ತಮ್ ಪಾಡಿಗೆ ತಾವಿರೋ ಜನಸಾಮಾನ್ಯರ ಬದುಕನ್ನು ನರಕ ಮಾಡುವ ಉಗ್ರರು ನಾಯಿ-ನರಿಗಳಿಗೆ ಆಹಾರವಾಗ್ತಿದ್ದಾರೆ..! ತಾವು ಯಾವ ಸಂಘಟನೆಗಾಗಿ ತಮ್ಮ ಪ್ರಾಣ ಬಿಟ್ಟರೋ ಆ ಸಂಘಟನೆಗೂ ಕೂಡ ತನ್ನವರ ಶವಸಂಸ್ಕಾರವನ್ನು ನಿರ್ಲಕ್ಷಿಸಿದೆ..! ಇದರಿಂದ ಸತ್ತಮೇಲೂ ನೆಮ್ಮದಿಯಾಗಿ ಮಣ್ಣಾಗೋ ಯೋಗ ಈ ಭಯೋತ್ಪಾದಕರಿಗಿಲ್ಲವಾಗಿದೆ…! ನಾಯಿ-ನರಿಗಳ ಹೊಟ್ಟೆಗೆ ಆಹಾರವಾಗ್ಬೇಕಾಗಿದೆ..!
ಹೀಗೆ ಉಗ್ರರು ನಾಯಿ, ನರಿಗಳಿಗೆ ಆಹಾರವಾಗ್ತಿರೋದ್ ಇರಾಕ್‍ನಲ್ಲಿ..! ಇಲ್ಲಿ ಸಹಸ್ರಾರು ಸಂಖ್ಯೆಯ ಉಗ್ರರ ಶವಗಳು ನಾಯಿ-ನರಿಗಳ ಹೊಟ್ಟೆ ಸೇರಿವೆ…! ಅಮೆರಿಕಾ ಮುಂದಾಳತ್ವದಲ್ಲಿ ಮಿತ್ರ ಪಡೆಗಳು ನಡೆಸಿದ ದಾಳಿಯಲ್ಲಿ ಸತ್ತ ಉಗ್ರರ ಶವ ಸಂಸ್ಕಾರವನ್ನು ಸ್ವತಃ ಐಸಿಸ್ ಕೂಡ ಮಾಡ್ಲಿಲ್ಲ..!
ಧುಲುಯಿಯಾ, ಅನ್ಬರ್ ಪ್ರಾಂತ್ಯ, ಫಲ್ಲುಜಾ, ರಖ್ಖಾ, ಮಸೂಲ್, ಸಿರಿಯಾಗಳಲ್ಲಿ ಐಸಿಸ್ ಉಗ್ರರ ಶವಗಳು ಅನಾಥವಾಗಿವೆ..! 2014ರಿಂದ ಇಲ್ಲಿಯವರೆಗೆ ಹೆಚ್ಚು ಕಡಿಮೆ 80 ಸಾವಿರಕ್ಕೂ ಹೆಚ್ಚು ಉಗ್ರರು ಈ ಭಾಗಗಳಲ್ಲಿ ಮಿತ್ರಪಡೆಗಳ ದಾಳಿಯಿಂದ ಸತ್ತಿದ್ದಾರೆ..! ಜನರೇ ಸಾಂಕ್ರಾಮಿಕ ರೋಗಗಳಿಗೆ ಹೆದ್ರಿ ಒಂದಿಷ್ಟು ಹೆಣಗಳನ್ನು ಮಣ್ಣು ಮಾಡಿದ್ದಾರೆ..! ಆದ್ರೆ, ನಾಯಿ-ನರಿಗಳು ಆ ಹೆಣಗಳನ್ನು ಮತ್ತೆ ಮಣ್ಣಿಂದ ಮೇಲೆತ್ತಿ ಎಳೆದೆಳೆದು ತಿನ್ತಾ ಇವೆಯಂತೆ..!