ವಿಷಯಕ್ಕೆ ಬರುವ ಮೊದಲು ನನ್ನದೊಂದು ಪ್ರಶ್ನೆ, ವರ್ಣಬೇಧ ನೀತಿಯನ್ನು ಎಲ್ಲಾಕಡೆ ವಿರೋಧಿಸುತ್ತಾ ಬಂದಿದ್ದಾರೆ..! ಮಹಾತ್ಮ ಗಾಂಧೀಜಿ, ನೆಲ್ಸನ್ ಮಂಡೇಲಾರಂಥಾ ಮಹಾನ್ ವ್ಯಕ್ತಿಗಳು ವರ್ಣಬೇಧ ನೀತಿಯನ್ನು ಖಂಡಿಸಿ, ಅದರ ವಿರುದ್ಧ ಹೋರಾಟವನ್ನೇ ಮಾಡಿದ್ದಾರೆಂಬುದೂ ನಮಗೆ ಗೊತ್ತು..! ಆದರೆ ಇವತ್ತು `ಫೇರ್ ಅಂಡ್ ಲವ್ಲಿ’, ಫೇರ್ ಅಂಡ್ ಹ್ಯಾಂಡ್ಸಮ್’ ಪರಿಕಲ್ಪನೆಯನ್ನು ಇಟ್ಕೊಂಡು ದೊಡ್ಡ ದೊಡ್ಡ ಕಾಸ್ಮೇಟಿಕ್ ಕಂಪನಿಗಳು ವರ್ಣಬೇಧವನ್ನು ಮಾಡ್ತಾ ಇದ್ದಾವಲ್ಲಾ..? ರೇಸಿಸಮ್ ಅಥವಾ ವರ್ಣ ತಾರತಮ್ಯವನ್ನು ಉತ್ತೇಜಿಸುತ್ತಿವೆಯಲ್ಲಾ..?! ಈ ಬಗ್ಗೆ ಯಾರಾದ್ರು ಪ್ರಶ್ನೆ ಮಾಡಿದ್ದಾರ..? ಫೇರ್ ಅಂಡ್ ಲವ್ಲಿ ಅನ್ನೋ ಕಾನ್ಸೆಪ್ಟಿನಲ್ಲೇ ವರ್ಣಬೇಧವಿದೆ..! ಇದರ ಬಗ್ಗೆ ಯಾವ ಹೋರಾಟವನ್ನೂ ಮಾಡ್ತಾ ಇಲ್ಲ..! ಯಾಕೆ..?
ಅಲ್ಲಾ ಸ್ವಾಮಿ, ಬಿಳಿ ವರ್ಣವೇ ಸೌಂದರ್ಯ ಅಂತ ಯಾರ್ರೀ ಹೇಳಿದ್ದು..?! ಯಾಕೆ ಕಪ್ಪಗೆ ಇದ್ರೆ ಅವ್ರು ಮನುಷ್ಯರಲ್ವಾ..?! ಕಪ್ಪು ಬಣ್ಣದಲ್ಲಿದ್ದೋರು ಬಿಳಿ ಬಣ್ಣವನ್ನೇಕೆ ಹೊಂದಬೇಕು..!? ಯಾವತ್ತು ಬಣ್ಣ ಮೆತ್ಕೊಂಡು ಚಂದ ಕಾಣೋದು ಮುಖ್ಯವಲ್ಲ..! ರಿಯಲ್ ಬ್ಯೂಟಿ ಇರೋದು ಬಣ್ಣ ಮೆತ್ಕೊಳ್ಳದೇ ಇರುವಾಗ..! ಮುಖಕ್ಕೆ ಆ ಕ್ರೀಮ್.. ಈ ಕ್ರೀಮ್ ಅಂತ ಹಚ್ಕೊಂಡು ಸ್ವಲ್ಪ ಹೊತ್ತು ಬಿಳಿ ಕಾಣ್ಬುಹುದು.., ಅಥವಾ ನಿಮ್ಮ ಮುಖ ಪಳಪಳ ಮಿಂಚಬಹುದು..! ಆದರೆ ಅದು ಮೇಕಪ್ ಅಂತ ಗೊತ್ತಾಗೇ ಆಗುತ್ತೇ..! ಮುಖವಾಡ ಕಳಚಿ ಬಿದ್ದೇ ಬೀಳುತ್ತೆ..! ಇಲ್ಲ ಅಂತಾದ್ರೆ ಇದ್ದ ಮುಖವೂ ಹಾಳಾಗಿ ಹೋಗುತ್ತೆ..! ಬೇಕೇನ್ರೀ ಈ ಫೇರ್ ಅಂಡ್ ಲವ್ಲಿ, ಫೇರ್ ಅಂಡ್ ಹ್ಯಾಂಡ್ಸಮ್ ಅನ್ನೋ ತಪ್ಪು ಕಲ್ಪನೆ..?!
