ಭಾವನ ಸ್ಟಾರ್ ನಿರೂಪಕಿ ಆಗುವ ಮುನ್ನ…

Date:

ಮಾಧ್ಯಮ ಲೋಕದಲ್ಲಿ ಹತ್ತು ಹಲವು ಟೆಲಿವಿಷನ್ ವಾಹಿನಿಗಳಿವೆ. ಹೊಸ ಹೊಸ ಚಾನಲ್‍ಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಬಹಳಷ್ಟು ಮಂದಿ ನಿರೂಪಕರು ತಮ್ಮ ಚಾನಲ್‍ಗಳ ಪರದೆಯಲ್ಲಿ ಮಿಂಚುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಮಿಂಚುವವರೂ ಇದ್ದಾರೆ. ಆದರೆ, ತೆರೆಯಲ್ಲಿ ನಿರೂಪಕರೆಂದು ಕಾಣಿಸಿಕೊಂಡವರೆಲ್ಲಾ ವೀಕ್ಷಕರನ್ನು ತಲುಪುವುದಿಲ್ಲ..!

ತನ್ನದೇಯಾದ ವಿಭಿನ್ನ ನಿರೂಪಣಾ ಶೈಲಿ, ಮಾತಿನ ಮೂಲಕ ಗಮನಸೆಳೆಯುತ್ತಾರೆ. ಹೀಗೆ ಗಮನಸೆಳೆಯಬಲ್ಲ ನಿರೂಪಕರೆಲ್ಲರಿಗೂ ಸ್ಟಾರ್ ಪಟ್ಟ ಸಿಗುತ್ತೆ ಅಂತ ಹೇಳೋಕಾಗಲ್ಲ..! ಕೆಲವರು ಮಾತ್ರ ಸ್ಟಾರ್ ನಿರೂಪಕರಾಗಿ ಮಾಧ್ಯಮ ಲೋಕದಲ್ಲಿ ರಾರಾಜಿಸ್ತಾರೆ..! ಅಂತಹ ಸ್ಟಾರ್ ನಿರೂಪಕರಲ್ಲಿ ಸಾಲಿನಲ್ಲಿ ನಿಲ್ತಾರೆ ನಮ್ಮ ಕನ್ನಡತಿ ಭಾವನ..!


ಹೌದು, ಸುವರ್ಣ 24*7 ಸುದ್ದಿವಾಹಿನಿಯ ಪ್ರಧಾನ ನಿರೂಪಕಿ ಭಾವನ ಇವತ್ತು ಕನ್ನಡ ಮಾಧ್ಯಮ ಲೋಕದ ಸ್ಟಾರ್ ನಿರೂಪಕಿಯರಲ್ಲಿ ಒಬ್ಬರು. ಮೂಲತಃ ಅರಮನೆ ನಗರಿ ಮೈಸೂರಿನವರಾದ ಇವರು ಅರ್ಥಶಾಸ್ತ್ರ ಪದವೀಧರೆ.
ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಕಸ್ತೂರಿ ವಾಹಿನಿಯವರು ಕಾಲೇಜಿನಲ್ಲಿ ನೆಡಿಸಿದ ಆಡೀಷನ್‍ನಲ್ಲಿ ಭಾವನ ಆಯ್ಕೆಯಾದರು. ನಾನೊಬ್ಬ ಪತ್ರಕರ್ತೆ ಆಗುತ್ತೇನೆ, ನಿರೂಪಕಿ ಆಗುತ್ತೇನೆ ಎಂಬ ಕನಸು ಸಹ ಕಂಡಿರದ ಭಾವನಾ ಅವರಿಗೆ ಈ ಮೂಲಕ ಮಾಧ್ಯಮ ಕ್ಷೇತ್ರದ ಬಾಗಿಲು ತೆರೆಯಿತು.


ಸಿಕ್ಕ ಅವಕಾಶವನ್ನು ಬಳಸಿಕೊಂಡರೆ ಖಂಡಿತಾ ಯಶಸ್ಸು ಸಿಗುತ್ತೆ. ಅದರಂತೆ ಭಾವನ ತಮಗೆ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡರು. ತಮ್ಮೊಳಗಿನ ನಿರೂಪಕಿಯನ್ನು ಜಾಗೃತಗೊಳಿಸಿ, ತಾನೇನು ಎಂಬುದನ್ನು ಸಾಭೀತು ಪಡಿಸಿದರು.
2007ರಲ್ಲಿ ಕಸ್ತೂರಿ ವಾಹಿನಿ ಬಳಗ ಸೇರಿದ ಭಾವನ ಅವರು ನಡೆಸಿಕೊಟ್ಟ ಮೊದಲ ಕಾರ್ಯಕ್ರಮ ‘ಬೆಳ್ಳಿ ಚುಕ್ಕಿ’. ಎರಡು ವರ್ಷ ಕಸ್ತೂರಿವಾಹಿನಿಯಲ್ಲಿ ssಸೇವೆಸಲ್ಲಿಸಿದ ಇವರನ್ನು 2009ರಲ್ಲಿ ಸುವರ್ಣ 24*7 ಸುದ್ದಿವಾಹಿನಿ ಕೈಬೀಸಿ ಕರೆಯಿತು.
ಸತತ 8 ವರ್ಷಗಳಿಂದ ಸುವರ್ಣ ವಾಹಿನಿಯಲ್ಲಿರುವ ಭಾವನ ಪ್ರತಿದಿನ ಬೆಳಗ್ಗೆ ‘ಗುಡ್ ಮಾರ್ನಿಂಗ್ ಕರ್ನಾಟಕ’ ಕಾರ್ಯಕ್ರಮ ನಡೆಸಿಕೊಡ್ತಾರೆ. ಜೊತೆಗೆ ಪ್ರೈಂ ನ್ಯೂಸ್‍ನಲ್ಲೂ ಭಾವನ ಕಾಣ್ತಾರೆ. ಕಾರ್ಯಕ್ರಮ ನಿರೂಪಣೆ ಇರಲಿ, ಸುದ್ದಿ ನಿರೂಪಣೆ ಇರಲಿ, ಚರ್ಚೆಗಳಿರಲಿ ಎಲ್ಲದಕ್ಕೂ ಭಾವನ ಸೈ.

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

10ನವೆಂಬರ್ 2017 : ಈಶ್ವರ್ ದೈತೋಟ
11 ನವೆಂಬರ್ 2017 : ಭಾವನ

Share post:

Subscribe

spot_imgspot_img

Popular

More like this
Related

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...