ರಾಧ ಹಿರೇಗೌಡರ್, ಈ ಹೆಸರು ಕೇಳ್ದೇ ಇರೋರಿಲ್ಲ..! ಪಬ್ಲಿಕ್ ಟಿವಿಯ ಯಶಸ್ಸಿನ ಹಿಂದೆ ಈ ರಾಧ ಹಿರೇಗೌಡರ್ ಅವರ ಶ್ರಮವೂ ಬಹಳಷ್ಟಿದೆ ಎನ್ನೋದು ಎಲ್ಲರಿಗೂ ಗೊತ್ತಿರುವ ವಿಷಯವೇ. ರಾಧ ಹಿರೇಗೌಡರ್ ಪಬ್ಲಿಕ್ ಟಿವಿ ಪರದೆ ಅಲಂಕರಿಸಿದ್ದಾರೆ ಅಂತಾದ್ರೆ ಯಾರೂ ತಮ್ಮ ಟಿವಿ ರಿಮೋಟ್‍ಗೆ ಕೆಲಸ ಕೊಡ್ತಿರ್ಲಿಲ್ಲ…! ರಾಧ ಅವರ ಕಾರ್ಯಕ್ರಮ ಮುಗಿದ ಬಳಿಕವೇ ಚಾನಲ್ ಚೇಂಜ್ ಆಗ್ತಿತ್ತು..! ಇಂತಿಪ್ಪ ರಾಧ ಹಿರೇಗೌಡರು ಕೆಲವು ತಿಂಗಳುಗಳಿಂದ ಪಬ್ಲಿಕ್ ಟಿವಿ ಪರದೆಯಲ್ಲಿ ಕಾಣಿಸ್ತಾ ಇರ್ಲಿಲ್ಲ..!
ಪಬ್ಲಿಕ್ ಟಿವಿಯನ್ನು ಬಿಟ್ಟು ಹೊರಬಂದ ಸ್ಟಾರ್ ನಿರೂಪಕಿ ರಾಧ ಹಿರೇಗೌಡರ್ ಫೋಕಸ್ ಎಂಬ ಹೊಸ ಚಾನಲ್‍ನ ಪ್ರಧಾನ ಸಂಪಾದಕಿಯಾಗಿ ಹೋಗ್ತಾರೆ ಎಂದು ಹೇಳಲಾಗ್ತಿತ್ತು. ಬಳಿಕ ಜನಶ್ರೀ ವಾಹಿನಿಯು ಜನಶ್ರೀ ಉತ್ತರವಾಗಿ ರೀಲಾಂಚ್ ಆಗಲಿದ್ದು, ಹೊಸ ಜನಶ್ರೀಯಲ್ಲಿ ರಾಧ ಅಬ್ಬರಿಸ್ತಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೆ, ಇವೆಲ್ಲವೂ ಕೇವಲ ಅಂತೆ-ಕಂತೆ ಅಷ್ಟೇ..! ಈಗ ರಾಧ ಅವರ ಮುಂದಿನ ಪಯಣ ಎತ್ತ ಕಡೆ ಸಾಗಿದೆ ಅನ್ನೋದು ಗೊತ್ತಾಗಿದೆ.
ಯಸ್, ಸ್ಟಾರ್ ನಿರೂಪಕಿ ರಾಧ ಹಿರೇಗೌಡರ್ ಇನ್ನು ಬಿಟಿವಿಯ ಪ್ರಮುಖ ಆ್ಯಂಕರ್..!? ಬಿಟಿವಿ ಬಳಗ ಸೇರಿರೋ ರಾಧ ಅವರು ಶೀಘ್ರದಲ್ಲೇ ಬಿಟಿವಿ ಪರದೆ ಮೇಲೆ ರಾರಾಜಿಸಲಿದ್ದಾರೆ.
ಚಂದನ್ ಶರ್ಮಾ ಬಿಟಿವಿ ಬಿಟ್ಟು ಟಿವಿ9 ಸೇರಿರೋದು ಗೊತ್ತೇ ಇದೆ. ಅನುಭವಿ ಪತ್ರಕರ್ತ ರಂಗನಾಥ್ ಭಾರಧ್ವಜ್ ಕೂಡ ಟಿವಿ9 ಸೇರಿದ್ದಾರೆ. ಟಿವಿ9ನ ಯಶಸ್ಸಿನಲ್ಲಿ ಪ್ರಮುಖಪಾತ್ರವಹಿಸಿದ್ದ ತೆರೆಮರೆಯ ಹೀರೋಗಳಾದ ರವಿಕುಮಾರ್ ಮತ್ತು ಮಾರುತಿ ಅವರು ಟಿವಿ9 ಬಿಟ್ಟು ಬಂದಿರೋದು ಕೂಡ ಈಗ ಇತಿಹಾಸ…!
ಹೀಗೆ ಸದ್ಯ ಸುದ್ದಿ ವಾಹಿನಿಗಳಲ್ಲಿ ಬದಲಾವಣೆ ಪರ್ವ ಶುರುವಾಗಿದ್ದು, ಈಗ ರಾಧ ಹಿರೇಗೌಡರ್ ಅವರ ಸರದಿ…?ಮೊನ್ನೆ ಮೊನ್ನೆ ತನಕ ಪಬ್ಲಿಕ್ ಟಿವಿಯಲ್ಲಿ ಕಾಣಿಸ್ತಾ ಇದ್ದ ರಾಧ ಅವರನ್ನು ನಾವಿನ್ನು ಬಿಟಿವಿ ಪರದೆಯಲ್ಲಿ ನೋಡಲಿದ್ದೇವೆ…!?
ಸ್ಟಾರ್ ನಿರೂಪಕಿ ರಾಧ ಹಿರೇಗೌಡರ್ ಅವರಿಗೆ ಶುಭವಾಗಲಿ…