ಕೆಲವೊಂದಿಷ್ಟು ಕಂಪನಿಗಳು ಇದೇ ವರ್ಣದ ಕಾನ್ಸೆಪ್ಟ್ ಅನ್ನು ಇಟ್ಕೊಂಡು ನೀವು ತುಂಬಾ ಸುಂದರವಾಗಿ ಕಾಣಲು.., ಫೇರ್ನೆಸ್ ಪಡೆಯಲು ನಮ್ಮ ಬ್ರಾಂಡಿನ ಕ್ರೀಮ್ ಬಳಿಸಿ ಅಂತ ತಲೆ ತಿನ್ನೋ ಬಗ್ಗೆ ನಿಮಗೆ ಗೊತ್ತೇ ಇದೆ..! ಅಲ್ಲಾ ಸ್ವಾಮಿ, ಅವರ ಪ್ರಾಡೆಕ್ಟ್ ಸೇಲ್ ಮಾಡಿಕೊಳ್ಳಲಿ, ಅವರ ಉದ್ಯಮ ಬೆಳಯಲಿ..! ಆದರೆ ಅದಕ್ಕಿಂತ ಗ್ರಾಹಕರಿಗೆ ಒತ್ತಿ ಒತ್ತಿ ಬಿಳಿಯೇ ಸೌಂದರ್ಯ ಅಂತ ತಲೆಗೆ ತುಂಬುವುದೇಕೆ..?! ಅದು ನನ್ನ ಪ್ರಕಾರ ಒಂದು ರೀತಿಯಲ್ಲಿ ವರ್ಣಬೇಧವೇ..! ಕಪ್ಪು ವರ್ಣದವರನ್ನೂ ನೀವು ಚೆನ್ನಾಗಿಲ್ಲಾ..ನಮ್ಮ ಕ್ರೀಮ್ ಬಳಿಸಿ ಬಿಳಿ ಬಣ್ಣಕ್ಕೆ ಬನ್ನಿ ಅಂತ ಹೇಳೋದು ಸಮಾಜವನ್ನು ತಪ್ಪುದಾರಿಗೆ ಕೊಂಡೊಯ್ಯೋ ಕೆಟ್ಟರೀತಿಯ ಪ್ರಚಾರ..!
ಆಯ್ತು ಈ ಕ್ರೀಮ್ಗಳನ್ನು (ಯಾವುದ್ಯಾವುದು ಅಂತ ನಿಮಗೇ ಗೊತ್ತಲ್ವಾ..?) ಬಳಸಿದ ಮೇಲೆ ನಮ್ಮ ಬಣ್ಣ ನಿಜಕ್ಕೂ ಬದಲಾಗುತ್ತಾ..?! ಚಾನ್ಸೇ ಇಲ್ಲ..! ರಿಯಲ್ ಫೇಸ್ ರಿಯಲ್ ಫೇಸೇ.., ಮುಖವಾಡ ಮುಖವಾಡವೇ..! ಆದ್ರೂ ನಮ್ ಜನ ಇದನ್ನ ಹಚ್ಚೋದನ್ನು ಬಿಡಲ್ಲ..! ಹಚ್ಚಿದ ಮೇಲೆ ಕಂಪನಿಯವರು ಜಾಹಿರಾತುಗಳಲ್ಲಿ ಹೇಳಿರುವಂತೆ ಪಾಸಿಟೀವ್ ಇಂಪ್ಯಾಕ್ಟ್ ಆಗ್ದೇ ಇದ್ರೆ ಯಾರಾದ್ರೂ ಆ ಕಂಪನಿಯನ್ನು ಪ್ರಶ್ನೆ ಮಾಡ್ತಾರ..?! ಎಲ್ಲರೂ ಮಾಡ್ಬೇಕು.. ಸಾರ್ ಮಾಡ್ಲೇ ಬೇಕು..!
