೆಯ ಮೇಲೆ ವಾಹನ ಓಡಟವೂ ಕಡಿಮೆಯಾಗಲಿದ್ದು ಟ್ರಾಫಿಕ್ ಸಮಸ್ಯೆಗೆ ಸ್ವಲ್ಪ ಮಟ್ಟಿನ ಕಡಿವಾಣ ಬೀಳಲಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಎಲ್ಲಿ ಬೇಕಂದರಲ್ಲಿ ಪ್ರಯಾಣಿಕರನ್ನು ಹತ್ತಿ ಇಳಿಸುವ ಅವಕಾಶ ಬಿಎಂಟಿಸಿಗೆ ಬಿಟ್ರೆ ಇನ್ಯಾವುದಕ್ಕೂ ಅವಕಾಶ ಇಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ
ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?
ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?
ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!