ಕೆಲ್ಸ ಕೊಡಿಸ್ತಾರಂತ ದುಡ್ಡುಕೊಟ್ಟು ಪಂಗನಾಮ ಹಾಕಿಸ್ಕೊಳ್ಬೇಡಿ…!

Date:

ನಿಜ ಇವತ್ತು ಉದ್ಯೋಗ ಸಿಗೋದು ತುಂಬಾನೇ ಕಷ್ಟ…! ನಿರುದ್ಯೋಗ ಸಮಸ್ಯೆಯನ್ನೇ ಅಸ್ತ್ರವಾಗಿಸಿಕೊಂಡು ದುಡ್ಡು ಮಾಡೋ ಕಳ್ಳರ ಸಂಖ್ಯೆ ಹೆಚ್ಚುತ್ತಿದೆ…! ನಿಮಗೆ ಕೆಲಸ ಕೊಡಿಸ್ತೀನಿ ಅಂತ ದುಡ್ಡು ಪೀಕಿ ನಿರುದ್ಯೋಗಿಗಳನ್ನು ವಂಚಿಸೋರು ಹುಟ್ಟಿಕೊಳ್ತಾ ಇದ್ದಾರೆ ಹುಷಾರ್…!

ಉದ್ಯೋಗ ಕೊಡಿಸ್ತೀನಿ ಅಂತ ಬಂದು ದುಡ್ಡು ಕೇಳೋರನ್ನು ನಂಬಿ ಮೋಸ ಹೋಗ್ಬೇಡಿ. ಹೀಗೆ ನಿರುದ್ಯೋಗಿಗಳನ್ನು ವಂಚಿಸ್ತಾ ಇದ್ದ ವ್ಯಕ್ತಿಯೊಬ್ಬನನ್ನು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅನಿಲ್ ಕುಮಾರ್ ಎಂಬಾತ ಆರೋಪಿ.


ಈತ ದಾಖಲಾತಿ ಪರಿಶೀಲನೆಗೆಂದು 6,400, ಉದ್ಯೋಗ ಖಚಿತಪಡಿಸೋಕೆಂದು 11,700 ರೂ ಶುಲ್ಕ, ಐಡಿಗೆ 4,36,500 ರೂ, ಕನ್ಸಲ್ಟೆನ್ಸ್ ಫೀಸ್ 52,400 ಹಾಗೂ ಅಧಿಕಾರಿಗಳ ಸಹಿಗಂತ 65,900 ರೂ ಇದರ ಜೊತೆಗೆ ಜಿಎಸ್‍ಟಿ ಚಾರ್ಜ್ ಅಂತ 68,462 ರೂ ಮತ್ತಿತರ ಫೀಸ್ ಸೇರಿದಂತೆ ಒಟ್ಟಾರೆ 7,19,360 ರೂ ಅನ್ನು ಯುವತಿಯೊಬ್ಬರಿಗೆ ಕರೆ ಮಾಡಿ ಕೇಳಿದ್ದನಂತೆ…! ಇದನ್ನು ನಂಬಿ ನಿರುದ್ಯೋಗಿ ಯುವತಿ ಆತನ ಖಾತೆಗೆ ಹಣ ಜಮೆ ಮಾಡಿದ್ದಾರಂತೆ…! ಬಳಿಕ ಆಸಾಮಿ ವಾಪಸ್ಸು ಕರೆ ಮಾಡಿಲ್ಲ..! ತಾನು ವಂಚನೆಗೆ ಒಳಗಾಗಿರೋದನ್ನು ತಿಳಿದ ಯುವತಿ ಸಿಐಡಿಗೆ ದೂರು ನೀಡಿದ್ದರು. ಇದೀಗ ಸಿಐಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಅನಿಲ್ ಕುಮಾರ್ ನಿರುದ್ಯೋಗಿ ಯುವತಿಯರನ್ನೇ ಟಾರ್ಗೆಟ್ ಮಾಡಿ ಹಣ ವಸೂಲಿ ಮಾಡ್ತಿದ್ದ ಎಂದು ತಿಳಿದುಬಂದಿದೆ.

Share post:

Subscribe

spot_imgspot_img

Popular

More like this
Related

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ!

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ! ಕಲಬುರಗಿ: ಜಿಲ್ಲೆಯ ಕಮಲಾಪುರ ತಹಶಿಲ್ದಾರ್...

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ ಬೆಂಗಳೂರು: ಹಿಂದೂಪರ ಕಾರ್ಯಕರ್ತ...

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ ಬೆಂಗಳೂರು: ಕಳೆದ ಕೆಲ...

ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ: ಇಂದು ಭಾಲ್ಕಿಯಲ್ಲಿ ಅಂತಿಮ ದರ್ಶನ, ಸಂಜೆ ಅಂತ್ಯಕ್ರಿಯೆ

ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ: ಇಂದು ಭಾಲ್ಕಿಯಲ್ಲಿ ಅಂತಿಮ ದರ್ಶನ,...