ನೀವು ಹೇಳಿದ್ದು ನಾವು ಕೇಳಿದ್ದು’ ಕಾರ್ಯಕ್ರಮದ ರೂವಾರಿ ಯಾರು ಗೊತ್ತಾ..? ತೆರೆಮರೆಯ ಹೀರೋ ಇಲ್ಲಿ ನಿಮ್ಮ ಮುಂದೆ..!

Date:

‘ನೀವು ಹೇಳಿದ್ದು, ನಾವು ಕೇಳಿದ್ದು’ ,ಈ ಕಾರ್ಯಕ್ರಮ ಯಾರಿಗೆ ತಾನೆ ಗೊತ್ತಿಲ್ಲ? ಟಿವಿ9ನ ಅತ್ಯಂತ ಜನಪ್ರಿಯ ಕಾರ್ಯಕ್ರಮವಾದ ಇದು ಅಂದಿಗೂ ಹಿಟ್, ಇಂದಿಗೂ ಹಿಟ್, ಎಂದೆಂದಿಗೂ ಹಿಟ್…!
ಧೀರೇಂದ್ರ ಗೋಪಾಲ್ ಅವರ ವಾಯ್ಸ್ ನಲ್ಲಿ ಮೂಡಿ ಬರೋ ಈ ಕಾರ್ಯಕ್ರಮವನ್ನು ನೀವು ನೋಡಿರ್ತೀರಿ. ರಾಜಕೀಯ ವಿಡಂಭನೆಯ ನಂಬರ್ 1 ಕಾರ್ಯಕ್ರಮವಿದು. ಈ ಜನಪ್ರಿಯ ಕಾರ್ಯಕ್ರಮದ ಹಿಂದಿನ ಶಕ್ತಿ ಯಾರು ಗೊತ್ತಾ?‌ 
ಇವರು ಮಂಜುನಾಥ್ ಸಂಜೀವ್..ನೀವು ಹೇಳಿದ್ದು- ನಾವು ಕೇಳಿದ್ದು ಕಾರ್ಯಕ್ರಮದ ರೂವಾರಿ. 


ಬೆಂಗಳೂರಿನ ರಾಜರಾಜೇಶ್ವರಿ‌ನಗರದ ನಿವಾಸಿ ಆಗಿರೋ ಮಂಜುನಾಥ್ ಸಂಜೀವ್ ಬಿಎಸ್ ಸಿ ಪದವೀಧರರು.
ಅದು 2000ನೇ ಇಸವಿ. ಟಿವಿ ಸಂಸ್ಥೆಯವರು ತಮ್ಮ ಚಾನಲ್ ಗೆ ಹೊಸ ಪ್ರತಿಭೆಗಳನ್ನು ಕರೆತರಲು ಶೇಷಾದ್ರಿ ಪುರಂ ಕಾಲೇಜಿನಲ್ಲಿ ಕ್ಯಾಂಪಸ್ ಇಂಟರ್ ವ್ಯೂ‌ನಡೆಸಿದ್ರು. ಅದರಲ್ಲಿ ಮಂಜುನಾಥ್ ಸಂಜೀವ್ ಅವರು ಆಯ್ಕೆಯಾಗಿ ಈ ಟಿವಿ ಬಳಗ ಸೇರಿದ್ರು.
2000 ನೇ ಇಸವಿಯಿಂದ 2005 ರ ತನಕ ಈ ಟಿವಿಯಲ್ಲಿ ಸೇವೆಸಲ್ಲಿಸಿದ ಇವರು 2005ರಲ್ಲಿ ವಿಆರ್ ಎಲ್ ಅವರ ‘ಉಷಾ ಕಿರಣ’ ದಿನಪತ್ರಿಕೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ವೃತ್ತಿ ಜೀವನದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ರು. ಅಲ್ಲಿ ಒಂದು ವರ್ಷ ಕೆಲಸ ಮಾಡಿ 2006 ರಲ್ಲಿ ಟಿವಿ9 ಗೆ ಪಾದಾರ್ಪಣೆ ಮಾಡಿದ ಇವರು 2012ರವರೆಗೆ ಟಿವಿ9 ನಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ದುಡಿದ್ರು. ಜೊತೆಗೆ ಈ ಅವಧಿಯಲ್ಲಿ ಕನ್ನಡ ದೃಶ್ಯಮಾಧ್ಯಮ ಲೋಕದಲ್ಲಿ ಹೊಸದೆನಿಸಿದ ರಾಜಕೀಯ ವಿಡಂಭನಾ ಕಾರ್ಯಕ್ರಮವನ್ನು ನಿರ್ಮಿಸಿದ್ರು. ಅದುವೇ ‘ ನೀವು ಹೇಳಿದ್ದು, ನಾವು ಕೇಳಿದ್ದು’…! ಈ ಕಾರ್ಯಕ್ರಮದ ಸ್ಕ್ರಿಪ್ಟ್ , ವಾಯ್ಸ್ ಎಲ್ಲವೂ ಇದೇ ನಮ್ಮ ಮಂಜುನಾಥ್ ಸಂಜೀವ್ ಅವರದ್ದು.