ಈಗ ಅಂಥಹದೇ ಕಾಸ್ಮೆಟಿಕ್ ಕಂಪನಿಯೊಂದರ ಮೇಲೆ ದೆಹಲಿಯ `ನಿಖಿಲ್ ಜೈನ್’ ಅನ್ನೋರು ಕೇಸ್ ಹಾಕಿ.. ತನಗಾದ ಅನ್ಯಾಯಕ್ಕೆ ಆ ಕಂಪನಿಯಿಂದ 10,000 ರೂಪಾಯಿ ಪರಿಹಾರವನ್ನೂ ಪಡೆದಿದ್ದಾರೆ..!
ನಿಖಿಲ್ `ಇಮಾಮಿ’ ಕಂಪನಿಯ `ಫೇರ್ ಅಂಡ್ ಹ್ಯಾಂಡ್ಸಮ್’ ಕ್ರೀಮ್ ಅನ್ನು ಬಳಸೋಕೆ ಶುರು ಮಾಡಿದ್ರು..! ಈ ಕ್ರೀಮ್ ಪುರುಷರಿಗೆ ಮೂರೇ ಮೂರು ವಾರದಲ್ಲಿ ಫೇರ್ನೆಸ್ ಕೊಡುತ್ತೆ ಅಂತ ಉತ್ಪನ್ನಕ್ಕೆ ಸಂಬಂಧಿಸಿದ ಜಾಹಿರಾತುಗಳಲ್ಲಿ ಪದೇ ಪದೇ ಸಾರಲಾಗ್ತಾ ಇತ್ತು..! ಎಲ್ಲರಂತೆ ಇದಕ್ಕೆ ಮಾರು ಹೋಗಿ ನನಗೂ ಫೇರ್ನೆಸ್ ಬೇಕು..! ನಾನೂ ಫೇರ್ ಅಂಡ್ ಹ್ಯಾಂಡ್ಸಮ್ ಆಗಿ ಕಾಣ್ಬೇಕು ಅಂತ ನಿಖಿಲ್ ಕೂಡ ಇದನ್ನು ಬಳಸೋಕೆ ನಿರ್ಧರಿಸ್ತಾರೆ..! ಫೇರ್ ಅಂಡ್ ಹ್ಯಾಂಡ್ಸಮ್ ಕ್ರೀಮ್ ನ ಬ್ರಾಂಡ್ ಅಂಬಾಸೆಡರ್ ನಟ ಶಾರುಖಾನ್ ಜಾಹಿರಾತಿನಲ್ಲಿ ನೀಡಿರುವ ಸಲಹಯನ್ನು ನೋಡಿ ನಿಖಿಲ್ 08-10-2012ರಲ್ಲಿ ಆ ಉತ್ಪನ್ನವನ್ನು ಕೊಂಡುಕೊಳ್ತಾರೆ..! ಮೂರುವಾರ ಬಳಸಿದ ಮೇಲೂ ಏನೇನೂ ಬದಲಾವಣೆ ಕಾಣಲ್ಲ..! ಇದೇ ಕಾರಣಕ್ಕಾಗಿ ಮಾನಸಿಕ ನೋವನ್ನೂ ಅನುಭವಿಸ್ತಾರೆ..! ಕಂಪನಿ ಇವರ ಭಾವನೆಯೊಂದಿಗೆ ಆಟವಾಡಿತ್ತು..! ಇದು ಎಷ್ಟೋ ಮುಗ್ಧ ಗ್ರಾಹಕರ ಸ್ಥಿತಿಯೂ ಅಲ್ಲವೇ..?! ಆದ್ದರಿಂದ ನಿಖಿಲ್ ತನ್ನ ಸೋದರ `ಪರಾಸ್ ಜೈನ್’ ಸಹಾಯದಿಂದ ಕಂಪನಿ ಮೇಲೆ ಕೇಸ್ ಹಾಕ್ತಾರೆ..! ಬೇರೆಯವರಿಗಾದರೂ ನ್ಯಾಯ ಸಿಗಲಿ, ಕಂಪನಿ ಹೀಗೆ ದಾರಿ ತಪ್ಪಿಸ್ತಾ ಇರೋದು ಸರಿ ಅಲ್ಲ ಅಂತ..! ಇದರ ವಿರುದ್ಧ ಕೇಸ್ ಹಾಕಿ, ಫೇರ್ ಅಂಡ್ ಹ್ಯಾಂಡ್ಸಮ್ ಜಾಹಿರಾತನ್ನು ತೆಗೆಯಬೇಕೆಂದು ಸುಮಾರು ಎರಡುವರೆ ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿ ಕೊನೆಗೂ ಯಶಸ್ವಿಯಾಗಿದ್ದಾರೆ…! ಇವರ ಈ ದಿಟ್ಟ ನಿಲುವಿನಿಂದಾಗಿ `ಇಮಾಮಿ’ ಕಂಪನಿ 15,00,000 ದಂಡವನ್ನು ಕಟ್ಟಬೇಕಾಗಿದೆ..! ಅದೇರೀತಿ ನಿಖಿಲ್ಗೆ 10,000 ರೂಪಾಯಿ ಪರಿಹಾರವನ್ನೂ ನೀಡಿದೆ..!
