ಕಾಲೇಜ್‍ಗೆ ಹೋಗಿ ನಾಲ್ಕ್ ಅಕ್ಷರ ಕಲಿರೋ ಅಂತ ಹೇಳಿದ್ರೆ, ಓದಿಗಿಂತ ಚಂದದ ಹುಡ್ಗಿಯೇ ಸರ್ವಸ್ವ ಅಂತ ಅನ್ಕೊಳ್ತಾರೆ…! ಒಬ್ಳು ಹುಡ್ಗಿಗೆ ಒಬ್ಬ ಲೈನ್ ಹಾಕಿದ್ರೆ ನೋ ಪ್ರಾಬ್ಲಂ…! ಇಬ್ಬಿಬ್ರು ಕಾಳ ಹಾಕೋಕೆ ಹೋದ್ರೆ ಹೀಗೆ ಆಗೋದು…! ತಮ್ ಮರ್ಯಾದಿನಾ ತಾವೇ ಬೀದಿಲಿ ಹರಾಜ್ ಹಾಕ್ಕೊಳ್ಳೋ ಪರಿಸ್ಥಿತಿ ಬಂದ್ರೂ ಬರಬಹುದು…!
ನಮ್ ಹಾಸನದಲ್ಲೂ ಇಂತಹದ್ದೇ ಒಂದು ಬೀದಿ ರಂಪಾಟ ನಡೆದಿದೆ…! ಹುಡ್ಗಿ ವಿಚಾರಕ್ಕೆ ಸ್ಟೂಡೆಂಟ್ಸ್ ಹೊಡ್ದಾಡ್ಕೊಂಡಿದ್ದಾರೆ…! ಅರಕಲಗೂಡು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಯುವಕರು ಹುಡ್ಗಿ ವಿಚಾರದಲ್ಲಿ ತಮ್ಮನ್ನು ತಾವೇ ನಗೆಪಾಟಿಲಿಗೆ ಗುರಿಪಡಿಸ್ಕೊಂಡವ್ರೆ. ಕಾಲೇಜ್ ಮುಗ್ದ ಬಳಿಕ ತೆಪ್ಪಗೆ ಅವ್ರವರ ಪಾಡ್ಗೆ ಅವ್ರವ್ರು ಹೋಗಿದ್ರೆ ಏನ್ ಆಗ್ತಿತ್ತೋ..? ಸುಮ್ಮನೆ ಹುಡ್ಗಿ ವಿಷಯ ಎತ್ಕೊಂಡು ಜಗಳ ಮಾಡ್ಕೊಂಡವ್ರೆ…! ಆ ಜಗಳ ವಿಕೋಪಕ್ಕೂ ತಿರುಗಿ, ರಸ್ತೆ ಬದೀಲಿ ಬಿದ್ದಿದ್ದ ಬಿಯರ್ ಬಾಟಲ್‍ಗಳನ್ನು ಎತ್ಕೊಂಡು ಪರಸ್ಪರ ಹಲ್ಲೆಗೂ ಮುಂದಾಗಿದ್ರು…!
ಇದನ್ನು ಕಂಡ ಸಾರ್ವಜನಿಕರು, ಹುಚ್ ಹುಡ್ಗೂರು ಏನಾದ್ರು ಹೆಚ್ಚುಕಡ್ಮಿ ಮಾಡ್ಕೊಂಡ್ರೆ ಕಷ್ಟ ಅಂತ ಜಗಳದ ನಡುವೆ ಎಂಟ್ರಿ ಕೊಟ್ಟು, ಬುದ್ಧಿಹೇಳಿ, ಸಂಭವಿಸಬಹುದಾಗಿದ್ದ ದೊಡ್ಡ ಹೊಡೆದಾಟವನ್ನು ನಿಲ್ಲಿಸಿದ್ದಾರೆ. ಆಮೇಲೆ ಪೊಲೀಸ್ರು ಕೂಡ ಬಂದ್ ಎಲ್ಲವನ್ನ ಸರಿಪಡಿಸಿದ್ದಾರೆ…!