ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ
ಇಬ್ಬರು ಶಂಕಿತ ಹಂತಕರ ರೇಖಾಚಿತ್ರವನ್ನು ವಿಶೇಷ ತನಿಖಾ ತಂಡ ಬಿಡುಗಡೆಮಾಡಿದೆ.
ತನಿಖಾ ತಂಡದ ತಾಂತ್ರಿಕ ತಜ್ಞರು ಹಾಗೂ ಸ್ಥಳಿಯರು ನೀಡಿದ ಮಾಹಿತಿ ಆಧಾರದಲ್ಲಿ ಹಂತಕರ ರೇಖಾಚಿತ್ರ ರಚಿಸಲಾಗಿದೆ. ಹಂತಕರ ವಯಸ್ಸು ಸುಮಾರು 25 ರಿಂದ 35 ಎಂದು ಅಂದಾಜಿಸಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದಿಲ್ಲ.
ರಾಜ್ಯ, ದೇಶದಾದ್ಯಂತ ಹಂತಕರ ಪತ್ತೆ , ಬಂಧನಕ್ಕೆ ಆಗ್ರಹ ಕೇಳಿ ಬರ್ತಿದೆ. ಘಟನೆ ನಡೆದಿದ್ದು ಸೆಪ್ಟೆಂಬರ್ 5 ರಸಂಜೆ. ಇಷ್ಟು ದಿನವಾದರೂ ಹಂತಕರು ಮಾತ್ರ ಸಿಕ್ಕಿಬಿದ್ದಿಲ್ಲ…!
ರೇಖಾಚಿತ್ರ ದಲ್ಲಿರುವ ವ್ಯಕ್ತಿಗಳು ಕಂಡು ಬಂದಲ್ಲಿ 9480800202 ಗೆ ಅಥವಾ sit.glankesh@ksp.gov.in ಗೆ ಮಾಹಿತಿ ನೀಡುವಂತೆ ತನಿಖಾತಂಡ ತಿಳಿಸಿದೆ…ಮಾಹಿತಿ ನೀಡಿದವರ ಬಗ್ಗೆ ಎಲ್ಲಿಯೂ ಹೇಳಲ್ಲ…ಈ ಮಾಹಿತಿ ಗೌಪ್ಯವಾಗಿಡ್ತಾರೆ..