ರಾಜ್ಯದ ಮಾಜಿ ಶಾಸಕರುಗಳಿಗೆ ನಿವೃತ್ತಿ ವೇತನ ಭಾಗ್ಯ ಹೆಚ್ಚಿಸ ಬೇಕಂತೆ…! ಕನಿಷ್ಠ 5-10 ಸಾವಿರ ರೂ ವೇತನ ಹೆಚ್ಚಿಸಿ ಅಂತ ಮಾಜಿ ಶಾಸಕರು ಒತ್ತಾಯಿಸ್ತಿದ್ದಾರೆ. ಈಗ ಬರ್ತಿರೋ 40ಸಾವಿರ ವೇತನ ಸಾಕಾಗಲ್ಲ, ಇನ್ನೊಂದು ಐದೋ ಹತ್ತು ಸಾವಿರ ರೂ ಜಾಸ್ತಿ ಕೊಡಿ ಅಂತ ಆಗ್ರಹಿಸ್ತಿದ್ದಾರೆ.
ಮಾಜಿಗಳಾದ ಮೇಲೂ ನಮ್ಮತ್ರ ಬರೋ ಜನ ಕಡಿಮೆ ಆಗಲ್ಲ, ಮದುವೆ ಮುಂಜಿ ಅಂತಹ ಕಾರ್ಯಕ್ರಮಗಳು ಕಡಿಮೆ ಆಗಲ್ಲ ಅನ್ನೋದು ಮಾಜಿಗಳ ಮಾತು. ಇವರ ಬೇಡಿಕೆ ಈಡೇರಿದ್ರೆ 650 ಮಾಜಿ ಶಾಸಕರಿಗೆ ನೀವೃತ್ತಿ ವೇತನ ಹೆಚ್ಚಳ ಭಾಗ್ಯದ ಅನುಕೂಲ ಸಿಕ್ಕಂತಾಗುತ್ತದೆ.