‘ಬೆಂಗಳೂರಲ್ಲಿ ಕನ್ನಡ ಮಾತಾಡೋರು ಸಿಗೋದೇ ಇಲ್ಲ ಗುರು..! ಇಂಗ್ಲಿಷ್, ಹಿಂದಿ ಕತೆ ಬಿಟ್ಟಾಕು..! ತಮಿಳು, ತೆಲುಗು ಮಾತಾಡೋ ಮಂದಿಗಿಂತ ಕನ್ನಡ ಮಾತಾಡೋರು ನಮ್ ಬೆಂಗಳೂರಲ್ಲಿ ಸಿಕ್ಕಾಪಟ್ಟೆ ಕಡಿಮೆ ಮಾರಾಯ’…!
ಹೀಗಂತ ನಾವುಗಳು ನಮ್ ಫ್ರೆಂಡ್ಸ್ ಜೊತೆ ಮಾತಾಡ್ತಿರ್ತೀವಿ..! ಬೆಂಗಳೂರಲ್ಲಿ ಕನ್ನಡ ಮಾತಾಡಲ್ಲ, ಕನ್ನಡ ಕಣ್ಮರೆ ಆಗ್ತಿದೆ ಅಂತ ಬಾಯ್ ಬಾಯ್ ಬಡ್ಕೊಳೋರೇ ಕನ್ನಡ ಮಾತಾಡಲ್ಲ ಸ್ವಾಮಿ..! ಕನ್ನಡ ಬಂದ್ರೂ ಇಂಗ್ಲಿಷ್ ಬರುತ್ತೆ ಅಂತ ತೋರಿಸಿಕೊಳ್ಳೋಕೆ ಕನ್ನಡ ಬಿಟ್ಟು ಇಂಗ್ಲಿಷ್ ಮಾತಾಡ್ತಾರೆ ನಮ್ಮ ಕನ್ನಡಿಗರು…! ಬೇರೆ ರಾಜ್ಯದವರ ಜೊತೆ ಅವರ ಭಾಷೆಯಲ್ಲೇ ಮಾತಾಡ್ತಾರೆ ವಿನಃ ಅವರಿಗೆ ಕನ್ನಡನ ಕಲಿಸಿಕೊಡೋ ಮನಸ್ಸು ಯಾವನೂ ಮಾಡಲ್ಲ..! ಪರ ರಾಜ್ಯದಿಂದ ಬಂದು ನಮ್ ರಾಜ್ಯದಲ್ಲಿ ಕೆಲಸ ಮಾಡ್ತಿರೋ ಎಷ್ಟೋ ಜನರಿಗೆ ಅಲ್ಪ- ಸ್ವಲ್ಪ ಕನ್ನಡ ಬರುತ್ತೆ…! ಅವರಿಗೆ ಕನ್ನಡದಲ್ಲಿ ಮಾತಾಡೋಕೆ ಇಷ್ಟನೂ ಇರುತ್ತೆ…! ಆದ್ರೆ ನಮ್ಮಲ್ಲಿನ ಕೆಲವು ಜನರು ತಿರ್ಪೆ ಶೋಕಿ ತೋರಿಸೋಕೆ ಕನ್ನಡ ಬಿಟ್ಟು ಬೇರೆ ಎಲ್ಲಾ ಭಾಷೆಲೂ ಮಾತಾಡ್ತಾರೆ…!
ಕನ್ನಡಿಗರು ಗಾಂಚಲಿ ಬಿಟ್ಟು ಕನ್ನಡ ಮಾತಾಡ್ಬೇಕು ಅನ್ನೋದನ್ನು ‘ಟ್ರೋಲ್ ಹೈದ’ ಹುಡುಗುರು ತಮ್ ಸ್ಟೈಲ್ ಲಿ ಸಖತ್ತಾಗಿ ಹೇಳಿದ್ದಾರೆ. ನೀವಿನ್ನೂ ವೀಡಿಯೋ ನೋಡಿಲ್ಲ ಅಂತಾದ್ರೆ ನೋಡಿ…ಪ್ರತಿಯೊಬ್ಬ ಕನ್ನಡಿಗನಿಗೂ ತಲುಪುವ ತನಕ ಶೇರ್ ಮಾಡಿ.
ಗಾಂಚಲಿ ಮಾಡೋರಿಗೆ ಟ್ರೋಲ್ ಹೈದ ಶೈಲಿಲೇ ಹೇಳ್ಬೇಕು..! ಕನ್ನಡ ಕಣ್ಮರೆ ಆಗೋಕೆ ಕನ್ನಡಿಗರೇ ಕಾರಣ…!
Date: