ರಿಯಲ್ ಸ್ಟಾರ್ ಉಪೇಂದ್ರ ಯೋಚಿಸಿದಂತೆ ಯಾರೂ ಯೋಚ್ನೆ ಮಾಡೋಕೆ ಸಾಧ್ಯನೇ ಇಲ್ಲ. ಉಪೇಂದ್ರ ತುಂಬಾ ಡಿಫ್ರೆಂಟ್..! ತಮ್ಮ ಪಕ್ಷದ ಅಧಿಕೃತ ಹೆಸರನ್ನು ಘೋಷಿಸಲು ಕರೆದಿದ್ದ ಸುದ್ದಿಗೋಷ್ಠಿಯನ್ನೂ ವಿಭಿನ್ನವಾಗಿ ನಡೆಸಿದ್ರು..!
ವೇದಿಕೆ ಮೇಲೆ ಪತ್ರಕರ್ತರನ್ನು ಕೂರಿಸಿ, ವೇದಿಕೆ ಕೆಳಭಾಗದಲ್ಲಿ ತಾವಿದ್ದರು..! ಪ್ರಜೆಗಳೇ ನಮ್ಮ ಗಣ್ಯರು. ಎಲ್ಲರನ್ನೂ ಈ ಕಾರ್ಯಕ್ರಮಕ್ಕೆ ಕರೆತರಲು ಸಾಧ್ಯವಾಗದೇ ಇರೋದ್ರಿಂದ ಪ್ರಜೆಗಳನ್ನು ತಲುಪುವ ಪತ್ರಕರ್ತರೇ ಈ ಕಾರ್ಯಕ್ರಮದ ಗಣ್ಯರು ಎಂದ ಉಪ್ಪಿ, ಪತ್ರಕರ್ತರಿಂದಲೇ ಕಾರ್ಯಕ್ರಮ ಉದ್ಘಾಟನೆ ಮಾಡಿಸಿದ್ರು.
ಪ್ರಜಾಕೀಯಕ್ಕೆ ನಾಂದಿ ಹಾಡಿರೋ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹೊಸಪಕ್ಷ ‘ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ’ಯನ್ನು ಘೋಷಿಸಿದ್ದು ಮಾತ್ರವಲ್ಲದೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ತಾನೇ ಪ್ರಚಾರ ಮಾಡುವ ಹೊಣೆ ಹೊತ್ತಿದ್ದಾರೆ.
ಈಗಾಗಲೇ ಕಣಕ್ಕಿಳಿಯಲು 20 ಮಂದಿ ಅಭ್ಯರ್ಥಿಗಳಿದ್ದಾರೆ. ಪಕ್ಷದಿಂದ ಕಣಕ್ಕಿಳಿಯುವ ಅಭ್ಯರ್ಥಿಗಳು, ನಾವಾ, ನಾನು ಗೆಲ್ತೀನಾ ಎಂಬ ಆತಂಕದಲ್ಲಿದ್ದಾರೆ. ಅವರು ಭಯ ಪಡೋ ಅಗತ್ಯವಿಲ್ಲ. ನಮ್ಮ ಅಭ್ಯರ್ಥಿಗಳಿಗೆ ಬ್ರಾಂಡ್ ಅಂಬಾಸೀಡರ್ ಆಗಿ ನಾನು ಕಾರ್ಯ ನಿರ್ವಹಿಸ್ತೀನಿ..! ಅವರ ಬಗ್ಗೆ ನಾನು ಪ್ರಚಾರ ಮಾಡ್ತೀನಿ ಎಂದು ತಿಳಿಸಿದ್ದಾರೆ ಉಪೇಂದ್ರ.
ನಮ್ಮ ಪಕ್ಷದಲ್ಲಿ ಹೈಕಮಾಂಡ್ ಯಾರೂ ಇಲ್ಲ. ಪ್ರಜೆಗಳೇ ಹೈಕಮಾಂಡ್. ಗೆದ್ದನಂತರ ಕೆಲಸ ಮಾಡ್ದೇ ಇದ್ರೆ, ಪಕ್ಷ ಬದಲಾಯಿಸಲು ಮುಂದಾದ್ರೆ, ಜನರಿಗೆ ಮೋಸ ಮಾಡಿದ್ರೆ ಜನರೇ ವಿಚಾರಿಸಿಕೊಳ್ಳಲಿ. ನನ್ನನ್ನೂ ಒಳಗೊಂಡಂತೆ ಪ್ರತಿಯೊಬ್ಬರನ್ನು ಪ್ರಶ್ನಿಸುವ ಹಕ್ಕು ಪ್ರಜೆಗಳಿಗಿದೆ ಎಂದರು.
ಈ ಬಾರಿ ಚುನಾವಣೆಯಲ್ಲಿ ಜಾಗೃತರಾಗದೇ ಇದ್ರೆ ಇನ್ನೆಂದೂ ಜನ ಜಾಗೃತರಾಗಲ್ಲ..! ಉಪೇಂದ್ರ ಮುಖ್ಯವಲ್ಲ. ಉಪೇಂದ್ರ ಹೇಳೋದರಲ್ಲಿ ಸತ್ಯ ಇದೆ ಅಂತಾದ್ರೆ ನಂಬಿ. ಬದಲಾವಣೆ ಖಂಡಿತಾ ಸಾಧ್ಯವಿದೆ ಎಂದು ಭರವಸೆಯ ನುಡಿಗಳನ್ನಾಡಿದ್ದಾರೆ ಉಪೇಂದ್ರ.
ನಾನು ಬ್ರಾಂಡ್ ಅಂಬಾಸಿಡರ್ ಆಗಿರ್ತೀನಿ ಎಂದ ಉಪ್ಪಿ..!
Date: