ಸೆಂಡ್ ಆದ ವಾಟ್ಸಪ್ ಮೆಸೇಜ್ ಅನ್ನು ಡಿಲೀಟ್ ಮಾಡ್ಬಹುದು..!

Date:

ನೀವು ಕೆಲವೊಮ್ಮೆ ಯಾರಿಗೋ ಕಳುಹಿಸ ಬೇಕಾದ ವಾಟ್ಸಪ್ ಮೆಸೇಜನ್ನು ಇನ್ಯಾರಿಗೋ ಕಳುಹಿಸಿ ಇರ್ತೀರಿ..! ಯಾವುದೋ ಮೆಸೇಜನ್ನು ಕಳುಹಿಸುವ ಬದಲು ಮಿಸ್ ಆಗಿ ಇನ್ಯಾವುದೋ ಮೆಸೇಜ್ ಅನ್ನು ಕಳುಹಿಸಿರ್ತೀರಿ..! ಮೆಸೇಜ್ ಸೆಂಡ್ ಆದ ಮೇಲೆ ಅಯ್ಯೋ ಛೇ..! ಅಂತ ತಲೆಮೇಲೆ ಕೈ ಹೊತ್ಕೊಂಡು ಕೂರ್ತೀರಿ..! ಆ ಮೆಸೇಜ್ ಅನ್ನು ಕೂಡಲೇ ಡಿಲೀಟ್ ಮಾಡಿದ್ರೂ ಕೂಡ ಅದು ನಿಮ್ಮ ವಾಟ್ಸಪ್ ವಿಂಡೋದಲ್ಲಿ ಡಿಲೀಟ್ ಆಗಿರುತ್ತಿತ್ತೇ ವಿನಃ..! ಅದನ್ನು ಯಾರಿಗೆ ಕಳುಹಿಸಿದ್ದೀರೋ ಅವರಿಗೆ ಸೆಂಡ್ ಆಗಿರ್ತಿತ್ತು..! ಅದನ್ನು ನೀವು ಡಿಲೀಟ್ ಮಾಡಕ್ಕೆ ಆಗ್ತಿರ್ಲಿಲ್ಲ..! ಆದರೆ, ಇನ್ನು ಈ ಸಮಸ್ಯೆ ಇಲ್ಲ..! ಅಪ್ಪಿ-ತಪ್ಪಿ ಕಳುಹಿಸಿದ ಮೆಸೇಜ್ ಅನ್ನು ರಿಸೀವರ್ ವಾಟ್ಸಪ್ ವಿಂಡೋದಲ್ಲೂ ನೀವೇ ಡಿಲೀಟ್ ಮಾಡಬಹುದು..!
ಹೌದು, ವಾಟ್ಸಪ್‍ನ ಹೊಸ ಫೀಚರ್ ಇದು. ನೀವು ವಾಟ್ಸಪ್ ಅನ್ನು ಅಪ್ ಡೇಟ್ ಮಾಡಿಕೊಂಡಿಲ್ಲ ಅಂತಾದ್ರೆ ಈ ಕೂಡಲೇ ಅಪ್ ಡೇಟ್ ಮಾಡಿಕೊಳ್ಳಿ..!


ಹೊಸ ಫೀಚರ್‍ನಲ್ಲಿ ನೀವು ಸೆಂಡರ್ ಹಾಗೂ ರಿಸೀವರ್ ಮೆಸೇಜನ್ನು ಡಿಲೀಟ್ ಮಾಡಲು ಅವಕಾಶವಿದೆ..! ನೀವು ಡಿಲೀಟ್ ಮಾಡಬೇಕೆಂಬ ಮೆಸೇಜ್ ಅನ್ನು ಮಾಮೂಲಿಯಂತೆ ಡಿಲೀಟ್ ಮಾಡಲು ಆಯ್ಕೆಮಾಡಿಕೊಳ್ಳಿ..! ಆಗ ನಿಮಗೆ ಡಿಲೀಟ್ ಫಾರ್ ಮಿ ಅಥವಾ ಡಿಲೀಟ್ ಫಾರ್ ಎವರಿವನ್ ಎಂಬ ಆಯ್ಕೆ ತೋರಿಸುತ್ತದೆ..! ನೀವು ಡಿಲೀಟ್ ಫಾರ್ ಮಿ ಎಂಬ ಆಯ್ಕೆಯನ್ನು ಒತ್ತಿದ್ರೆ ಅದು ನಿಮ್ಮಲ್ಲಿ ಮಾತ್ರ ಡಿಲೀಟ್ ಆಗಿರುತ್ತೆ..! ಡಿಲೀಟ್ ಫಾರ್ ಎವರಿವನ್ ಆಯ್ಕೆ ಮಾಡಿಕೊಳ್ಳಿ ಸೆಂಡರ್ ಆದ ನಿಮ್ಮ ಹಾಗೂ ರಿಸೀವರ್ ವಾಟ್ಸಪ್ ವಿಂಡೋದಲ್ಲೂ ಮೆಸೇಜ್ ಕೂಡ ಡಿಲೀಟ್ ಆಗಿರುತ್ತೆ..! ಹೀಗೆ ರಿಸೀವರ್ ಮೆಸೇಜನ್ನೂ ಕೂಡ ಡಿಲೀಟ್ ಮಾಡಬೇಕೆಂದ್ರೆ 7 ನಿಮಿಷದೊಳಗೆ ಮಾಡಬೇಕು..!


ನೀವು ಡಿಲೀಟ್ ಮಾಡಿದ ಬಳಿಕ ಅಬ್ಬಾ ಅಂತ ನಿಟ್ಟುಸಿರು ಬಿಡುವಂಗಿಲ್ಲ..! ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದಷ್ಟೇ..! ಯಾಕಂದ್ರೆ ಡಿಲೀಟ್ ಮಾಡಿದಾಗ ನಿಮಗೆ ಕ್ಲೀನ್‍ಚಿಟ್ ಸಿಕ್ಕಿರಲ್ಲ..! ನೀವು ಮೆಸೇಜ್ ಡಿಲೀಟ್ ಮಾಡಿದ್ದೀರಿ ಅನ್ನೋದು ರಿಸೀವರ್‍ಗೆ ತಿಳಿಯುತ್ತೆ..! ಚಾಟಿಂಗ್ ವಿಂಡೋದಲ್ಲಿ ದಿಸ್ ಮೆಸೇಜ್ ಹ್ಯಾಸ್ ಬೀನ್ ಡಿಲೀಟೆಡ್ ಎಂದು ತೋರಿಸುತ್ತೆ..! ಆಗ ನೀವು ಯಾರಿಗೆ ಮೆಸೇಜ್ ಕಳುಹಿಸಿರ್ತೀರೋ ಅವರು, ನೀವು ಡಿಲೀಟ್ ಮಾಡುವ ಮೊದಲು ನಿಮ್ಮ ಮೆಸೇಜನ್ನು ನೋಡಿಲ್ಲ ಅಂತಾದ್ರೆ ನೀವು ಪುಣ್ಯಾತ್ಮರು..! ಡಿಲೀಟ್ ಮಾಡಿದ ಬಳಿಕ ಅವರು, ಹೇ, ಯಾವ ಮೆಸೇಜ್ ಮಾಡಿ ಡಿಲೀಟ್ ಮಾಡಿದ್ಯಾ ಅಂತ ಪ್ರಶ್ನಿಸಬಹುದು..! ಅದಕ್ಕೆ ಉತ್ತರ ನೀಡಲು ರೆಡಿಯಾಗಿರಿ..! ಅದೃಷ್ಟಕ್ಕೆ ಮೆಸೇಜ್ ಡಿಲೀಟ್ ಮಾಡುವ ಅವಕಾಶವಾದ್ರೂ ಸಿಕ್ಕಿದೆಯಲ್ಲಾ..! ಆಗುವ ಮುಜುಗರ ತಪ್ಪಿಸಿಕೊಳ್ಳಬಹುದು..!
ನೀವಿನ್ನೂ ವಾಟ್ಸಪ್ ಅಪ್ ಡೇಟ್ ಮಾಡಿಕೊಂಡಿಲ್ಲ ಅಂತಾದ್ರೆ ಈ ಕೂಡಲೇ ಅಪ್ ಡೇಟ್ ಮಾಡಿಕೊಳ್ಳಿ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...