ಭಾರತ ಕ್ರಿಕೆಟ್ ತಂಡದ ಯುವ ಬೌಲರ್ ಆತ್ಮಹತ್ಯೆಗೆ ಯತ್ನಿಸಿದ್ದರಂತೆ..! ತನ್ನ ಪ್ರತಿಭೆಯನ್ನು ಗುರುತಿಸಿ ತಂಡಕ್ಕೆ ಆಯ್ಕೆ ಮಾಡದೇ ಇದ್ದಾಗ ಕುಲದೀಪ್ ಆತ್ಮಹತ್ಯೆಗೆ ಮುಂದಾಗಿದ್ದರಂತೆ..! ಈಗಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ತಮ್ಮ 13ನೇ ವಯಸ್ಸಲ್ಲಿ ಉತ್ತರ ಪ್ರದೇಶದ ಅಂಡರ್ 15 ತಂಡಕ್ಕೆ ಆಯ್ಕೆಯಾಗಲು ಕಠಿಣ ತರಬೇತಿ ಪಡೆದಿದ್ದೆ. ಇಷ್ಟಾದರೂ ನನ್ನ ಪ್ರಯತ್ನಕ್ಕೆ ಫಲಸಿಕ್ಕಿರಲಿಲ್ಲ. ಆಯ್ಕೆದಾರರು ತನ್ನನ್ನು ಕಡೆಗಾಣಿಸಿದ್ದಕ್ಕೆ ಬೇಜಾರಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದೆ ಅಂತ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ವೇಗದ ಬೌಲರ್ ಆಗಬೇಕೆಂದು ಇಷ್ಟಪಟ್ಟಿದ್ದೆ, ಕೋಚ್ ಸಲಹೆ ಮೇರೆಗೆ ಸ್ಪಿನ್ ಬೌಲರ್ ಆದೆ ಎಂದು ಕುಲದೀಪ್ ಯಾದವ್ ತಿಳಿಸಿದ್ದಾರೆ.
ಈವರೆಗೆ ಟೀಂ ಇಂಡಿಯಾದ ಪರ 12 ಏಕದಿನ ಪಂದ್ಯಗಳಿಂದ 19 ವಿಕೆಟ್, 2 ಟೆಸ್ಟ್ ಪಂದ್ಯಗಳಿಂದ 9 ವಿಕೆಟ್ ಹಾಗೂ 5 ಟಿ-20 ಪಂದ್ಯದಿಂದ 6 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಭರವಸೆಯ ಆಟಗಾರನಾಗಿ ಬೆಳೆಯುತ್ತಿದ್ದಾರೆ.