ರಾತ್ರಿ ಮನೆಯಿಂದ ಹೊರಗೆ ಹೋಗಿದ್ದ ಯುವತಿ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಘಟನೆ ನಡೆದಿದ್ದು ಕೋಲಾರದ ಶೆಟ್ಟಿಕೊತ್ತನೂರು ಗ್ರಾಮದಲ್ಲಿ. 20 ವರ್ಷದ ಕಾವ್ಯಾ ಅನುಮಾನಾಸ್ಪದ ಸಾವಿಗೀಡಾದ ಯುವತಿ.
ಕೂಲಿ ಕೆಲಸ ಮಾಡಿಕೊಂಡಿದ್ದ ಕಾವ್ಯ ಬುಧವಾರ ರಾತ್ರಿ ಬಹಿರ್ದೆಸೆಗೆ ಹೊರಗೋಗಿದ್ದಳು ಎನ್ನಲಾಗಿದೆ. ಆದರೆ, ಬೆಳಗ್ಗೆ ಕೆರೆಯಲ್ಲಿ ಹೆಣವಾಗಿ ಸಿಕ್ಕಿದ್ದಾಳೆ..! ಯಾರೋ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಕಾರಣ ತಿಳಿದುಬಂದಿಲ್ಲ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರಿ ಹೊರಗೆ ಹೋಗಿದ್ದ ಆಕೆ ಬೆಳಗ್ಗೆ ಸಿಕ್ಕಿದ್ದು ಶವವಾಗಿ..!
Date: