ರಾಜಕೀಯಕ್ಕೆ ಪರ್ಯಾಯವಾಗಿ ಪ್ರಜಾಕೀಯ ಕಲ್ಪನೆ ಮೂಲಕ ಬದಲಾವಣೆ ಬಯಸಿರೋ ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಪಕ್ಷದ ಹೆಸರು ಅಧಿಕೃತಗೊಂಡಿದೆ.
ಗಾಂಧಿಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಎಂದು ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಿಸಿದ ಉಪ್ಪಿ ಅಧಿಕೃತವಾಗಿ ರಾಜಕೀಯ ಅಖಾಡಕ್ಕೆ ಇಳಿದರು.
ನಮ್ಮದು ಮೊದಲೇ ಹೇಳಿದಂತೆ ಇದು ರಾಜಕೀಯ ಪಕ್ಷವಲ್ಲ. ಪ್ರಜಾಕೀಯ. ಯಾವ ಗಣ್ಯರಿಂದ ಈ ಕಾರ್ಯಕ್ರಮ ಉದ್ಘಾಟಿಸೋಣ ಎಂದು ಯೋಚಿಸಿದ್ವಿ. ನಮ್ಮದು ಪ್ರಜೆಗಳ ಪಕ್ಷವಾದ್ದರಿಂದ ಪ್ರಜೆಗಳನ್ನು ಇಲ್ಲಿ ಸೇರಿಸಬೇಕಿತ್ತು. ಆದರೆ, ಎಲ್ಲಾ ಪ್ರಜೆಗಳನ್ನು ಇಲ್ಲಿ ಹೇಗೆ ಸೇರಿಸೋದು..? ಅದಕ್ಕಾಗಿ ಪ್ರತಿಯೊಬ್ಬ ಪ್ರಜೆಗಳನ್ನು ತಲುಪುವ ಪತ್ರಕರ್ತರ ಮೂಲಕ ಕಾರ್ಯಕ್ರಮ ಉದ್ಘಾಟಿಸ ಬೇಕೆಂದು ನಿರ್ಧರಿಸಿದ್ವಿ ಎಂದು ಹೇಳಿದ ಉಪೇಂದ್ರ ಹಿರಿಯ ಪತ್ರಕರ್ತರಿಂದ ದೀಪಬೆಳಗಿಸೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬದಲಾವಣೆ ಆಗಬೇಕು. ಖಂಡಿತಾ ಸಂಪೂರ್ಣ ಬದಲಾವಣೆ ಆಗೇ ಆಗುತ್ತೆ ಎಂದು ಹೇಳಿದ ರಿಯಲ್ ಸ್ಟಾರ್ ರಾಜಕೀಯಕ್ಕೆ ರಿಯಲ್ ಎಂಟ್ರಿಕೊಟ್ಟರು.
ಕಲಾವಿದಾ ವಿಲಾಸ್ ನಾಯಕ್ ಅವರು ಕೆಪಿಜೆಪಿಯ ಚಿತ್ರಕೃತಿಯನ್ನು ಸ್ಥಳದಲ್ಲೇ ಬಿಡಿಸಿದ್ರು.