ಅಪ್ಪನೆಂಬ ಆಲದ ಮರ

Date:

ಮಕ್ಕಳೇ ಸುಖ.. ಮಕ್ಕಳೆ ಕಷ್ಟ..ಇದು ಬಲ್ಲವರ ಮಾತು.. ಮಕ್ಕಳು ಅಂದ್ರೆ ಪ್ರತಿ ಅಪ್ಪ ಅಮ್ಮನಿಗೂ ಅದೇನೋ ಸುಖ. ಅದೇ ಮಕ್ಕಳು ದೊಡ್ಡವರಾದಾಗ ತಂದೆ ತಾಯಿಯನ್ನು ತಿರಸ್ಕರಿಸಿದರೆ ನೋಯಿಸಿದರೆ ಅದಕ್ಕಿಂತ ಕಷ್ಟ ದುಖಃ ಬೇರೊಂದಿಲ್ಲ…. ಆದ್ರೆ ಮನೆ ಮಕ್ಕಳು ಸಂಸಾರ, ಅಂದಾಗ ಪ್ರತಿಯೊಬ್ಬರು ತಾಯಿಯನ್ನ ಕರುಣಾಮಯಿ ತಾಯಿಗಿಂತ ದೇವರಿಲ್ಲ ಅನ್ನೋದು ಹೇಳುವ ಮಾತು.. ಅದು ನಿಜ ಕೂಡ. ತನ್ನ ಮಕ್ಕಳಿಗಾಗಿ ತನ್ನದೆಲ್ಲವನ್ನು ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಕೌಟುಂಬಿಕವಾಗಿ, ಹೀಗೆ ಎಲ್ಲವನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ನೀಡುವವಳು ತಾಯಿ.. ತನ್ನ ರಕ್ತವನ್ನೆ ಹಾಲಿನ ಧಾರೆಯಾಗಿ ನೀಡುವಂತ ಶಕ್ತಿ ಇರೋದು ತಾಯಿಗೆ ಮಾತ್ರ..
ಹಾಗಾದ್ರೆ ತಂದೆ ಏನು…!!!
ಪ್ರೀತಿ ತ್ಯಾಗ ಕರುಣೆ ವಿಚಾರಗಳಲ್ಲಿ ತಂದೆ ಯಾಕೆ ದೂರವುಳಿತಾರೆ. ಯಾಕೆ ಅವರ ಪ್ರೀತಿ ತ್ಯಾಗವನ್ನ ನಾವು ಗಮನಕ್ಕೆ ತರೊದಿಲ್ಲ .
ಯಾವುದೋ ರಿಯಾಲಿಟಿ ಶೋ ವೊಂದರ ಕಾರ್ಯಕ್ರಮ ನೋಡಿದಾಗ ತಾಯಿ ಮಮತೆಯ ಜೊತೆ ತಂದೆ ಕರ್ತವ್ಯಗಳು ಎಷ್ಟು ಮುಖ್ಯ. ತಂದೆ ಪ್ರೀತಿ ಎಷ್ಟು ಆಳ ಅನ್ನಿಸ್ತು. ನಮಗಾಗಿ ಎಲ್ಲವನ್ನು ಮಾಡುವ ತಂದೆ ಯಾಕೆ ತ್ಯಾಗ ಪ್ರೀತಿ ಅಂದಾಗ ಹಿಂದೆ ನಿಲ್ತಾರೆ ಅನ್ನೋದು ನನ್ನ ಕಾಡಿದ್ದು ನಿಜ..
ನಿಜವಾಗ್ಲೂ ಅನೇಕ ಸಂದರ್ಬಗಳಲ್ಲಿ ತಂದೆಯನ್ನ ಗಮನಕ್ಕೆ ತೆಗೆದುಕೊಳ್ಳದಂತಹ ಘಟನೆಗಳು ನಡೆದುಹೋಗತ್ತೆ. ಅಪ್ಪನಲ್ವಾ ಅನ್ನೋ ಮಾತು ನಮ್ಮ ಬಾಯಿಂದ ಬಂದಿರತ್ತೆ. ಅಂದ್ರೆ ಅಪ್ಪನಿಗೆ ಮನಸ್ಸಿಲ್ವಾ.. ಆಗ ಆ ತಂದೆಗೆ ಎಷ್ಟು ನೋವಾಗಿರತ್ತೆ ಯಾರು ಕೇಳೋದೆ ಇಲ್ಲ..
ತನ್ನ ಹೆಂಡತಿ, ಮಕ್ಕಳು, ಸಂಸಾರ ಅವರ ಭವಿಷ್ಯ ಅಂತ ಪ್ರತಿ ಕ್ಷಣ ನಮಗಾಗಿ ಬದುಕುತ್ತಿರುವ ಅಪ್ಪ ಅನೇಕ ಬಾರಿ ಗಮನಕ್ಕೆ ಬರೋದಿಲ್ಲ.. ತಾಯಿ ತನ್ನೆಲ್ಲಾ ತಾಯ್ತನದ ಪ್ರೀತಿಯನ್ನ ತನ್ನ ಮಗುವಿಗೆ ಖುಷಿಯಾಗಿ ಧಾರೆಯೆರೆಯಬಲ್ಲಳು ಅಂದ್ರೆ ,ಅದರ ಹಿಂದೆ ಅಪ್ಪನ ತ್ಯಾಗವಿರತ್ತೆ. ಸಮಯಕ್ಕೆ ಸರಿಯಾಗಿ ಊಟ ತಿಂಡಿ ಬಟ್ಟೆ ಬರೆ, ಔಷದೋಪಚಾರ ನೀಡುವ ಸಲುವಾಗಿ ತಂದೆ ಹಗಲಿರುಳು ಶ್ರಮವಹಿಸಿರ್ತಾನೆ. ಬೆಳಿಗ್ಗೆಯಿಂದ ಸಂಜೆವರೆಗೆ ತನ್ನವರಿಗಾಗಿ ಮನೆಯಾಚೆ ದುಡಿದು ತಮ್ಮವರ ಹಿತ ಕಾಪಾಡ್ತಾನೆ. ತನ್ನ ಸಂಸಾರದ ಸುಖಕ್ಕಾಗಿ ತನ್ನೆಲ್ಲ ಪ್ರಯತ್ನವನ್ನ ಮಾಡ್ತಾನೆ ಇರ್ತಾನೆ..
ಎಷ್ಟೊ ದಿನ ಮನೆಯಲ್ಲಿ ಊಟವನ್ನ ಮಾಡದೇ ದುಡಿಯುವ ಸನ್ನಿವೇಷ ಎದುರಾಗತ್ತೆ.. ಕಷ್ಟಗಳು ಬಂದಾಗ ಸಾಲವನ್ನ ತಂದಾದ್ರು ಸಂಸಾರವನ್ನು ತೂಗಿಸಿಕೊಂಡು ಹೋಗುವ ಶಕ್ತಿ ಅಪ್ಪ ಮಾತ್ರ. ಮನೆ ಸಂಸಾರವನ್ನ ಬಿಟ್ಟು ಬಹುದೂರ ಹೋಗಿ ಅಲ್ಲಿ ನಮಗಾಗಿ ಕಷ್ಟಗಳನ್ನು ಮೆಟ್ಟಿ ನಿಲ್ಲುತ್ತಾನೆ.. ಏನೇ ಕಷ್ಟಗಳು ಬಂದರು ಕಣ್ಣೀರು ಹಾಕದೇ ನೋವೆಲ್ಲವನ್ನು ತನ್ನೊಳಗೆ ನುಂಗಿ ಹೆಂಡತಿ ಮಗುವಿಗೆ ಆಸರೆಯಾಗಿ ಅಪ್ಪನಿರ್ತಾನೆ. ಹಬ್ಬ ಹರಿದಿನಗಳಲ್ಲಿ ಎಷ್ಟೋ ಬಾರಿ ನಮಗಾಗಿ ಹೊಸ ಬಟ್ಟೆ ತರುವ ಅಪ್ಪ ಆವತ್ತು ತನ್ನ ಹಳೆ ಬಟ್ಟೆಯಲ್ಲೆ ಹಬ್ಬವನ್ನ ಆಚರಿಸ್ತಾನೆ.
