ಮಧ್ಯಾಹ್ನ 2 ಗಂಟೆಗೆ ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆ ಈಗಾಗಲೇ ಕೆಲ ವಿದ್ಯಾರ್ಥಿಗಳ ಕೈ ಸೇರಿದೆ..! ಇದರಿಂದ ಪರೀಕ್ಷೆ ಮುಂದೂಡಲ್ಪಟ್ಟಿದೆ..!
ಹೌದು ಇದು ಗುಲ್ಬಾರ್ಗ ವಿಶ್ವವಿದ್ಯಾನಿಲಯದ ಇನ್ನೊಂದು ಯಡವಟ್ಟು. ಈ ಹಿಂದೆ ಬಿಕಾಂ 3ನೇ ಸೆಮಿಸ್ಟರ್‍ನ ಸಂಖ್ಯಾಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಪರೀಕ್ಷೆ ಮುಂದೂಡಲ್ಪಟ್ಟಿತ್ತು. ಈಗ ಸ್ಮಾಲ್ ಬಿಸ್‍ನೆಸ್ ಮ್ಯಾನೇಜ್ಮೆಂಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ..!
ಮಧ್ಯಾಹ್ನ 2ಗಂಟೆಗೆ ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಹಿರಂಗವಾಗಿದ್ದು ವಾಟ್ಸಪ್‍ನಲ್ಲಿ ಹರಿದಾಡ್ತಾ ಇದ್ದು, ಪರೀಕ್ಷೆಯನ್ನು ಮುಂದೂಡಲಾಗಿದೆ. ಇದರಿಂದ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯವಾಗಿದೆ.