ಕೆಲವರಿಗೆ ಮೊಬೈಲ್ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್..! ಐಫೋನ್ ಕೊಳ್ಳೋದು ಅಂದ್ರೆ ಕೇಳೋದೇ ಬೇಡ…! ಸ್ವರ್ಗಕ್ಕೆ ಮೂರೇ ಗೇಣು ಅಂತಿರ್ತಾರೆ..! ಮಾರುಕಟ್ಟೆಗೆ ಹೊಸದಾಗಿ ಬಂದ ಐಫೋನ್‍ಗಳನ್ನು ತಡಮಾಡದೇ ಕೊಳ್ಳೋರು ನಿಮ್ಗೆ ಗೊತ್ತು…! ಆದ್ರೆ, ಐಫೋನ್ ಖರೀದಿಗೆ ಬ್ಯಾಂಡ್, ವಾದ್ಯದೊಂದಿಗೆ ಕುದುರೆಯನ್ನೇರಿ ಬರೋದು ಗೊತ್ತಿದ್ಯಾ…?
ಥಾಣೆ ನಗರದಲ್ಲಿ ಯುವಕನೊಬ್ಬ ಹೊಸ ಐಫೋನ್ ಎಕ್ಸ್ ಕೊಳ್ಳಲು ಕುದುರೆ ಏರಿ ವಾದ್ಯ, ಬ್ಯಾಂಡ್‍ಗಳ ಸಮೇತ ಅಭಿಮಾನಿಗಳ ಜೊತೆ ಹೋಗಿದ್ದಾನೆ…! ಐ ಲವ್ ಐಫೋನ್ ಎಕ್ಸ್ ಎಂಬ ಬ್ಯಾನರ್ ಹಿಡಿದು ಕುದುರೆ ಸವಾರಿ ಮಾಡಿದ ಯುವಕನ ಹೆಸರು ಮಹೇಶ್ ಪಲಿವಾಲ್. ಕುದುರೆ ಏರಿ ಐಫೋನ್ ಕೊಳ್ಳಲು ಬಂದ ಮಹೇಶ್‍ಗೆ ಮಾಲೀಕರೇ ಅವನ ಬಳಿ ಬಂದು ಇಷ್ಟದ ಐಫೋನ್ ನೀಡಿದ್ದಾರೆ..! ಕುದುರೆ ಮೇಲೆ ಕುಳಿತೇ ಮಹೇಶ್ ಐಫೋನ್ ಖರೀದಿಸಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ. ನೀವಿನ್ನೂ ನೋಡಿಲ್ಲ ಅಂತಾದ್ರೆ ಇಲ್ಲಿದೆ ನೋಡಿ.