ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…!
ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು ಕನ್ನಡದ ನಿರೂಪಕರ ಕಿರುಪರಿಚಯವನ್ನು ನಮ್ಮ ಫೇಸ್‍ಬುಕ್ ಪೇಜಿನಲ್ಲಿ ಮಾಡಿಕೊಡುತ್ತೇವೆ.
ಈ ಪರಿಚಯ ಕಾರ್ಯಕ್ರಮ ನಾಳೆಯಿಂದಲೇ ಶುರು. ಫೆಬ್ರವರಿವರೆಗೆ ನಡೆಯಲಿದೆ. ಈ ವರ್ಷ ನೆಚ್ಚಿನ ನಿರೂಪಕರ ಆಯ್ಕೆಗೆ ಕೇವಲ ಫೇಸ್‍ಬುಕ್ ಮಾತ್ರವಲ್ಲದೆ ಫೋನ್ ವೋಟಿಂಗ್ ಇರುತ್ತೆ.