ಏನಾದ್ರೂ ಸಾಧಿಸಲೇ ಬೇಕು..! ಆದ್ರೆ ಏನು ಮಾಡೋಕೆ ಟೈಮೇ ಆಗಲ್ಲ..! ಟೈಮ್ ಸಿಕ್ರೆ ಓದ್ಬೇಕಿತ್ತು..! ಓದೋಕೆ ಟೈಮೇ ಸಿಗ್ತ ಇಲ್ಲ ಅಂತ ಹೇಳೋ ಜನರನ್ನು ನೋಡಿದ್ದೀರಿ, ಕೇಳಿದ್ದೀರಿ..! ಅವರಲ್ಲಿ ನಾವೂ ಒಬ್ಬರಾಗಿರಬಹದು..! ಹೀಗೆ ಓದೋಕೆ ಟೈಮ್ ಸಿಗ್ತಾ ಇಲ್ಲ.., ಬೇರೆ ಏನೂ ಮಾಡೋಕೆ ಆಗ್ತಾನೇ ಇಲ್ಲ ಅಂತ ಗೊಣಗುಟ್ಟೋ ಪ್ರತಿಯೊಬ್ಬರೂ ಈ ಸ್ಟೋರಿಯನ್ನು ಓದಿದ ಮೇಲೆ ಖಂಡಿತಾ ಸಮಯ ಸಾಕಗಲ್ಲ ಅನ್ನೋ ಮಾತನ್ನಾಡದೇ ಸಿಕ್ಕ ಸಮಯವನ್ನು ಒಳ್ಳೇ ರೀತಿಲಿ ಬಳಸಿಕೊಳ್ಳೋಕೆ ನೋಡ್ತಾರೆ..!
ಈಗ ನಾನು ಹೇಳೋಕೆ ಹೊರಟಿರೋದು ರಿಕ್ಷಾ ಪುಲ್ಲರ್ ಬಗ್ಗೆ..! ಈ ರಿಕ್ಷಾ ಪುಲ್ಲರ್ ಹೆಸರು ಸುನೀಲ್ ಅಂತ..! ಮೂಲತಃ ಉತ್ತರಪ್ರದೇಶದ ಲಿಖಿಮ್ಪುರಿಖಿರಿಯವರು. ತಳ್ಳೋ ರಿಕ್ಷಾವೇ ಇವರ ಆದಾಯದ ಮೂಲ..! ರಿಕ್ಷವನ್ನು ಇಟ್ಕೊಂಡಿರುವ ಇವರು ಪದವೀಧರರರು..! ಪದವಿ ಪೂರ್ಣಗೊಳಿಸಿರೋ ಇವರು ಬೇರೆ ಕಡೆ ಕೆಲಸಕ್ಕೆ ಹೋಗ್ದೇ ರಿಕ್ಷಾವನ್ನು ಇಟ್ಕೊಂಡಿದ್ದಾರೆ..! ಆದರೆ ಇವರ ಕಣ್ಣ ಮುಂದೆ ಅದೆಂಥಾ ಗುರಿ ಇದೆ ಗೊತ್ತಾ..?!
ಅವರೊಂದು ಪರೀಕ್ಷೆಗೆ ತಯಾರಿ ನಡೆಸ್ತಾ ಇದ್ದಾರೆ..! ಆ ಪರೀಕ್ಷೆಯನ್ನು ಬರೆಯಬೇಕು ಅಂದ್ರೆ ಅಷ್ಟೊಂದು ಸುಲಭದ ಮಾತಲ್ಲ..! ಅದಕ್ಕೆ ವರ್ಷಾನುಗಟ್ಟಲೆ, ಕಣ್ಣಿಗೆ ಎಣ್ಣೆ ಬಿಟ್ಕೊಂಡು ಓದ್ಬೇಕು..! ಮೊದಲ ಯತ್ನದಲ್ಲೇ ಯಶಸ್ವಿ ಆಗೋದು ತುಂಬಾ ಕಷ್ಟ..! ಆ ಪರೀಕ್ಷೆ ಪಾಸ್ ಮಾಡೋದು ಅಂದ್ರೆ ದೊಡ್ಡ ಸಾಧನೆ…! ಆ ಪರೀಕ್ಷೆಗೆ ಅದೆಷ್ಟು ತಯಾರಿ ನಡೆಸ್ತಾರೆ…! ಅದೆಷ್ಟು ಕಷ್ಟ ಅನ್ನೋದನ್ನು ತಯಾರಿ ನಡೆಸ್ತಾ ಇರೋರಿಗೇ..ಆ ಪರೀಕ್ಷೆಯನ್ನು ಬರೆದು ಸ್ವಲ್ಪದರಲ್ಲೇ ಸೋಲನ್ನು ಕಂಡೋರಿಗೆ.., ಅಥವಾ ಆ ಪರೀಕ್ಷೆಯಲ್ಲಿ ಕಷ್ಟಪಟ್ಟು ಗೆದ್ದು ಬಂದವರಿಗೇ ಕೇಳ್ಬೇಕು..! ಈ ಪರೀಕ್ಷೆ ಯಾವುದು ಅಂತ ನಿಮಗೆ ಗೊತ್ತಾಗಿರ್ಬೇಕು.., ಯಸ್, ಆ ಪರೀಕ್ಷೆ ಬೇರೆ ಯಾವುದೂ ಅಲ್ಲ ಯುಪಿಎಸ್ಸಿ…ನಡೆಸೋ ಪರೀಕ್ಷೆ..!
ಹೌದು ಸುನೀಲ್ ಯುಪಿಎಸ್ಸಿ ಗೆ ತಯಾರಿ ನಡೆಸ್ತಾ ಇದ್ದಾರೆ..! ತನ್ನ ರಿಕ್ಷಾದಲ್ಲೇ ಒಂದಷ್ಟು ಪುಸ್ತಕಗಳನ್ನು ಇಟ್ಕೊಂಡಿದ್ದಾರೆ. ಟೈಮ್ ಸಿಕ್ಕಾಗೆಲ್ಲಾ ಓದ್ತಾರೆ..! ಬಾಡಿಗೆ ಮನೆಯಲ್ಲಿ ಇರೋಣ ಅಂದ್ರೆ ಜೊತೆ ಇರೋರು ಓದೋಕೆ ಬಿಡಲ್ಲ.. ಕುಡಿದು ಗಲಾಟೆ ಮಾಡ್ತಾರೆ..! ಅದಕ್ಕಾಗಿ ಮನಗೇ ಹೋಗಲ್ಲ..! ರಿಕ್ಷಾದಲ್ಲೇ ಓದ್ತಾರೆ..! ಚಳಿ ಆಗ್ತಾ ಇದ್ರೂ ರಿಕ್ಷಾದಲ್ಲೇ ಇರ್ತಾರೆ..! ಕಷ್ಟಪಟ್ಟು ಓದ್ತಾ ಇರೋ ಸುನೀಲ್ ಆದಷ್ಟು ಬೇಗ ಕಂಡ ಕನಸನ್ನು ನನಸು ಮಾಡಿಕೊಳ್ಳುವಂತಾಗಲಿ ಅಂತ ಆಶಿಸೋಣ..! ಅವರಿಗೆ ಶುಭವಾಗಲಿ.
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು