ನ್ಯೂಸ್ ಬಂದ್ರೆ ಟಿವಿ ಆಫ್ ಮಾಡ್ತಿದ್ದ ಶಿಲ್ಪ ಇವತ್ತು ನ್ಯೂಸ್ ರೀಡರ್…!

Date:

ಮನೆಯಲ್ಲಿ ಟಿವಿ ನೋಡುವಾಗ ಅಕ್ಕಂಗು, ಇವ್ರಿಗೂ ನಿತ್ಯ ಜಗಳ..! ಅಕ್ಕ ನ್ಯೂಸ್ ನೋಡ್ತಾರಂತ ಕೇಬಲ್ ಕನೆಕ್ಷನ್ ತಪ್ಪಿಸಿ, ತಾನೇನೂ ಮಾಡಿಲ್ಲ ಅನ್ನೋ ಹಾಗೆ ಇರ್ತಿದ್ರು…! ಸಿನಿಮಾ ನೋಡುವಾಗ ನ್ಯೂಸ್ ಬಂತು ಅಂದ್ರೆ ಟಿವಿ ಆಫ್ ಮಾಡ್ತಿದ್ರು…! ಇವತ್ತು ನ್ಯೂಸ್ ರೀಡರ್ ಆಗಿದ್ದಾರೆ…!

ಇವರು ಶಿಲ್ಪ ಕಿರಣ್. ಮೈಸೂರು ಜಿಲ್ಲೆಯ ಮೈಸೂರು ತಾಲೂಕಿನ ಆಯರಹಳ್ಳಿ ಇವರೂರು. ತಂದೆ ಪುಟ್ಟಣ್ಣ, ತಾಯಿ ವನಜಾಕ್ಷಿ, ಪತಿ ಸೀನಿಯರ್ ವೀಡಿಯೋ ಜರ್ನಲಿಸ್ಟ್ ಕಿರಣ್.  ರೈತ ಕುಟಂಬದಲ್ಲಿ ಹುಟ್ಟಿ-ಬೆಳೆದ ಶಿಲ್ಪ, ತಾನು ಮೀಡಿಯಾದಲ್ಲಿ ಕೆಲಸ ಮಾಡ್ತೀನಿ ಅಂತ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲವಂತೆ. ಮನೆಯಲ್ಲಿ ಟಿವಿ ನೋಡ್ತಾ ಇರುವಾಗ ಈ ನಿರೂಪಕರು ಅಂದ್ರೆ ಯಾವುದೋ ಲೋಕದಲ್ಲಿ ಇರೋರು. ಇವರನ್ನು ಭೇಟಿ ಆಗೋದು ನಮ್ಮಿಂದ ಸಾಧ್ಯವಿಲ್ಲ ಅಂತ ಅಂದುಕೊಳ್ತಿದ್ರಂತೆ…! ಆ್ಯಂಕರ್ಸ್ ಅಂದ್ರೆ ದೊಡ್ಡವರು, ಸ್ಟಾರ್‍ಗಳು ಅನ್ನೋ ಫೀಲ್ ಇತ್ತಂತೆ.


ಶಿಲ್ಪ ಮಾಧ್ಯಮ ಕ್ಷೇತ್ರಕ್ಕೆ ಬರೋಕೆ ಕಾರಣ ಒಡಹುಟ್ಟಿದ ಅಕ್ಕ ಕುಸುಮ. ನೀವು ಕುಸುಮ ಅವರ ಬರಹಗಳನ್ನು ಓದ್ತಿರ್ತೀರಿ. ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ‘ಕುಸುಮ ಬಾಲೆ’ ಅಂತ ಅಂಕಣ ಬರುತ್ತಲ್ಲಾ..? ಈ ಅಂಕಣಕಾರರು ಇದೇ ಕುಸುಮ…! ಇವರು ಮುಕ್ತ, ಮಿಂಚು ಧಾರವಾಹಿ ಸೇರಿದಂತೆ ಹತ್ತಾರು ಧಾರವಾಹಿಗಳಲ್ಲಿ ಕೆಲಸ ಮಾಡಿದ್ದಾರೆ, ಸ್ಕ್ರಿಪ್ಟ್ ಬರೆದಿದ್ದಾರೆ. ಈ ಕುಸುಮ ಅವರಿಂದಲೇ ಶಿಲ್ಪ ಮಾಧ್ಯಮಕ್ಕೆ ಬಂದಿದ್ದು, ಅಕ್ಕನಿಗೆ ನ್ಯೂಸ್ ನೋಡಲು ಬಿಡ್ದೇ ಇದ್ದವರು ಜನಪ್ರಿಯ ನ್ಯೂಸ್ ರೀಡರ್ ಆಗಿದ್ದು…!


ಹುಟ್ಟೂರು ಆಯರಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಶಿಲ್ಪ, ಪ್ರೌಢಶಿಕ್ಷಣವನ್ನು ಚಾಮರಾಜ ನಗರದಲ್ಲಿನ ಅಜ್ಜಿ ಊರು ಸಂತೆಮರÀಹಳ್ಳಿಯಲ್ಲಿ ಮುಗಿಸಿದ್ರು. ನಂತರ ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ರು. ಪಿಯುಸಿ ಓದುವಾಗ ಮೈಸೂರಿನ ‘ಸಿ-ಮೈಸೂರು’ ಚಾನಲ್‍ನಲ್ಲಿ ನಿರೂಪಕರಾಗಿ ಮಾಧ್ಯಮಕ್ಕೆ ಎಂಟ್ರಿಕೊಟ್ರು. ಬೆಳಗ್ಗೆ ಕಾಲೇಜು, ಸಂಜೆ ‘ ಸಿ-ಮೈಸೂರು’.


ಪಿಯುಸಿ ಮುಗಿಸಿ ಜೆಎಸ್‍ಎಸ್‍ನಲ್ಲಿ ಪ್ರಥಮ ವರ್ಷದ ಬಿಎ ಪದವಿಗೆ ಸೇರಿದ್ರು. ಈ ವೇಳೆಗೆ ಅಕ್ಕ ಕುಸುಮ ಅವರ ಮದ್ವೆ ಆಗಿತ್ತು. ಅವ್ರು ಬೆಂಗಳೂರಿಗೆ ಬಂದು ನೆಲಸಿದ್ರು. ಟಿ.ಎನ್ ಸೀತಾರಾಮ್ ಅವರ ಜೊತೆ ಕೆಲಸ ಮಾಡ್ತಿದ್ದರು. ಒಮ್ಮೆ ಅಕ್ಕನ ಮನೆಗೆ ಬಂದಾಗ ಕಸ್ತೂರಿ ವಾಹಿನಿಯಲ್ಲಿ ‘ನಿರೂಪಕರು ಬೇಕಾಗಿದ್ದಾರೆ’ ಅಂತ ಆ್ಯಡ್ ಬರ್ತಿತ್ತು. ಅದನ್ನು ನೋಡಿದ ಕುಸುಮ ಅವರು, ‘ನೀನೇಕೆ ಟ್ರೈ ಮಾಡಬಾರ್ದು’ ? ಅಂತ ಶಿಲ್ಪ ಅವರನ್ನು ಕೇಳಿದ್ರು. ಅದಾಗಲೇ ಲೋಕಲ್ ಚಾನಲ್‍ನಲ್ಲಿ ಎರಡು ವರ್ಷದ ಅನುಭವ ಪಡೆದಿದ್ದ ಶಿಲ್ಪ ಅಕ್ಕನ ಮಾತಿಗೆ ಇಲ್ಲ ಅನ್ನಲಿಲ್ಲ.


