ಅದು ಗುಲ್ಬರ್ಗಾ ಜಿಲ್ಲೆಯ ಒಂದು ಕೊಳೆಗೇರಿ(ಸ್ಲಂ)..! ಅಲ್ಲೊಂದು, ತಲತಲಾಂತರದಿಂದ ಚಮ್ಮಾರ ಕೆಲಸ ಮಾಡಿಕೊಂಡು ಬಂದಿದ್ದ ಕುಟುಂಬ..! ದಲಿತರೆಂಬ ಹಣೆಪಟ್ಟಿ ಜೀವನದ ಸುತ್ತಲೂ ಬೇಲಿಯನ್ನೇ ವಿಧಿಸಿತ್ತು..! ಇಂಥಾ ಕುಟುಂಬದಲ್ಲಿ ಹುಟ್ಟಿದ ಮಹಿಳೆಯ ಯಶೋಗಾಥೆ ಇದು..! ಎಲ್ಲರೂ ಓದಲೇಬೇಕಾದ ರಿಯಲ್ ಸ್ಟೋರಿ..! ಎಂಥವರಿಗೂ ಪ್ರೇರಣೆ ಆಗಬಲ್ಲ ಸಾಧಕಿಯ ಲೈಫ್ ಸ್ಟೋರಿ ಇಲ್ಲಿದೆ..!
ಅವರು ವಿಜಯಲಕ್ಷ್ಮೀ ದೇಶಮನೆ. ಹುಟ್ಟಿದ್ದು ಕಡುಬಡತನದ ಜೀವನ ನಡೆಸುತ್ತಿದ್ದ ದಲಿತ ಕುಟುಂಬವೊಂದರಲ್ಲಿ..! ಇವರಿಗೆ ಆರುಜನ ಸೋದರಿಯರು, ಒಬ್ಬ ಸೋದರ..! ಇಷ್ಟೊಂದು ದೊಡ್ಡ ಕುಟುಂಬದಲ್ಲಿ ಹುಟ್ಟಿದ ವಿಜಯಲಕ್ಷ್ಮೀಯವರ ತಂದೆ ಮಿಲ್ ನಲ್ಲಿ ಕೆಲಸ ಮಾಡೋ ಕೂಲಿ..! ತಾಯಿ ತರಕಾರಿ ಮಾರುವಾಕೆ..! ಅಪ್ಪ ಅಮ್ಮನ ದುಡಿಮೆ ದೊಡ್ಡ ಕುಟಂಬದ ಹೊಟ್ಟೆ ತುಂಬಲು ಸಾಕಾಗ್ತಾ ಇರಲ್ಲ..! ಆಗ ವಿಜಯಲಕ್ಷ್ಮೀ ಅವರೂ ಕೂಡ ತರಕಾರಿ ಮಾರಾಟ ಮಾಡೋಕೆ ಶುರುಮಾಡಲೇ ಬೇಕಾಗುತ್ತೆ..! ಬೇರೆ ದಾರಿಯಿಲ್ಲದೆ ತರಕಾರಿ ವ್ಯಾಪಾರ ಮಾಡುತ್ತಾರೆ ವಿಜಯಲಕ್ಷ್ಮೀ..!
ಕಿತ್ತು ತಿನ್ನುವ ಬಡತನದ ನಡುವೆ ವೈದ್ಯಳಾಗಿ ಜನಸೇವೆ ಮಾಡಬೇಕೆಂಬ ಆಸೆ..! ಬಡತನವನ್ನು ಲೆಕ್ಕಿಸದೆ ಹಂಗೋ ಹಿಂಗೋ ಈಗಿನ ದ್ವಿತೀಯ ಪಿಯುಸಿಯನ್ನು ಮುಗಿಸುತ್ತಾರೆ..! ವೈದ್ಯರಾಗಬೇಕೆಂಬ ಕನಸನ್ನು ಕಟ್ಟಿಕೊಂಡಿದ್ದ ವಿಜಯಲಕ್ಷ್ಮೀಯವರಿಗೆ ನಿಜವಾದ ಅಗ್ನಿಪರೀಕ್ಷೆ ಈಗ ನಡೆಯುತ್ತೆ..! ಎಂಬಿಬಿಎಸ್ ಮಾಡೋದು ಅಂದ್ರೆ ಸುಮ್ನೇನಾ..?!ಅದಕ್ಕೆ ಬೇಕಾದಷ್ಟು ದೊಡ್ಡ ಮೊತ್ತದ ಹಣವನ್ನು ಹೊಂದಿಸುವುದಾದರೂ ಹೇಗೆ..!? ಆದರೆ ಈ ವಿಜಯಲಕ್ಷ್ಮೀಯವರ ಆಸಗೆ ನೀರೆರೆದು ಆಸೆ ನೆರವೇರುವಂತೆ ಮಾಡ್ತಾರೆ ಅವರ ತಾಯಿ..! ವಿಜಯಲಕ್ಷ್ಮೀಯವರ ಸಾಧನೆಗೆ ಅವರ ತಾಯಿಯೇ ಬೆನ್ನೆಲುಬು…! ಮಗಳ ಕನಸನ್ನು ನನಸಾಗಿಸಲು ಆ ಅಮ್ಮಾ.. ತನ್ನ ಮಾಂಗಲ್ಯ ಸರವನ್ನೇ (ತಾಳಿ ಸರ) ಅಡಮಾನ ಇಟ್ಟು ಸಾಲ ತಗೊಂಡು ಮಗಳಿಗೆ ಕೊಡ್ತಾರೆ..! ಮಗಳು ವಿಜಯಲಕ್ಷ್ಮೀ ಅಮ್ಮನ ತ್ಯಾಗವನ್ನು ನೆನೆಯುತ್ತಲೇ ಎಂಬಿಬಿಎಸ್ ಪ್ರವೇಶ ಪರೀಕ್ಷೆಯನ್ನು ಬರೆದು ಕೆಎಂಸಿ ಹುಬ್ಬಳ್ಳಿಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸೇರಿಯೇ ಬಿಡ್ತಾರೆ..!
