ಮಾಜಿ ಸಂಸದೆ ರಮ್ಯಾ ಅವರ ಹೆಸರಲ್ಲಿ ಅಭಿಮಾನಿಯೊಬ್ರು ಮಂಡ್ಯದಲ್ಲಿ ರಮ್ಯಾ ಕ್ಯಾಂಟೀನ್ ತೆರೆದಿದ್ದಾರೆ. ದೆಹಲಿಯಲ್ಲಿರೋ ರಮ್ಯಾ ಟ್ವೀಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ 15 ವರ್ಷಗಳಿಂದ ಮಂಡ್ಯದಲ್ಲಿ ರಸ್ತೆ ಬದಿ ಕ್ಯಾಂಟೀನ್ ನಡೆಸುತ್ತಿರುವ ರಮ್ಯಾ ಅಭಿಮಾನಿಯೊಬ್ಬರು ರಮ್ಯಾ ಸಂಸದೆ ಆಗಿರುವಾಗ ಮಾಡಿದ ಕೆಲಸವನ್ನು ಮೆಚ್ಚಿ ಡಿಸೆಂಬರ್ 03ರಂದು ತಮ್ಮ ಕ್ಯಾಂಟೀನ್ ಅನ್ನು ‘ ರಮ್ಯಾ ಕ್ಯಾಂಟೀನ್’ ಎಂಬ ಹೆಸರಿನಲ್ಲಿ ಹೊಸದಾಗಿ ಆರಂಭಿಸಿದ್ದಾರೆ.

ಅಶೋಕನಗರದ ತ್ರಿವೇಣಿ ರಸ್ತೆಯಲ್ಲಿ ಈ ಕ್ಯಾಂಟೀನ್ ಇದೆ. ಮಂಡ್ಯ ವಿಮ್ಸ್ ಆಸ್ಪತ್ರೆ ಬಳಿ ಈ ಕ್ಯಾಂಟೀನ್ ಇರೋದ್ರಿಂದ ಅಲ್ಲಿಗೆ ಬರುವ ಬಡವರಿಗೆ ತುಂಬಾ ಅನುಕೂಲವಾಗಿದೆ. ಕೇವಲ 10 ರೂಪಾಯಿಗೆ ಊಟ, ತಿಂಡಿ ನೀಡ್ತಿದ್ದಾರೆ. ಈ ಕ್ಯಾಂಟೀನ್ ಬಗ್ಗೆ ತಿಳಿದ ರಮ್ಯಾ, ತಾವೊಮ್ಮೆ ಕ್ಯಾಂಟೀನ್‍ಗೆ ಭೇಟಿ ನೀಡಿ ಊಟ ಮಾಡೋದಾಗಿ ಟ್ವೀಟ್ ಮಾಡಿದ್ದಾರೆ.

