ಫೇಸ್‍ಬುಕ್ ಗೆಳತಿ ಬೆತ್ತಲಾದ್ಲು! ಆಮೇಲೇನಾಯ್ತು..?

Date:

ಅವಳು ಅವನಿಗೆ ಫೇಸ್‍ಬುಕ್‍ನಲ್ಲಿ ಪರಿಚಯವಾದ್ಲು.. ನಿತ್ಯ ಚಾಟ್ ಮಾಡ್ತಾ ಮಾಡ್ತಾ ಕ್ಲೋಸ್ ಆದ್ಲು..! ಹೀಗೆ ಒಂದು ದಿನ ನನಗೆ 5 ಸಾವಿರ ರೂ ಬೇಕು ಕೊಡ್ತೀರಾ ಅಂದ್ಲು..! ಅವನು ಸರಿ ಎಂದ..! ಆ ಹಣ ಪಡೆಯಲು ಅವನಿದ್ದಲ್ಲಿಗೆ ಹೋದಳು..! ಆಕೆಯನ್ನು ಹಿಂಬಾಲಿಸಿ 4 ಮಂದಿ ಬಂದರು..! ನೋಡು ನೋಡುತ್ತಿದ್ದಂತೆ ಆಕೆ ಬೆತ್ತಲಾದಳು..! ಅವಳನ್ನು ಫಾಲೋ ಮಾಡಿಕೊಂಡು ಬಂದಿದ್ದವರು ಅವಳನ್ನು ಅವಳಿಗೆ ದುಡ್ಡುಕೊಡಲು ಬಂದಿದ್ದ ಫೇಸ್‍ಬುಕ್ ಗೆಳೆಯನ ಜೊತೆ ಬೆತ್ತಲಾಗಿ ನಿಲ್ಲಿಸಿ 5 ಲಕ್ಷ ರೂ ಹಣ ನೀಡುವಂತೆ ಪೀಡಿಸಿದ್ರು..! ಮನಬಂದಂತೆ ಥಳಿಸಿದ್ರು..! ಇದು ಯಾವುದೋ ಸಿನಿಮಾ ಸ್ಟೋರಿಯಲ್ಲ, ಕಟ್ಟು ಕತೆಯಲ್ಲ..! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ರಿಯಲ್ ಸ್ಟೋರಿ.


ಅವನು ದ.ಕದ ವಿಟ್ಲ ಬಳಿಯ ಕುಡ್ತಮುಗೇರು ನಿವಾಸಿ ಮಹಮ್ಮದ್ ಹನೀಫ್. ಕೆಲವು ದಿನಗಳ ಹಿಂದೆ ಫೇಸ್‍ಬುಕ್‍ನಲ್ಲಿ ಈತನಿಗೆ ಪರ್ಝಾನಾ ಅಲಿಯಾಸ್ ಸುಮೈಯ್ಯಾ ಎಂಬಾಕೆಯ ಪರಿಚಯವಾಗಿರುತ್ತೆ. ಇತ್ತೀಚೆಗೆ ಈಕೆ ಹನೀಫ್ ಹತ್ತಿರ 5 ಸಾವಿರ ರೂ ಕೇಳಿದ್ಲು. ಆ ಹಣವನ್ನು ಕೊಡುವುದಾಗಿ ಹನೀಫ್ ಒಪ್ಪಿಕೊಂಡಿದ್ದ. ಹಣ ಪಡೆಯುವ ನೆಪದಲ್ಲಿ ಕುಡ್ತಮುಗೇರಿನ ಫ್ಲಾಟ್‍ಗೆ ಅವಳು ಆಗಮಿಸಿದ್ದಳು. ಇವಳನ್ನು ಫಾಲೋ ಮಾಡಿಕೊಂಡು ನಾಲ್ವರ ದುಷ್ಕರ್ಮಿಗಳ ತಂಡ ಬಂದಿದೆ..! ಅವರು ಪರ್ಝಾನಳನ್ನು ಹನೀಫ್ ಜೊತೆ ಬೆತ್ತಲಾಗಿ ನಿಲ್ಲಿಸಿ ಫೋಟೊ ತೆಗೆದಿದ್ದಾರೆ..! ನಂತರ 5 ಲಕ್ಷ ರೂ ನೀಡುವಂತೆ ಹನೀಫ್‍ಗೆ ಕಾಟ ಕೊಟ್ಟಿದ್ದಾರೆ. ಸಿಕ್ಕಾಪಟ್ಟೆ ರಾತ್ರಿ ಸುಮಾರು 2 ಗಂಟೆವರೆಗೆ ಹೊಡೆದು, ಮನೆಯ ಕಪಾಟು ಒಡೆದು 60 ಗ್ರಾಂ ಚಿನ್ನಾಭರಣ, 17 ಸಾವಿರ ರೂ ನಗದು ದೋಚಿದ್ದಾರೆ. ಅಷ್ಟೇಅಲ್ದೆ ಹನೀಫ್‍ನ ಸ್ವಿಫ್ಟ್ ಕಾರನ್ನೂ ತೆಗೆದುಕೊಂಡು, ಪೊಲೀಸರಿಗೆ ತಿಳಿಸಿದ್ರೆ ಕೊಲ್ತೀವಿ ಎಂದು ಬೆದರಿಸಿ ಪರಾರಿ ಆಗಿದ್ದಾರೆ..!

ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹನಿಟ್ರ್ಯಾಪ್ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರ್ಝಾನ (5 ಸಾವಿರ ಬೇಕೆಂದು ಬಂದ ಯುವತಿ) ಸೇರಿದಂತೆ 5 ಮಂದಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಪರ್ಝಾನ ಅಲಿಯಾಸ್ ಸುಮೈಯ್ಯ, ಅಶ್ರಫ್ ಸಂಶೀರ್, ಉಬೈದುಲ್ಲಾ, ಇಕ್ಬಾಲ್, ಜೈನುದ್ದೀನ್ ಬಂಧಿತರು.

Share post:

Subscribe

spot_imgspot_img

Popular

More like this
Related

ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿಲ್ಲ: ಡಿ.ಕೆ. ಶಿವಕುಮಾರ್

ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿಲ್ಲ: ಡಿ.ಕೆ. ಶಿವಕುಮಾರ್ ನವದೆಹಲಿ: ನವೆಂಬರ್...

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ ಸ್ಯಾಂಡಲ್‌ವುಡ್‌ನ ಖ್ಯಾತ ನಟ...

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಜಾ

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ...

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...