ಇವರು ಉತ್ತರ ಕರ್ನಾಟಕದ ಮೊದಲ ಮಹಿಳಾ ಪೈಲಟ್

Date:

ಗುರಿಯತ್ತ ಮುನ್ನುಗ್ಗಿ ಹೋಗುವವರಿಗೆ ತಮ್ಮ ಪರಿಸರ ಅಡ್ಡಿ ಬರಲ್ಲ. ಕಷ್ಟದ ದಿನಗಳನ್ನು ಮೆಟ್ಟಿನಿಂತು ಒಳ್ಳೆಯ ಮಾರ್ಗದಿ ಧೈರ್ಯದಿಂದ ಹೆಜ್ಜೆಯನ್ನಿಟ್ಟರೆ ಯಶಸ್ಸು ತನ್ನಿಂದ ತಾನೆ ನಮ್ಮನ್ನು ಹಿಂಬಾಲಿಸುತ್ತೆ. ಇದಕ್ಕೆ ಉದಾಹರಣೆ ಬರ ನಾಡಿನ ಯುವತಿ ಪೈಲಟ್ ಆಗಿರೋದು! ವಿಜಯಪುರ ಯುವತಿ ಇವತ್ತು ಉತ್ತರ ಕರ್ನಾಟಕದಿಂದ ನೇಮಕವಾದ ಮೊಟ್ಟಮೊದಲ ಪೈಲಟ್ ಎಂದು ಪ್ರಸಿದ್ಧಿ ಪಡೆದಿದ್ದಾರೆ.


ಪ್ರೀತಿ ಬಿರಾದರ ಎಂಬ ಯುವತಿ ಇದೀಗ ಉತ್ತರ ಕರ್ನಾಟಕದ ಪ್ರಪ್ರಥಮ ಮಹಿಳಾ ಪೈಲಟ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಬರದ ನಾಡು ವಿಜಯಪುರದವರಾದ ಇವರು ಬರನಾಡಿನಲ್ಲಿ ಪ್ರತಿಭೆಗೆ ಬರವಿಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿ ಇವತ್ತು ನಮ್ಮ ಮುಂದಿದ್ದಾರೆ.


ಅಂದಹಾಗೆ ಪ್ರೀತಿ ಬಿರಾದರ ಔಷಧ ವ್ಯಾಪಾರಿ ಸುಧೀರ್ ಬಿರಾದರ ಅವರ ಮಗಳು. ಇವತ್ತು ಇವರು ಇಂಡಿಗೋ ಏರ್‍ಲೈನ್ಸ್ ಕಂಪನಿ ಪೈಲಟ್ ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕದ ಮೊಟ್ಟ ಮೊದಲ ಪೈಲಟ್ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಇವರು ತಮ್ಮ ಮೊದಲ ಸಂಬಳವನ್ನು ವಿಜಯಪುರದ ಕಗ್ಗೋಡು ಗೋಶಾಲೆಗೆ ಕೊಡುವುದಾಗಿ ಘೋಷಿಸಿದ್ದಾರೆ.


ಇವರ ಸಾಧನೆ ಇತರರಿಗೆ ಸ್ಪೂರ್ತಿಯಾಗಲಿ. ಕಷ್ಟಪಟ್ಟರೆ ಯಾವುದೂ ಅಸಾಧ್ಯವಲ್ಲ. ಮನಸ್ಸಿದ್ದರೆ ಮಾರ್ಗ.

Share post:

Subscribe

spot_imgspot_img

Popular

More like this
Related

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ ಸ್ಯಾಂಡಲ್‌ವುಡ್‌ನ ಖ್ಯಾತ ನಟ...

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಜಾ

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ...

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....