ಸುಮಾರು 800 ಮಂದಿ ಸಂದರ್ಶನಕ್ಕೆ ಬಂದಿದ್ರು. ಅದರಲ್ಲಿ ಆಯ್ಕೆಯಾಗಿದ್ದು ಶಿಲ್ಪ ಅವರನ್ನು ಒಳಗೊಂಡಂತೆ ಇಬ್ಬರು ಮಾತ್ರ. ನ್ಯೂಸ್ ರೀಡಿಂಗ್‍ಗೆ ಅಂತ ಹೋಗಿದ್ದ ಶಿಲ್ಪ ಅವರಿಗೆ ಪ್ರೋಗ್ರಾಂ ಆ್ಯಂಕರಿಂಗ್ ಮಾಡ್ಬೇಕು ಅಂದಾಗ ನಿರಾಸೆಯಾಯ್ತು. ಇಲ್ಲ, ನ್ಯೂಸ್ ರೀಡರ್ ಆದ್ರೆ ಮಾಡ್ತೀನಿ, ಇಲ್ಲ ಅಂದ್ರೆ ಮಾಡಲ್ಲ ಅಂತ ಹೇಳಿ ವಾಪಸ್ಸು ಬಂದ್ರು. 10-15 ದಿನಕ್ಕೆ ಕಸ್ತೂರಿಯಿಂದ ಕಾಲ್ ಬಂತು, ಅಲ್ಲಿದ್ದ ಪ್ರಮುಖ ನ್ಯೂಸ್ ರೀಡರ್ ಒಬ್ಬರು ಬಿಟ್ಟೋಗಿದ್ರು. ಆ ಜಾಗಕ್ಕೆ ಶಿಲ್ಪ ಅವರನ್ನು ಬರಮಾಡಿಕೊಂಡಿತು ಕಸ್ತೂರಿ. ಇಲ್ಲಿ ತನಗೆ ‘ಮನೋಜ್ ಸರ್, ಆನಂದ್ ಸರ್, ದಿವಾಕರ್ ಸರ್ ತುಂಬಾ ಸಪೋರ್ಟ್ ಮಾಡಿದ್ರು’ ಅಂತಾರೆ ಶಿಲ್ಪ. ಕೆಲಸಕ್ಕಾಗಿ ಬೆಂಗಳೂರಿಗೆ ಬರಬೇಕಾಗಿದ್ದರಿಂದ ಪದವಿಯನ್ನು ಡಿಸ್ ಕಂಟಿನ್ಯೂ ಮಾಡಿದ್ದ ಇವರು ನಂತರ ಮೈಸೂರು ಮುಕ್ತ ವಿವಿಯಿಂದ ಬಿಎ ಪದವಿಯನ್ನು ಪಡೆದ್ರು.


2009ರಿಂದ 2011ರವರೆಗೆ ಕಸ್ತೂರಿ ಬಳಗದಲ್ಲಿದ್ದ ಶಿಲ್ಪ ಅವರಿಗೆ ಟಿವಿ9ನಿಂದ ಆಫರ್ ಬಂತು. ಅದು ಅವರ ಜೀವನದಲ್ಲಿ ಮರೆಯಲಾಗದ ಕ್ಷಣವಂತೆ. ತನನ್ನು ಗುರುತಿಸಿ ಟಿವಿ9ನವರು ಕರೆ ಮಾಡಿದಾಗ ನಂಗೆ ನಂಬೋಕೆ ಆಗಲಿಲ್ಲ..! ಯಾರೋ ಆಟ ಆಡಿಸ್ತಿದ್ದಾರೆ ಅಂತ ಅನ್ಕೊಂಡಿದ್ದರಂತೆ. 2011ರ ಕೊನೆಯಲ್ಲಿ ಟಿವಿ9 ಕುಟುಂಬಕ್ಕೆ ಸೇರಿದ ಶಿಲ್ಪ 2 ವರ್ಷ ಅಲ್ಲಿದ್ದರು. ಬಳಿಕ 2013ರಲ್ಲಿ ಹಮೀದ್ ಪಾಳ್ಯ ಅವರಿಂದ ರಾಜ್ ನ್ಯೂಸ್‍ನಲ್ಲಿ ಕೆಲಸ ಮಾಡೋ ಅವಕಾಶ ಸಿಕ್ತು. ಇಲ್ಲಿ ಇವರು ನಡೆಸಿಕೊಡ್ತಿದ್ದ ‘ ನಾನೇ ಬೇರೆ ನನ್ನ ರೋಲೇ ಬೇರೆ’ ಸೂಪರ್ ಹಿಟ್ ಆಗಿತ್ತು.


ಅಲ್ಲಿ 1 ವರ್ಷ ಕೆಲಸ ಮಾಡಿ ಸಮಯ ಚಾನಲ್ ಗೆ ಹೋದ್ರು. ಇಲ್ಲಿ ಒಳ್ಳೆಯ ಅವಕಾಶಗಳು ಸಿಕ್ಕವು. ಜಯಪ್ರಕಾಶ್ ಶೆಟ್ಟಿ ಸರ್ ಹಾಗೂ ರಂಗನಾಥ್ ಭಾರಧ್ವಜ್ ಸರ್ ಅವರ ಪ್ರೋತ್ಸಾಹ, ಮಾರ್ಗದರ್ಶನ ಸಿಕ್ತು. ಅವರು ಇಲ್ಲದೇ ಇರುವಾಗ ಪ್ರಮುಖ ಡಿಸ್ಕಷನ್‍ಗಳನ್ನು ನಡೆಸಿಕೊಡೋ ಸದಾವಕಾಶ ಶಿಲ್ಪ ಅವರದ್ದಾಯಿತು. ಸಿಕ್ಕ ಅವಕಾಶಗಳನ್ನೆಲ್ಲಾ ಚೆನ್ನಾಗಿ ಬಳಸಿಕೊಂಡ್ರು. ಸಮಯದಲ್ಲಿ ‘ಫೋನ್ ಮಾಡಿ ವೋಟ್ ಮಾಡಿ’ ಕಾರ್ಯಕ್ರಮವನ್ನು ಒಂದು ದಿನ ನಿರೂಪಕಿಯರೇ ನಡೆಸಿಕೊಡಬೇಕಾಗಿತ್ತು. ಅವತ್ತು ಇಡೀ ದಿನ ಆ ಕಾರ್ಯಕ್ರಮವನ್ನು ಸೊಗಸಾಗಿ ನಡೆಸಿಕೊಟ್ಟಿದ್ದರು ಶಿಲ್ಪ. ಪ್ರತಿವಾರ ಸೆಲಬ್ರಿಟಿಗಳ ಇಂಟರ್ ವ್ಯೂ ಕಾರ್ಯಕ್ರಮ ‘ನಾನು ನನ್ನ ಸಿನಿಮಾ’ ನಡೆಸಿಕೊಡುತ್ತಿದ್ದುದೂ ಕೂಡ ಇವರೇ.


ಮಾಧ್ಯಮದಲ್ಲಿ ಹೆಣ್ಣುಮಕ್ಕಳಿಗೆ ಇನ್ನೂ ಹೆಚ್ಚಿನ ಅವಕಾಶಗಳು ಸಿಗಬೇಕು. ಒಂದು ಜೀವಕ್ಕೆ ಜನ್ಮ ಕೊಡೋ ಹೆಣ್ಣಿಗೆ ಎಂಥಾ ದೊಡ್ಡ ಜವಬ್ದಾರಿಯನ್ನೂ ಸಹ ನಿಭಾಯಿಸಬಲ್ಲ ಶಕ್ತಿ ಇದೆ. ಜೊತೆಗೆ ಈಗ ಮಾಧ್ಯಮಕ್ಕೆ ಬರೋರು ಕೆಲಸ ಮಾಡುವ ಆಸಕ್ತಿಯಿಂದ ಬರಬೇಕು ಆ್ಯಂಕರ್ ಗಳಿಗೇನು ಕೋಡು ಇರಲ್ಲ..! ಆ್ಯಂಕರ್ ಅಂತಲ್ಲ, ಯಾವುದೇ ಕೆಲಸ ಮಾಡಲು ರೆಡಿ ಆಗಿರಬೇಕು, ಡೆಸ್ಕ್‍ನಲ್ಲಿ, ಫೀಲ್ಡ್‍ನಲ್ಲಿ ಹೆಚ್ಚು ಕಲಿಯುವ ಅವಕಾಶಗಳು ಇರುತ್ತವೆ ಎಂಬುದು ಶಿಲ್ಪ ಅವರ ಕಿವಿಮಾತು.  ಪುಸ್ತಕಗಳನ್ನು ಓದೋದು, ನಾಟಕ ನೋಡೋದು, ಸಂಗೀತ ಕೇಳೋದು ಇವರ ಹವ್ಯಾಸ.


2016ರಲ್ಲಿ ಸಮಯ ಚಾನಲ್‍ನ್ನು ಬಿಟ್ಟು ತನ್ನೂರು ಮೈಸೂರಿಗೆ ಹೋಗಿದ್ದಾರೆ. ಫ್ಯಾಮಿಲಿಗೆ ಟೈಮ್ ಕೋಡೋದು ಮುಖ್ಯವಾಗಿದ್ದರಿಂದ ರಾಜಧಾನಿಯಿಂದ ತಾತ್ಕಾಲಿಕ ದೂರವಿರುವ ಶಿಲ್ಪ ಮೈಸೂರಲ್ಲಿ ನ್ಯೂಸ್ 1 ಕನ್ನಡದದಲ್ಲಿ ಚೀಫ್ ಆ್ಯಂಕರ್ ಆಗಿದ್ದಾರೆ.
ಸುಮಾರು 10ವರ್ಷದ ಅನುಭವವಿರುವ ಇವರು ಇಲ್ಲಿತನಕ ಕಾರ್ಯನಿರ್ವಹಿಸಿದ ಎಲ್ಲಾ ಸುದ್ದಿವಾಹಿನಿಗಳಲ್ಲಿಯೂ ನಾನಾರೀತಿಯ ಕಾರ್ಯಕ್ರವಗಳನ್ನು ಡಿಸ್ಕಷನ್‍ಗಳನ್ನು ನಡೆಸಿಕೊಟ್ಟಿದ್ದಾರೆ. ಪೊಲಿಟಿಕಲ್ ಡಿಬೇಟ್ ಅಂದ್ರೆ ಇವರಿಗೆ ಅಚ್ಚುಮೆಚ್ಚು.


ಮೈಸೂರಿನ ಸಂಸ್ಥೆಯೊಂದು ‘ಮೈಸೂರು ಹುಡುಗಿ’ ಎಂದು ಗೌರವಿಸಿದೆ. ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ಪುಟ್ಟಹಳ್ಳಿ ಆಯರಹಳ್ಳಿಯಿಂದ ಬಂದು ಮಾಧ್ಯಮ ಕ್ಷೇತ್ರದಲ್ಲಿ ತನ್ನದೇಯಾದ ಛಾಪುಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಶಿಲ್ಪ. ಮಾಧ್ಯಮದ ಗಂಧಗಾಳಿಯೂ ಇಲ್ಲದೇ ಈ ಮಟ್ಟಕ್ಕೆ ಬೆಳೆದಿದ್ದು ನಿಜಕ್ಕೂ ಸಾಧನಯೇ.


ಪಿಯುಸಿ ದಿನಗಳಿಂದಲೇ ಮಾಧ್ಯಮದಲ್ಲಿ ಗುರುತಿಸಿಕೊಂಡಿದ್ದ ಶಿಲ್ಪ ಅವರಿಗೆ ಇವತ್ತಿಗೂ ರಾಜ್ಯಮಟ್ಟದ ವಾಹಿನಿಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಮುಂದೆ ಮತ್ತೆ ರಾಜ್ಯಮಟ್ಟದ ಸುದ್ದಿವಾಹಿನಿಗಳಲ್ಲಿ ಖಂಡಿತಾ ನಾವು ಇವರನ್ನು ನೋಡಬಹುದು.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

10 ನವೆಂಬರ್ 2017 : ಈಶ್ವರ್ ದೈತೋಟ

11 ನವೆಂಬರ್ 2017 : ಭಾವನ

12  ನವೆಂಬರ್ 2017 : ಜಯಶ್ರೀ ಶೇಖರ್

13 ನವೆಂಬರ್ 2017 : ಶೇಷಕೃಷ್ಣ

14 ನವೆಂಬರ್ 2017 : ಶ್ರೀಧರ್ ಶರ್ಮಾ

15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

16 ನವೆಂಬರ್ 2017 : ಅರವಿಂದ ಸೇತುರಾವ್

17 ನವೆಂಬರ್ 2017 : ಲಿಖಿತಶ್ರೀ

18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

19 ನವೆಂಬರ್ 2017 : ಅಪರ್ಣಾ

20 ನವೆಂಬರ್ 2017 :  ಅಮರ್ ಪ್ರಸಾದ್

21 ನವೆಂಬರ್ 2017 :   ಸೌಮ್ಯ ಮಳಲಿ

22 ನವೆಂಬರ್ 2017 :  ಅರುಣ್ ಬಡಿಗೇರ್

23ನವೆಂಬರ್ 2017 :  ರಾಘವ ಸೂರ್ಯ

24ನವೆಂಬರ್ 2017 :  ಶ್ರೀಲಕ್ಷ್ಮಿ

25ನವೆಂಬರ್ 2017 : ಶಿಲ್ಪ ಕಿರಣ್

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...