ಅಪ್ಪನಿಗೆ ಭಾವನೆಯಿಲ್ವಾ ಕರುಣೆಯಿಲ್ವಾ ಅಂದ್ರೆ ಎಲ್ಲವು ಇದೆ. ಆದ್ರೆ ಅದೆಲ್ಲವನ್ನ ನಮಗಾಗಿ ಮನದಲ್ಲಿ ಒತ್ತಿಟ್ಟುಕೊಂಡು ಬದುಕು ಸಾಗಿಸ್ತಾ ಇರ್ತಾನೆ.. ಅದೆಷ್ಟೋ ದಿನ ಊಟ ನಿದ್ರೆ ನೆಮ್ಮದಿಯಿಲ್ಲದ ಬದುಕನ್ನ ಕಳೆದಿರ್ತಾನೆ.
ತನ್ನ ಮಗು ಒಳ್ಳೊಳ್ಳೆ ಬಟ್ಟೆ ಹಾಕಲೆಂದು ತಾನು ದುಡ್ಡು ಕೊಡೋ ಅಪ್ಪ, ತಾನು ಮಾತ್ರ ಬಣ್ಣ ಕಳೆದ ಬಟ್ಟೆಯನ್ನು ಧರಿಸ್ತಾನೆ. ಮಗನೋ ಮಗಳೋ ಇಂಜಿನಿಯರ್ ಡಾಕ್ಟರ್ ಕಲೆಕ್ಟರ್ ಇಲ್ಲ ಯಾವುದಾದರೊಂದು ಗೌರವಾನ್ವಿತ ಕೆಲಸಕ್ಕೆ ಸೇರಲೆಂದು ಇದ್ದಿಧ್ದೆಲ್ಲ ಅಡವಿಟ್ಡು ಸಾಲ ಮಾಡಿ ಹಣವನ್ನ ಪೂರೈಸ್ತಾನೆ. ಆದ್ರೆ ಅಪ್ಪನ ಸ್ಥಿತಿ ಅರಿಯದ ಮಕ್ಕಳು ಅಪ್ಪನನ್ನೆ ದೂಷಿಸ್ತಾರೆ. ತನ್ನ ವೈಭೋಗದ ಜೀವನಕ್ಕೆ ಅಪ್ಪನೆ ಅಡ್ಡಗಾಲೆಂದು ಭಾವಿಸ್ತಾರೆ.. ಮಗನಿಗೆ ಒಡಾಟಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಬೈಕ್ ಕೊಡಿಸೊ ಅಪ್ಪ ತಾನು ಮಾತ್ರ ಕಿಲೋಮೀಟರ್ ನಡೆದೆ ಬದುಕು ಸವೆಸುತ್ತಾನೆ..
ಮಕ್ಕಳಿಗೆ ಸಾವಿರಾರು ರೂಪಾಯಿ ಶೂಗಳನ್ನ ಕೊಡಿಸೊ ಅಪ್ಪ ತಾನು ಮಾತ್ರ ಸಾಮಾನ್ಯ ಚಪ್ಪಲಿಯನ್ನೆ ಧರಿಸ್ತಾನೆ. ವಾಚು ಬೆಲ್ಟು ಅದು ಇದು ಅಂತ ಸ್ನೇಹಿತರ ಎದುರು ಶೋಕಿಗೆ, ಎಲ್ಲವನ್ನ ಅಪ್ಪನಿಂದ ಹಣ ಪಡೆದು ಖರೀದಿಸುವ ಮಕ್ಕಳು ತನ್ನ ಅಪ್ಪ ಒಂದು ದಿನವೂ ವಾಚ್ ಕಟ್ಟಿಲವಲ್ಲ ಅನ್ನೋದನ್ನು ಗಮನಿಸೋದು ಇಲ್ಲ..