ಇವತ್ತಿಗೂ ಈ ಕಾರ್ಯಕ್ರಮ ಬರ್ತಿದೆ. ಆದರೆ, ಮಂಜುನಾಥ್ ಟಿವಿ9 ಬಳಗದಲ್ಲಿಲ್ಲ…! ಇಷ್ಟೇ ಅಲ್ಲದೇ ಫಿಲ್ಮಿಫಂಡಾ, ಕೊಯಂಕೊಟ್ರ, ಧ್ರುವತಾರೆ, ಪ್ಲಾಶ್ ಬ್ಯಾಕ್ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಟಿವಿ9 ಲ್ಲಿ ಮಾಡಿದ್ದ ಇವರು 2012ರಲ್ಲಿ ಪಬ್ಲಿಕ್ ಟಿವಿ ಸೇರಿದ್ರು. ಅಲ್ಲಿ ಒಂದು ವರ್ಷ ಮನರಂಜನಾ ವಿಭಾಗದ ಮುಖ್ಯಸ್ಥರಾಗಿ ಸೇವೆಸಲ್ಲಿಸಿದ ಇವರು ಸಿನಿ ಅಡ್ಡ, ಬೆಳ್ಳಿತೆರೆ, ಹೀರೋಯಿನ್, ಕೋಳಿಫಾರಂ, ನಮ್ಮ ಸಿನಿಮಾ ನಮ್ಮ ಹಾಡು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕೇವಲ ಒಂದು ವರ್ಷದ ಅವಧಿಯಲ್ಲಿ ನಿರ್ಮಿಸಿದ್ರು. 


ಈ ನಡುವೆ 2010ರಲ್ಲಿ ತೆರೆಕಂಡ ಮೈಲಾರಿ ಚಿತ್ರಕ್ಕೆ ಬುಟ್ ಬುಡೆ ಬುಟ್ ಬುಡೆ ಹಾಡನ್ನು ನೀಡಿದವರು ಇವರೇ..! 2011ರಲ್ಲಿ ಸಂಜು ವೆಡ್ಸ್ ಗೀತಾ, 2013ರಲ್ಲಿ ಮೈನಾ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು.
2013 ರಲ್ಲಿ ಪಬ್ಲಿಕ್ ಟಿವಿಗೆ ರಾಜೀನಾಮೆ ನೀಡಿದ್ರು. ಅಲ್ಲಿಂದ 2017ರ ಇಲ್ಲಿಯವರೆಗೆ ರೋಸ್ ಸೇರಿದಂತೆ ಕೆಲವು ಚಿತ್ರಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ರು.
ಸಿನಿಮಾ ಜಗತ್ತಿನಲ್ಲಿನ ಕೆಲವರಿಂದ ಬೇಸತ್ತು ಸದ್ಯಕ್ಕೆ ಸಿನಿಮಾಗಳಿಂದ ದೂರಾಗಿದ್ದಾರೆ.

ಟಿವಿ9 ನಿಂದ ಹೊರ ಬಂದಿರುವ ರವಿಕುಮಾರ್ ಹಾಗೂ ಮಾರುತಿ ಅವರ ಹೊಸ ಚಾನಲ್ ಫಸ್ಟ್ ನ್ಯೂಸ್ ಸೇರಿರೋ ಇವರು ಹೊಸ ಹೊಸ ಪ್ರಯೋಗಳ ಮೂಲಕ ಕನ್ನಡಿಗರಿಗೆ ಇಷ್ಟವಾಗುವ ರೀತಿಯ ಕಾರ್ಯಕ್ರಮಗಳನ್ನು ನೀಡಲು ಉತ್ಸುಕರಾಗಿದ್ದಾರೆ.
ನೀವು ಇಷ್ಟುದಿನ ನೀವು ಹೇಳಿದ್ದು, ನಾವು ಕೇಳಿದ್ದನ್ನು ನೋಡಿರ್ತೀರಿ.‌ಅಲ್ಲಿ ನಿಮಗೆ ಧೀರೇಂದ್ರ ಗೋಪಲ್ ವಾಯ್ಸ್ ಮಾತ್ರ ಕೇಳಿರುತ್ತೆ. ನೀವು ಆ ಕಾರ್ಯಕ್ರಮದ ವೀಡಿಯೋ ನೋಡಿರಲ್ಲ.
ನಮ್ಮ ಮಂಜುನಾಥ್ ಸಂಜೀವ್ ಅವರು ನೀವು ಹೇಳಿದ್ದು, ನಾವು ಕೇಳಿದ್ದು ಶೈಲೀಲಿ ನಿಮ್ಮ ಮುಂದೆ ದಿ ನ್ಯೂ ಇಂಡಿಯನ್ ಟೈಮ್ಸ್ ಜೊತೆಯಲ್ಲಿ ಬಂದಿದ್ದಾರೆ…ನೋಡಿ…

-ಶಶಿಧರ್ ಎಸ್ ದೋಣಿಹಕ್ಲು

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...