ಅಂತೂ-ಇಂತೂ ಅಮ್ಮನ ಮಾಂಗಲ್ಯ ಸೂತ್ರ ಮಗಳು ವಿಜಯಲಕ್ಷ್ಮಿಯವರನ್ನು ಎಂಬಿಬಿಎಸ್ ಪದವಿಗೆ ಸೇರಿಸಿಯೇ ಬಿಟ್ಟಿತ್ತು..! ಆದರೆ ಇಲ್ಲಿ ಮತ್ತೊಂದು ದೊಡ್ಡ ಸವಾಲಿ ಎದುರಾಗುತ್ತೆ..! ಬಾಲ್ಯದಿಂದಲೂ ಕನ್ನಡ ಮಾಧ್ಯಮದಲ್ಲಿ ಕಲಿತಿದ್ದ ವಿಜಯಲಕ್ಷ್ಮಿಯವರಿಗೆ ಇಂಗ್ಲೀಷ್ ಮಾಧ್ಯಮದ ಪಾಠ ಕಬ್ಬಿಣದ ಕಡಲೆಕಾಯಿ ಆಗಿಬಿಡತ್ತೆ..! ಪರಿಣಾಮ ಮೊದಲನೇ ವರ್ಷದ ಎಂಬಿಬಿಎಸ್ ಪದವಿಯಲ್ಲಿ ಅನುತ್ತೀರ್ಣರಾಗುತ್ತಾರೆ..! ಮೊದಲ ವರ್ಷದಲ್ಲಿ ಅನುತ್ತೀರ್ಣರಾದ ಇವರು ನನ್ನಿಂದ ಎಂಬಿಬಿಎಸ್ ಮಾಡೋಕೆ ಆಗಲ್ಲ ಅಂತ ಹಿಂದೆ ಸರಿಯಲಿಲ್ಲ..! ಆಗಿದ್ದಾಗಲೀ ಅಮ್ಮ ಮಾಂಗಲ್ಯ ಸೂತ್ರವನ್ನು ಅಡಮಾನವಿಟ್ಟು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ..! ನಾನು ಎಂಬಿಬಿಎಸ್ ಮಾಡದೇ ಹೋದ್ರೆ ಅಮ್ಮನಿಗೆ ಮೋಸ ಮಾಡಿದಂತಾಗುತ್ತೆ ಅಂತ ವಿಜಯಲಕ್ಷ್ಮೀಯವರು ಕಷ್ಟಪಟ್ಟು ಓದ್ತಾರೆ..! ಅವರಿಗೆ ಅಲ್ಲಿನ ಅಧ್ಯಾಪಕರ ಸಹಕಾರವೂ ಸಿಗುತ್ತೆ..! ಆರಂಭದಲ್ಲಿ ಅನುತ್ತೀರ್ಣರಾಗಿದ್ದ ವಿಜಯಲಕ್ಷ್ಮೀಯವರು ಎಂಬಿಬಿಎಸ್ ಮುಗಿಸಿದ್ದು ಮೊದಲ ರ್ಯಾಂಕಿನೊಂದಿಗೆ..! ಸೋಲೇ ಗೆಲುವಿನ ಮೆಟ್ಟಿಲು ಅನ್ನೋದು ಇದಕ್ಕೇ ಅಲ್ವಾ..?! ಮೊದಲ ರ್ಯಾಂಕಿನೊಂದಿಗೆ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ವಿಜಯಲಕ್ಷ್ಮೀ ಅವರು ಡಾ| ವಿಜಯಲಕ್ಷ್ಮೀ ದೇಶ್ಮನೆ ಆಗಿಬಿಟ್ರು..! ನಂತರ `ಅನ್ಕೊಲೊಗಿಸ್ಟ್’ ಅಂದರೆ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡುವ ವಿಷಯದಲ್ಲಿ ಎಂಎಸ್ ಕೂಡ ಮಾಡ್ತಾರೆ..! ಅದರಲ್ಲೂ ಸ್ತನ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಸ್ಪೆಷಲೈಸೇಶನ್ ಕೂಡ ಮಾಡ್ತಾರೆ..!
ಹೀಗೆ ಕೊಳೆಗೇರಿಯಲ್ಲಿ ಹುಟ್ಟಿ ಬೆಳೆದ ಡಾ| ವಿಜಯಲಕ್ಷ್ಮೀ ದೇಶ್ಮನೆ ಬೆಂಗಳೂರಿನಲ್ಲಿರುವ `ಕಿದ್ವಾಯಿ ಇನ್ಸ್ಟಿಟ್ಯೂಟ್ ಆಫ್ ಅನ್ಕೊಲೊಗಿಸ್ಟ್’ ನಲ್ಲಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ..! ಇಂದು ಕರ್ನಾಟಕ ಕ್ಯಾನ್ಸರ್ ಸೊಸೈಟಿಯಲ್ಲಿ ತಿಂಗಳ 15ದಿನ ಕ್ಯಾನ್ಸರ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ..! ಇವರ ಸೋದರ ವಕೀಲರಾಗಿದ್ದಾರೆ..! ಸೋದರಿಯರಾದ ಸಮಿತಾ, ಜಾಗೃತಾ, ನಾಗರತ್ನ, ಜಯಶ್ರೀ ಪಿಎಚ್ಡಿ ಹೊಂದಿದವರಾಗಿದ್ದಾರೆ..!
ಹೇಗಿದ್ದವರು ಹೇಗಾಗಿದ್ದಾರೆ ಅಲ್ವಾ..?! ಬಡತನದಲ್ಲಿ ಬೆಳೆದ ವಿಜಯಲಕ್ಷ್ಮೀಯವರಿಂದು ಹೆಸರಾಂತ ನಿವೃತ್ತ ವೈದ್ಯರು..! ಭಾರತದ ಪ್ರಮುಖ ಕ್ಯಾನ್ಸರ್ ತಜ್ಞೆಯೂ ಇವರೇ..! ಕಷ್ಟಪಟ್ಟರೆ ಒಂದಲ್ಲಾ ಒಂದು ದಿನ ಫಲ ಸಿಕ್ಕೇ ಸಿಗುತ್ತೆ..! ಸಾಧಿಸೋ ಛಲ ಇದ್ದರೆ ಗುರಿ ಮುಟ್ಟುವುದು ಕಷ್ಟವಲ್ಲ ಎಂಬುದಕ್ಕೆ ವಿಜಯ ಲಕ್ಷ್ಮೀಯವರ ಲೈಫ್ ಸ್ಟೋರಿಗಿಂತ ಬೇರೆ ಉದಾಹರಣೆ ಬೇಕೆ..?!
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಊಟಕ್ಕೆ ಆರ್ಡರ್ ಮಾಡಿದವಳು ಬೆಂಗಳೂರನ್ನೇ ಬಿಟ್ಟು ಹೋಗಿದ್ದೇಕೆ..?
ಇವರು ಬೆಂಗಳೂರಿನ ಉಕ್ಕಿನ ಮನುಷ್ಯ..! ಇಂಥಾ ಕೆಲಸ ಮಾಡೋರು ತುಂಬಾ ಅಪರೂಪ..!
ಈತನೇ ನೋಡಿ ವಿಶ್ವದ ಅತಿ ಶ್ರೀಮಂತ ಕ್ಷೌರಿಕ..! ಈತನ ಬಳಿ ಇವೆ 250ಕ್ಕೂ ಹೆಚ್ಚು ಐಶಾರಾಮಿ ಕಾರುಗಳು..!
ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!
ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!
ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!
ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…
ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!
ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!