ಪ್ರತಿಷ್ಠಿತ ನಂ.1 ಜಾಲತಾಣವಾದ ಫೇಸ್‍ಬುಕ್ ಸಂಸ್ಥೆಯ ಅಧೀನದಲ್ಲಿರುವ ವರ್ಚುವಲ್ ರಿಯಾಲಿಟಿ ರಿಸರ್ಚ್ ಸಂಸ್ಥೆಯಾದ ಓಕ್ಯುಲಸ್ ವಿಆರ್ ವತಿಯಿಂದ ಮೇರಿಲ್ಯಾಂಡ್ ಮೂಲದ ಝೆನಿಮ್ಯಾಕ್ಸ್ ಎಂಬ ಕಂಪನಿಯ ಸಾಫ್ಟ್ ವೇರ್‍ನ್ನು ಅನುಮತಿ ಇಲ್ಲದೆ ನಕಲು ಮಾಡಿದಕ್ಕಾಗಿ ಭಾರಿ ಮೊತ್ತದ ದಂಡ ಕಟ್ಟಿದೆ. ಕಾಪಿರೈಟ್ ಉಲ್ಲಂಘನೆ ಮಾಡಿದ ಆರೋಪದಡಿ ಫೇಸ್‍ಬುಕ್ ಸಂಸ್ಥೆ ಬರೋಬ್ಬರಿ 500 ಮಿಲಿಯನ್ ಅಮೇರಿಕನ್ ಡಾಲರ್ (ಸುಮಾರು 3,371 ಕೋಟಿ) ದಂಡ ವಿಧಿಸಲಾಗಿದೆ.
ಝೆನಿಮ್ಯಾಕ್ಸ್ ನೀಡಿದ ದೂರಿನನ್ವಯ ಬೌದ್ದಿಕ ಹಕ್ಕು ಸ್ವಾಮ್ಯ ಉಲ್ಲಂಘನೆಯಾಗಿದೆ ಎಂದು ತಿಳಿಸಿದ ನ್ಯಾಯಪೀಠ ಫೇಸ್‍ಬುಕ್‍ಗೆ ಇಷ್ಟೊಂದು ದೊಡ್ಡ ಮೊತ್ತದ ದಂಡವನ್ನು ಹಾಕಿದೆ. ಓಕ್ಯುಲಸ್ ಮಾಡಿದ ತಪ್ಪಿಗೆ ಅದರ ಕೇಂದ್ರ ಸಂಸ್ಥೆಯಾದ ಫೇಸ್‍ಬುಕ್ ಹೊಣೆಯನ್ನಾಗಿ ಮಾಡಿದ್ದು, ಈ ದಂಡವನ್ನು ಫೇಸ್‍ಬುಕ್ ಸಂಸ್ಥೆಯೆ ನೀಡಬೇಕೆಂದು ಕೋರ್ಟ್ ತೀರ್ಪು ನೀಡಿದೆ. ಈ ಓಕ್ಯುಲಸ್ ಸಂಸ್ಥೆ ಓಕ್ಯುಲಸ್ ರಿಫ್ಟ್ ಎಂಬ ವಿಆರ್ ಕಿಟ್ಟನ್ನು ತಯಾರಿಸಿತ್ತು. ಅದರ ಪೇಟೆಂಟ್ ಹಕ್ಕುಗಳನ್ನು ಫೇಸ್‍ಬುಕ್ ಸಂಸ್ಥೆ 2014ರಲ್ಲಿ ಖರೀದಿ ಮಾಡಿತ್ತು.
ಆದರೆ ಝೆನಿಮ್ಯಾಕ್ಸ್, ಓಕ್ಯುಲಸ್ ಕಂಪನಿ ತನ್ನ ಕಂಪನಿಯ ಸಾಫ್ಟ್ ವೇರ್ ಕದ್ದು ಓಕ್ಯುಲರ್ ರಿಫ್ಟ್ ಎಂಬ ಹೊಸ ಸಾಧನವನ್ನು ತಯಾರಿಸಿದೆ ಎಂದು ದೂರಿದೆ.
ಅಲ್ಲದೆ ತನ್ನಲ್ಲಿ ಕೆಲ ವರ್ಷಗಳ ಹಿಂದೆ ಕೆಲಸ ಮಾಡ್ತಾ ಇದ್ದ ಜಾನ್ ಕಾರ್ಮಾರ್ಕ್ ಎಂಬಾತನಿಗೆ ಅವರ ಸಂಸ್ಥೆಯಲ್ಲಿ ಕೆಲಸ ಕೊಟ್ಟು ಆತನಿಂದ ತಮ್ಮ ಸಂಸ್ಥೆಯ ಸಾಫ್ಟ್ ವೇರ್‍ನ್ನು ಕದಿಯಲಾಗಿದೆ ಎಂದು ಝೆನಿಮ್ಯಾಕ್ಸ್ ಕಂಪನಿ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಶುಭ ಶುಕ್ರವಾರದಂದು ತೆರೆಗೆ ಬರಲಿದೆ ಕುಳ್ಳನ ಚೌಕ
ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?
ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ
ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?
ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?
ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!