ತನ್ನ ಹೆಂಡತಿ ಮಕ್ಕಳ ಹೆಸರಲ್ಲಿ ಅಪ್ಪ ವಿಮೆ, ಸೇವಿಂಗ್ಸ್ ಮಾಡಿರ್ತಾನೆ. ಆದ್ರೆ ಮಗ ಮಾತ್ರ ಎಂದು ತನ್ನ ತಂದೆಯ ಹೆಸರಿಗೆ ಮಾಡುವ ಯೋಚನೆಯನ್ನು ಮಾಡಿರಲ್ಲ..ಮಧ್ಯ ಬದುಕಲ್ಲಿ ತಾನಿಲ್ಲವಾದರೂ ಮಕ್ಕಳ ಬದುಕಿಗೆ ಕಷ್ಟವಾಗಬಾರದೆಂದು ಅಪ್ಪ ಹಗಲಿರುಳು ದುಡಿತಾನೆ.. ತಾನಿಲ್ಲವಾದರೆ ಮುಂದೆ ಅಪ್ಪನಿಗೇನು ಅಂತ ಯಾರು ಯೋಚನೆಯನ್ನು ಮಾಡಲಾರರು..
ಮನೆಯಲ್ಲಿ ಎಲ್ಲರ ಸಂತೋಷಕ್ಕೆ ಜೀವನ ಭದ್ರತೆಗೆ ದುಡಿಯುವ ಬರದಲ್ಲಿ ಅದೆಷ್ಟೋ ದಿನಗಳು ಗಂಟೆಗಳು ಅಪ್ಪ ಮನೆಯವರಿಂದ ದೂರವಾಗ್ತಾನೆ. ಆದ್ರೆ ಇಷ್ಟೆಲ್ಲಾ ತ್ಯಾಗ ಮಾಡುವ ತ್ಯಾಗ ಮೂರ್ತಿ ಅಪ್ಪ ಮಾತ್ರ ಎಷ್ಟೋ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬರೋದಿಲ್ಲ..
ಇಂದಿನ ಬದುಕಲ್ಲಿ ಅದರಲ್ಲೂ ಐಶಾರಾಮಿ ಬದುಕಿನ ದಾಸ್ಯತ್ವದಲ್ಲಿ ನಮಗಾಗಿ ಬದುಕನ್ನ ಸವಿಸಿದ ಅಪ್ಪ, ವೃದ್ದಾಪ್ಯದಲ್ಲಿ ಮನೆಯಿಂದಲೇ ದೂರವಾಗ್ತಿದ್ದಾರೆ. ರಕ್ತವನ್ನೇ ಬೆವರಾಗಿಸಿ ದುಡಿದ ಅಪ್ಪ ಮಕ್ಕಳಿಂದಲೇ ವೃದ್ದಾಶ್ರಮದ ಬಾಗಿಲು ತಟ್ಟುತ್ತಿದ್ದಾರೆ.. ಮಕ್ಕಳಿಗಾಗಿ ಐಶಾರಾಮಿ ಬದುಕನ್ನ ತ್ಯಾಗಮಾಡಿದ ಅಪ್ಪ, ಐಶಾರಾಮಿ ಬದುಕಿಗಾಗಿ ಅದೇ ಮಕ್ಕಳಿಂದ ವೃದ್ದಾಪ್ಯದಲ್ಲಿ ದಾರಿ ಪಾಲಾಗುತ್ತಿದ್ದಾರೆ..
ಆದ್ರೂ ಅಪ್ಪನೆಂಬ ಆಲದ ಮರ ಬಿಸಿಲನ್ನ, ದಗೆಯನ್ನ ಸ್ವೀಕರಿಸಿ ನೆರಳನ್ನ ತಂಪನ್ನ ನಮಗಾಗಿ ನೀಡುತ್ತಲೆ ಇರುತ್ತಾನೆ ಎಂದು ಗಮನಕ್ಕೆ ಬಾರದೆ..ಇದಕ್ಕೆ ನನ್ನ ಅಪ್ಪಯ್ಯನೂ ಹೊರತಲ್ಲ

  • ಶ್ವೇತಾ ಭಟ್.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಶುಭ ಶುಕ್ರವಾರದಂದು ತೆರೆಗೆ ಬರಲಿದೆ ಕುಳ್ಳನ ಚೌಕ

ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...