ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಹೊಸಬಾಳಿನ ಹೊಸ್ತಿಲಲ್ಲಿದ್ದಾರೆ. ಇದೇ ತಿಂಗಳು (ನವೆಂಬರ್) 23ಕ್ಕೆ ಭುವಿ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮೀರತ್‍ನಲ್ಲಿ ಮದುವೆ ಕಾರ್ಯಕ್ರಮಗಳು ನಡೆಯಲಿದ್ದು. ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ನವೆಂಬರ್ 26 ಮತ್ತು 30ರಂದು ಬುಲಂದರ್ ಹಾಗೂ ದೆಹಲಿಯಲ್ಲಿ ಔತಣಕೂಟ ನಡೆಯಲಿದೆ. ಇದರಲ್ಲಿ ಟೀಂ ಇಂಡಿಯಾ ಆಟಗಾರರು ಪಾಲ್ಗೊಳ್ಳುವರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಭುವಿ ಮದುವೆ ಆಗುತ್ತಿರುವುದು ಬಹುಕಾಲದ ಗೆಳತಿ ನೂಪುರ್ ಅವರನ್ನು. ಮೂಲತಃ ನೂಪುರ್ ನೊಯ್ಡಾ ನಿವಾಸಿ. ವೃತ್ತಿಯಲ್ಲಿ ಇಂಜಿನಿಯರ್.