ಸ್ನೆಹಿತರೇ ನೀವೂ ಅಷ್ಟೇ.., ಜಾಹಿರಾತುಗಳಿಗೆ ಮನಸೋತು ಉತ್ಪನ್ನಗಳನ್ನು ಕೊಂಡುಕೊಳ್ಳ ಬೇಡಿ ಅಂತ ಹೇಳಲ್ಲ..! ಆ ಉತ್ಪನ್ನ ಬಳಕೆಯಿಂದ ನಿಮಗೆ ಅವರು ಹೇಳಿದಂತ ಪಾಸಿಟೀವ್ ಬದಲಾವಣೆ ಆಗಿಲ್ಲ ಅಂತಾದ್ರೆ ನೇರವಾಗಿ ಕಾನೂನು ಹೋರಾಟ ಮಾಡಿ…! ನಿಮ್ಮಿಂದ ಎಷ್ಟೋ ಗ್ರಾಹಕರಿಗೆ ಅನುಕೂಲ ಆಗುತ್ತೆ..!
ಸರಿ, ಮತ್ತೆ ನೆನಪಿಸ್ತಾ ಇದ್ದೀನಿ.. ಒಂದು ಡೌಟು, ಈ ಫೇರ್ ಅಂಡ್ ಲವ್ಲಿ, ಫೇರ್ನೆಸ್, ಫೇರ್ ಅಂಡ್ ಹ್ಯಾಂಡ್ಸಮ್, ವೈಟ್ ಈಸ್ ಬ್ಯೂಟಿ ಅನ್ನೋ ವಿಚಾರಗಳು ವರ್ಣಬೇಧವನ್ನು ಪ್ರೋತ್ಸಾಹಿಸ್ತಾ ಇವೆ ಅಲ್ವಾ..?! ನೀವೇನಂತೀರಿ..!
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ನಿಮಗೆ ಸ್ಟೇಜ್ ಫಿಯರ್ ಇದ್ಯಾ..? ಡೋಂಟ್ ವರಿ ಭಯದ ಮುಂದೆ ಜಯವಿದೆ..! ಈ ಸ್ಟೋರಿ ಓದಿ..!
ಬರಲಿದೆ `ಬಲೂನ್ ಇಂಟರ್ನೆಟ್..’! ಹೊಸ ಯೋಜನೆಯಲ್ಲಿ ಭಾರತ ಸರ್ಕಾರದ ಜೊತೆ ಕೈ ಜೋಡಿಸಿದ ಗೂಗಲ್..!
ಚೋಟಾ ಟೀಚರ್ ಬಂದ್ರು ದಾರಿ ಬಿಡಿ..! 11ರ ಪೋರ 125 ಗ್ರಾಮಕ್ಕೆ ಅಕ್ಷರದಾನ ಮಾಡುತ್ತಿದ್ದಾನೆ..!
`ವಾಸ್ತುಪ್ರಕಾರ’ ಮನೆಮುಂದೆ ಮರಗಳು ಇರಬಾರದಂತೆ..! ವಾಸ್ತುಪ್ರಕಾರ ಮರಗಳನ್ನು ಸಾಯಿಸುತ್ತಿರೊ ಇವರೆಂಥಾ ಅವಿವೇಕಿಗಳು..!
ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!
ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು
17ರ ಪೋರ ಈಗ `ನಾಸ’ ಉದ್ಯೋಗಿ..! ಕ್ಯಾವೆಲಿನ್ ಗೆ ಇನ್ನೂ 17ವರ್ಷ ಈಗಲೇ ವಿಮಾನ ಹಾರಿಸಬಲ್ಲ..!