ಕೆಲಸ ಸಿಗೋ ಮೊದಲು ಬಡ ಹುಡುಗಿಯನ್ನು ಪ್ರೀತಿಸಿ, ಅವಳ ಜೊತೆ ಸುತ್ತಿ, ಲೈಂಗಿಕ ಸಂಪರ್ಕವನ್ನೂ ಹೊಂದಿ, ನಂತರ ಸರ್ಕಾರಿ ಕೆಲಸ ಸಿಕ್ಕಮೇಲೆ ಅವಳನ್ನು ಬಿಟ್ಟು ಇನ್ನೊಬ್ಬಳನ್ನು ಮದುವೆ ಆಗಿದ್ದಾನೆ ಇಲ್ಲೊಬ್ಬ ಭೂಪ.
ಹೌದು, ಇದು ನಡೆದಿರೋದು ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ. ಜಿಲ್ಲೆಯ ಗುಬ್ಬಿ ತಾಲೂಕು ಪಂಚಾಯ್ತಿಯಲ್ಲಿ ಕೆಲಸ ಮಾಡ್ತಿದ್ದ ಮಂಜುನಾಥ್ ಎಂಬಾತನೇ ಹುಡುಗಿಗೆ ಮೋಸ ಮಾಡಿದ ಆರೋಪ ಎದುರಿಸ್ತಾ ಇರೋನು. ಅರೆಗುಜ್ಜಹಳ್ಳಿಯ ಗೌರಮ್ಮ ಎಂಬಾಕೆಯನ್ನು 9 ವರ್ಷದಿಂದ ಪ್ರೀತಿಸಿ, ಆಕೆಯನ್ನು ಲೈಂಗಿಕವಾಗಿಯೂ ಬಳಸಿಕೊಂಡಿದ್ದನಂತೆ. ಸರ್ಕಾರಿ ಉದ್ಯೋಗ ಸಿಕ್ಕಮೇಲೆ ಗೌರಮ್ಮಳನ್ನು ದೂರಮಾಡಿದ್ದಾನೆ..!
ಆಗ ಗೌರಮ್ಮ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ…! ಬಳಿಕ ದೇವಸ್ಥಾನದಲ್ಲಿ ಹಾರ ಬದಲಿಸಿ ಇಬ್ಬರಿಗೂ ಮದುವೆ ಮಾಡಲಾಗಿತ್ತಂತೆ. ಆದರೆ, ಮಂಜುನಾಥ್ ಕಲ್ಯಾಣ ಮಂಟಪದಲ್ಲಿ ಮದ್ವೆ ಮಾಡಿಕೊಡ್ಬೇಕು ಅಂತ ಬೇಡಿಕೆ ಇಟ್ಟಿದ್ದನಂತೆ. ಕಲ್ಯಾಣ ಮಂಟಪ ಬುಕ್ ಮಾಡಿ, ಮಂಜುನಾಥ್ ಮನೆಗೆ ಹೋದಾಗ ಮಂಜುನಾಥ್ ಇರಲಿಲ್ಲ. ಮನೆ ಬೀಗಹಾಕಿತ್ತು. ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿದಾಗ ಮಂಜುನಾಥ್ ಬೇರೊಬ್ಬಳನ್ನು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾನೆಂದು ತಿಳಿಸಿದ್ದಾರೆ.