ಮಾಧ್ಯಮ ಲೋಕದ ಮಿನುಗುತಾರೆ ಸೌಮ್ಯ ಮಳಲಿ…!

Date:

ಅತ್ಯಂತ ಕಡಿಮೆ ಅಧಿಯಲ್ಲಿ ಜನಪ್ರಿಯತೆಗಳಿಸಿಕೊಂಡ ನಿರೂಪಕಿ. ಹಾಗಂತ ಅದೃಷ್ಟ ದೇವತೆಯ ಆಶೀರ್ವಾದದಿಂದ ರಾತ್ರಿ-ಬೆಳಗಾಗುವುದರಲ್ಲಿ ಯಶಸ್ವಿ ನಿರೂಪಕಿ ಎಂಬ ಪಟ್ಟ ಅಲಂಕರಿಸಿದವರಲ್ಲ…! ಇವರ ಇಂದಿನ ಯಶಸ್ಸಿನ ಹಿಂದೆ ನಿರಂತರ ಪರಿಶ್ರಮವಿದೆ, ಹಠವಿದೆ, ಹೊಸತನ, ಬದಲಾವಣೆಗೆ ತುಡಿಯುವ ಮನಸ್ಸಿದೆ. ಇವರು ಕನ್ನಡ ಮಾಧ್ಯಮ ಲೋಕದ ಮಿನುಗುತಾರೆ…! ಹೆಸರು, ಸೌಮ್ಯ ಮಳಲಿ.

ಹಾಸನ ಜಿಲ್ಲೆಯ ಸಕಲೇಶಪುರದವರಾದ ಸೌಮ್ಯ ಮಳಲಿ ಅವರ ತಂದೆ ರೇವಪ್ಪ, ತಾಯಿ ಯಶೋಧ. ಅಕ್ಕ ರಮ್ಯಾ, ತಮ್ಮ ಪೃಥ್ವಿ, ಪತಿ ಆದರ್ಶ್. ಸಕಲೇಶಪುರದ ಸೆಂಟ್ ಜೋಸೆಫ್ ಗರ್ಲ್ಸ್  ಸ್ಕೂಲ್‍ನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪಡೆದ ಸೌಮ್ಯ ಪಿಯುಸಿ ಹಾಗೂ ಬಿಎ ಪದವಿ ಪಡೆದಿದ್ದು ಹಾಸನದ ಎವಿಕೆ ಕಾಲೇಜಿನಲ್ಲಿ. ಟ್ರಾವೆಲಿಂಗ್, ಶಾಪಿಂಗ್ ಇವರ ಹವ್ಯಾಸ.


ನಿರೂಪಕಿಯಾಗಬೇಕೆಂಬುದು ಸೌಮ್ಯ ಅವರ ಕನಸಾಗಿತ್ತು. ಕಂಡ ಕನಸು ನನಸಾಗಿಸಿಕೊಳ್ಳಲು ಜರ್ನಲಿಸಂ ಪದವಿ, ಸ್ನಾತಕೋತ್ತರ ಪದವಿ ಪಡೆಯಲೇ ಬೇಕೆಂದು ಅವುಗಳ ಹಿಂದೆ ಹೋಗಿಲ್ಲ…! ಇವರು ನಿರೂಪಕಿಯಾಗಿದ್ದು ಮನೆಯಲ್ಲಿ ಕುಳಿತೇ…! ಪಿಯುಸಿ, ಪದವಿ (ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ) ವ್ಯಾಸಂಗ ಮಾಡುತ್ತಲೇ ಮನೆಯಲ್ಲಿ ಬಿಡುವಿನ ವೇಳೆಯಲ್ಲಿ ನಿರೂಪಣೆ ಪ್ರಾಕ್ಟಿಸ್ ಮಾಡಿದ್ರು…! ಪ್ರತಿದಿನ ನ್ಯೂಸ್ ನೋಡುತ್ತಾ, ತಾನೂ ಕೂಡ ನ್ಯೂಸ್ ಓದುವುದನ್ನು, ನಿರೂಪಣೆ ಮಾಡೋದನ್ನು ಅಭ್ಯಾಸ ಮಾಡಿದ್ರು.


ಪದವಿ ವ್ಯಾಸಂಗ ಮಾಡುವಾಗ ಹಾಸನದ ಅಮೋಘ ಚಾನಲ್ ನಲ್ಲಿ ನ್ಯೂಸ್ ರೀಡರ್ ಆಗಿ ಕೆಲಸ ಮಾಡುವ ಸದಾವಕಾಶ ಸಿಕ್ತು. ತರಗತಿ ಮುಗಿಸಿಕೊಂಡು ಸಹಪಾಠಿಗಳೆಲ್ಲಾ ಮನೆ, ಸಿನಿಮಾ ಅಂತ ಹೊರಟರೆ ಸೌಮ್ಯ ಹೋಗುತ್ತಿದ್ದುದು ಅಮೋಘ ಕಚೇರಿಗೆ…!
ಮನೆಯಲ್ಲಿ ಟಿವಿ ನೋಡುತ್ತಾ ವಾರ್ತೆ ವಾಚನ ಮಾಡುವುದನ್ನು ಕಲಿತಿದ್ದ ಸೌಮ್ಯ ಅಮೋಘ ಪರದೆಯಲ್ಲಿ ಮಿಂಚಲು ಹೆಚ್ಚು ಸಮಯ ಬೇಕಾಗಲಿಲ್ಲ. ಅಷ್ಟೇಅಲ್ಲದೆ ಪದವಿ ಮುಗಿಯುವುದರಲ್ಲಿ ಪರಿಪೂರ್ಣ ನಿರೂಪಕಿಯಾಗಿ ಹೊರಹೊಮ್ಮಿದ್ದರು. ಯಾವ ಸುದ್ದಿವಾಹಿನಿಯಲ್ಲಿ ಬೇಕಾದ್ರು ನ್ಯೂಸ್ ರೀಡರ್, ಆ್ಯಂಕರ್ ಆಗಬಲ್ಲೆ ಎಂಬ ಆತ್ಮವಿಶ್ವಾಸ ಸೌಮ್ಯ ಅವರಲ್ಲಿ ಭದ್ರವಾಗಿ ನೆಲೆಯೂರಿತ್ತು.


ಪದವಿ ಶಿಕ್ಷಣದ ಬಳಿಕ ಸುವರ್ಣ ವಾಹಿನಿ ಸೌಮ್ಯ ಅವರನ್ನು ಬರಮಾಡಿಕೊಂಡಿತು. ಹಮೀದ್ ಪಾಳ್ಯ ಅವರು ಸೌಮ್ಯ ಅವರನ್ನು ಸುವರ್ಣ ಬಳಗಕ್ಕೆ ಕರೆತಂದವರು. ಅಲ್ಲಿಂದ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಜೀವನದ ಇನ್ನಿಂಗ್ಸ್ ಶುರುಮಾಡಿದ್ರು ಸೌಮ್ಯ.
2010ರಿಂದ 3.5 ವರ್ಷಗಳ ಕಾಲ ಸುವರ್ಣದಲ್ಲಿ ಸೇವೆಸಲ್ಲಿಸಿದ ಸೌಮ್ಯ ಅವರು 6 ಜನ ನಿರೂಪಕಿಯರ ಜೊತೆಗೂಡಿ ನಡೆಸಿಕೊಡುತ್ತಿದ್ದ ಸ್ಟಾರ್ಸ್ ವಿತ್ ಸುವರ್ಣ ಗರ್ಲ್ಸ್  ಹೆಚ್ಚು ಜನಪ್ರಿಯತೆಯನ್ನು ಪಡೆದಿತ್ತು.


2013ರಲ್ಲಿ ಸುವರ್ಣ ಕುಟುಂಬ ಬಿಟ್ಟು ಜನಶ್ರೀ ವಾಹಿನಿ ಕಡೆಗೆ ಪಯಣ ಬೆಳೆಸಿದ ಸೌಮ್ಯ ಅವರು ಅಲ್ಲಿ 6 ತಿಂಗಳು ಕೆಲಸ ಮಾಡಿದ್ರು. ಬಳಿಕ 2014ರಲ್ಲಿ ಈ ಟಿವಿಗೆ ಸೇರಿದ್ರು. 6 ತಿಂಗಳುಗಳ ಕಾಲ ಹೈದರಾಬಾದ್‍ನಲ್ಲಿ ಕೆಲಸ ಮಾಡಿದ್ದರು. ಅಂದಿನ ಈ ಟಿವಿ ನ್ಯೂಸ್ ಇಂದು ನ್ಯೂಸ್ 18 ಆಗಿದ್ದು ಸುಮಾರು 4 ವರ್ಷದಿಂದ ‘ಈ’ ಫ್ಯಾಮಿಲಿಯಲ್ಲಿದ್ದಾರೆ.


ಸುವರ್ಣ ನ್ಯೂಸ್‍ನಲ್ಲಿನ ಅನುಭವವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಅಲ್ಲಿ ನನಗೆ ತುಂಬಾ ಒಳ್ಳೆಯ ಅವಕಾಶಗಳು ಸಿಕ್ಕವು ಎಂದು ಹೇಳುವ ಸೌಮ್ಯ ಅವರು, ಇವತ್ತು ನಿರೂಪಣೆ, ನ್ಯೂಸ್ ರೀಡ್, ಪ್ಯಾನಲ್ ಡಿಸ್ಕಷನ್ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಇವರ ಇಷ್ಟುದಿನ ಪರಿಶ್ರಮದ ಫಲವೇ ಸದ್ಯ ಸಿಕ್ಕಿರುವ ಕೀರ್ತಿ, ಯಶಸ್ಸು.


ಕಾವೇರಿ ವಿಚಾರದಲ್ಲಿ ಗಲಾಟೆ ವೇಳೆಯಲ್ಲಿ ಸತತ 6 ಗಂಟೆಗಳ ಕಾಲ ಸುದ್ದಿ, ಚರ್ಚೆಯಲ್ಲಿ ಪಾಲ್ಗೊಂಡಿದ್ದು ಸೌಮ್ಯ ಅವರಿಗೆ ಸ್ಮರಣೀಯವಂತೆ.  “ಈಗ ಮಾಧ್ಯಮ ಕ್ಷೇತ್ರಕ್ಕೆ ಬರಲು ತುದಿಗಾಲಲ್ಲಿ ನಿಂತಿರೋರು, ಇದು ತುಂಬಾ ಸುಲಭ ಅಂತ ಅಂದುಕೊಂಡಿರ್ತಾರೆ. ಟಿವಿಯಲ್ಲಿ ಕೆಲಸ ಮಾಡಬೇಕು, ಫೇಮಸ್ ಆಗಬೇಕೆಂಬುದಷ್ಟೇ ಅವರ ಯೋಚನೆ ಆಗಿರುತ್ತೆ. ಬಹುತೇಕರಲ್ಲಿ ಕಲಿಯುವ ಆಸಕ್ತಿ ಇರಲ್ಲ. ಕಲಿಯ ಬೇಕೆಂಬ ಇಚ್ಚೆ, ಕಲಿಕೆಯ ಹಸಿವು ಇರಬೇಕು. ಜ್ಞಾನ ಮುಖ್ಯ’’ ಎಂಬುದು ಸೌಮ್ಯ ಮಳಲಿ ಅವರ ಸಲಹೆ.


ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಇವರನ್ನು ಗೌರವಿಸಿದೆ. ಇದಲ್ಲದೆ ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ಈ ಮೊದಲೇ ಹೇಳಿರುವಂತೆ ಸೌಮ್ಯ ಅವರು ಕನ್ನಡ ಮಾಧ್ಯಮ ಲೋಕದ ಮಿನುಗುತಾರೆ.
ಶಾಲಾ-ಕಾಲೇಜು ದಿನಗಳಲ್ಲಿ ಕಂಡ ಕನಸುಗಳನ್ನು ನನಸು ಮಾಡಿಕೊಂಡ ಬಗ್ಗೆ ಸೌಮ್ಯ ಅವರಿಗೆ ತೃಪ್ತಿ ಇದೆ. ಆದರೆ, ಇನ್ನೂ ಸಾಧಿಸಬೇಕು ಎಂಬ ಛಲವೂ ಇದೆ. ನಿರಂತರ ಕಲಿಯುವಿಕೆಯ ಗುಣವೇ ಇವರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

10 ನವೆಂಬರ್ 2017 : ಈಶ್ವರ್ ದೈತೋಟ

11 ನವೆಂಬರ್ 2017 : ಭಾವನ

12  ನವೆಂಬರ್ 2017 : ಜಯಶ್ರೀ ಶೇಖರ್

13 ನವೆಂಬರ್ 2017 : ಶೇಷಕೃಷ್ಣ

14 ನವೆಂಬರ್ 2017 : ಶ್ರೀಧರ್ ಶರ್ಮಾ

15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

16 ನವೆಂಬರ್ 2017 : ಅರವಿಂದ ಸೇತುರಾವ್

17 ನವೆಂಬರ್ 2017 : ಲಿಖಿತಶ್ರೀ

18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

19 ನವೆಂಬರ್ 2017 : ಅಪರ್ಣಾ

20 ನವೆಂಬರ್ 2017 :  ಅಮರ್ ಪ್ರಸಾದ್

21 ನವೆಂಬರ್ 2017 :   ಸೌಮ್ಯ ಮಳಲಿ

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...